ಹುಳಿಯಾರು ಪಟ್ಟಣದ ಗಾಂಧೀಪೇಟೆಯ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಶನಿವಾರದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು ಆಕರ್ಷಕವಾಗಿತ್ತು.
ಕಾರ್ತೀಕ ಶನಿವಾರದ ಪ್ರಯುಕ್ತ ಅಲಂಕೃತವಾದ ಶನೇಶ್ವರಸ್ವಾಮಿ. |
ಶನಿವಾರ ಮುಂಜಾನೆ ಸ್ವಾಮಿಗೆ ಅಭಿಷೇಕ,ಅರ್ಚನೆ ನಡೆಸಿ ವಿಶೇಷವಾಗಿ ಅಲಂಕರಿಸಿ ವಿವಿಧ ಪೂಜೆಗಳನ್ನು ನಡೆಸಲಾಯಿತು. ಕಾರ್ತೀಕ ಶನಿವಾರವಾಗಿದ್ದರಿಂದ ಬೆಳಗಿನಿಂದಲೂ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಲಂಕೃತ ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿ, ಎಳ್ಳುಬತ್ತಿ ಹಚ್ಚುತ್ತಿದ್ದರು. ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯವರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ