ಹುಳಿಯಾರು ಪಟ್ಟಣದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕಮಾಸದ ಅಮವಾಸ್ಯೆಯ ದಿನವಾದ ಶನಿವಾರ ಸಂಜೆ ಅಪಾರಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಕಾರ್ತಿಕ ದೀಪೋತ್ಸವ ವೈಭವಯುತವಾಗಿ ಜರುಗಿತು.
![]() |
ಹುಳಿಯಾರಿನ ಶ್ರೀವೀರಭದ್ರೇಶ್ವರ ಸ್ವಾಮಿಯನ್ನು ಕಾತೀಕೋತ್ಸವದ ಅಂಗವಾಗಿ ಬಗೆಬಗೆಯ ಹೂಗಳಿಂದ ಅಲಂಕರಿಸಿರುವುದು. |
ದೀಪೋತ್ಸವದ ಅಂಗವಾಗಿ ಶನಿವಾರ ಮುಂಜಾನೆಯೇ ಅರ್ಚಕರಾದ ಮಲ್ಲಿಕಾರ್ಜುನಯ್ಯ ಹಾಗೂ ವೀರೇಶ್ ಸಂಗಡಿಗರಿಂದ ಸ್ವಾಮಿಗೆ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ,ಸಹಸ್ರನಾಮಾರ್ಚನೆ ನಡೆದು, ಸಂಜೆ ವೇಳೆ ಸ್ವಾಮಿಯನ್ನು ವಿವಿಧ ಹೂ,ಹಾರಗಳಿಂದ ಅಲಂಕರಿಸಿ, ದೇವಾಲಯದ ಆವರಣದಲ್ಲಿ ಹಣತೆಗಳನ್ನು ಹಚ್ಚುವ ಮೂಲಕ ಮಹಾಮಂಗಳಾರತಿ ನಡೆಸಲಾಯಿತು. ಆಗಮಿಸಿದ್ದ ಭಕ್ತರು ಸ್ವಾಮಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಭಕ್ತಾಧಿಗಳಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಹುಳಿಯಾರು,ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಪಾರ ಸಂಖ್ಯೆ ಭಕ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ