ತಿಪಟೂರಿನಿಂದ ಗೌರಿಬಿದನೂರಿಗೆ ಹೋಗುತ್ತಿದ್ದ ಸಿದ್ದೇಶ್ವರ ಬಸ್ ಸಮೀಪದ ಹರೇನಹಳ್ಳಿ ಗೇಟ್ ಬಳಿಯ ರಸ್ತೆಗುಂಡಿ ಸಮಸ್ಯರಯಿಂದ ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಮೀ ದೂರದವರೆಗೆ ಚಲಿಸಿ ನಿಂತಿದ್ದು, ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ಅವಘಡ ಸಂಭವಿಸದೆ ರಸ್ತೆ ಬದಿ ನಿಂತಿರುವುದು. |
ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಹಳ್ಳಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಗುಂಡಿಯಲ್ಲಿ ಹಾದುಹೋದಾಗ ರಾಡ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿದೆ. ಎಡಭಾಗದಲ್ಲೇ ದೊಡ್ಡಗುಂಡಿಯಿದ್ದು ಅದೃಷ್ಠವಶಾತ್ ಗುಂಡಿಗೆ ಬೀಳುವ ಬಸ್ ಏಣು ಆಗದೆ ರಸ್ತೆಯಲ್ಲೇ ನಿಂತಿದ್ದರಿಂದ ಬಸ್ ತುಂಬ ಇದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಯಿತು. ರಸ್ತೆಯಲ್ಲಿನ ಗುಂಡಿಯೇ ಈ ಅವಘಡಗಳಿಗೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ