ಹುಳಿಯಾರು ಪಟ್ಟಣದ ವಸಂತನಗರ ಬಡಾವಣೆಯ ಶ್ರೀಕಾಳಿಕಾಂಭ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ವಿಶ್ವಕರ್ಮ ಸಮುದಾಯದವರಿಂದ ಕಡೇ ಕಾರ್ತಿಕದ ದೀಪೋತ್ಸವ ಕಾರ್ಯ ನಡೆಯಿತು.
ಹುಳಿಯಾರಿನ ಶ್ರೀಕಾಳಿಕಾಂಭ ದೇವಿ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದವರಿಂದ ದೀಪೋತ್ಸವ ನಡೆಯಿತು. |
ಕಾಳಿಕಾಂಭದೇವಿಗೆ ಮಂಗಳವಾರ ಮುಂಜಾನೆ ಅಭಿಷೇಕ,ಅರ್ಚನೆ ನಡೆಸಿ, ಸಂಜೆ ವೇಳೆಗೆ ದೇವಾಲಯದಲ್ಲಿನ ಅಗ್ನಿಕುಂಡದ ಸುತ್ತ ದೀಪಗಳನ್ನು ಹಚ್ಚಿ, ರಂಗೋಲಿಯಿಟ್ಟು ಅಲಂಕರಿಸಲಾಗಿತ್ತು. ಉತ್ಸವಮೂರ್ತಿ ದೇವಿಯನ್ನು ಸಕಲ ವಾದ್ಯ ಸಮೇತ ಹೊರಡಿಸಿ ದೀಪವನ್ನು ಅರ್ಧಕ್ಕೆ ಇಳಿಸಿ ಮಹಾಮಂಗಳಾರತಿ ನಡೆಸಲಾಯಿತು. ಈ ವೇಳೆ ಅಧ್ಯಕ್ಷರಾದ ಅಚಾರ್ ರಮೇಶಣ್ಣ,ಭಗವಂತಾಚಾರ್, ಚಂದ್ರಶೇಖರಾಚಾರ್,ಮೂರ್ತಿ,ಲಕ್ಷ್ಮಿನಾರಾಯಣ, ನಟೇಶ್, ವಸಂತನಗರ ಬಡಾವಣೆಯ ನಿವಾಸಿಗಳು ಸೇರಿದಂತೆ ವಿಶ್ವಕರ್ಮ ಸಮುದಾಯದ ಅಪಾರ ಸಂಖ್ಯೆ ಭಕ್ತಾದಿಗಳು ಆಗಮಿಸಿದ್ದು ಅಲಂಕೃತ ದೇವಿಯ ದರ್ಶನ ಪಡೆದರು. ವಿಶ್ವಕರ್ಮ ಸಮುದಾಯದವರು ಭಕ್ತರಿಗಾಗಿ ಪ್ರಸಾದ ವಿನಿಯೋಗ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ