ಭಕ್ತಿಗೆ ಹಲವಾರು ದಾರಿಗಳಿದ್ದು, ಇವರುಗಳು ಬರೋಬ್ಬರಿ 500 ಕಿ.ಮೀ ದೂರವನ್ನು ಸುದೀರ್ಘ ಪಾದಯಾತ್ರೆ ಮಾಡುವ ಮೂಲಕ ಯಡೆಯೂರು ಸಿದ್ದಲಿಂಗೇಶ್ವರನ ದರ್ಶನ ಮಾಡುತ್ತಾ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ. ಕಳೆದ 39 ವರ್ಷದಿಂದ ಗದಗ, ಬಾಗಲಕೋಟೆ, ಧಾರವಾಡ,ಹಾವೇರಿ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಈ ಭಾಗದ ಭಕ್ತಾದಿಗಳು ಜಾತಿಮತ ಭೇದವಿಲ್ಲದೇ ಸಿದ್ದಲಿಂಗನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಹುಳಿಯಾರಿನ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಸಂಜೆ ಆಗಮಿಸಿದ್ದ ಉತ್ತರ ಕರ್ನಾಟಕ ಭಾಗದ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಾದಯಾತ್ರೆಗಳು ಪ್ರವಚನ ಆಲಿಸುತ್ತಿರುವುದು. |
ಧೋತಿ, ತಲೆಗೆ ಟೋಪಿ, ಕೊರಳಿಗೆ ಕೆಂಪು ವಸ್ತ್ರ ಧರಿಸಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಪದಗಳನ್ನು ತಾಳ ಹಾಕಿ ಹಾಡುತ್ತಾ, ಸಿದ್ಧಲಿಂಗೇಶ್ವರನ ಪೆÇೀಟೋ ಹಿಡಿದು, ವೃದ್ದರು,ವಯಸ್ಕರು ಎನ್ನದೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳ 500ರಕ್ಕೂ ಹೆಚ್ಚು ಪಾದಯಾತ್ರಿಗಳು ಲೋಕಕಲ್ಯಾಣದ ಸದುದ್ದೇಶದ ಸಂಕಲ್ಪ ಹೊಂದಿ ಪಾದಯಾತ್ರೆ ಮಾಡುತ್ತಿದ್ದಾರೆ.
ನವಲಗುಂದದ ಶಲವಡಿ,ದಾಟನಾಳದಿಂದ ಇದೇ ನವಂಬರ್ 5 ರಿಂದ ಪ್ರಾರಂಭವಾಗಿರುವ ಪಾದಯಾತ್ರೆ ನವಂಬರ್ 19 ರಂದು ತುಮಕೂರು ಜಿಲ್ಲೆಯ ಯಡೆಯೂರು ತಲುಪಿ, ನವಂಬರ್ 22 ರಂದು ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯ ಕಾರ್ತಿಕ ಮಾಸದ ಲಕ್ಷ ದೀಪೆÇೀತ್ಸವದಲ್ಲಿ ಭಾಗವಹಿಸುವುದರ ಮೂಲಕ ಕೊನೆಗೊಳ್ಳಲಿದ್ದು,ಸುಮಾರು 500 ಕಿ.ಮೀ ದೂರದ್ದಾಗಿದೆ.
ಶಲವಡಿಯ ಶ್ರಿಶೈಲಪ್ಪ ದಿವಂಗತ ಶಿರೋಳ ಅವರ ನೇತೃತ್ವದಲ್ಲಿ ಎಂಟತ್ತು ಮಂದಿಯಿದ್ದ ಪ್ರಾರಂಗೊಂಡ ಪಾದಯಾತ್ರೆ ಇಂದು 500 ರಕ್ಕೂ ಹೆಚ್ಚು ಪಾದಯಾತ್ರಿಗಳನೊಂದಿ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೆÇೀತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಅವಿಸ್ಮರಣೀಯ. ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ ಗದಗಿನಲ್ಲಿದ್ದು ಅಲ್ಲಿಂದ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೆÇೀತ್ಸವ ಕಾರ್ಯಕ್ರಮಕ್ಕೆ ಶರಣ ಸಮೂಹದೊಂದಿಗೆ ಪಾದಯಾತ್ರೆ ಮೂಲಕ ಆಗಮಿಸುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ.
ಯಡಿಯೂರಿನಲ್ಲಿ ನಿರ್ವಿಕಲ್ಪ ಸಮಾಧಿಗೊಂಡಿರುವ ಸಿದ್ದಲಿಂಗೇಶ್ವರರು ಈಗಲೂ ಅಲ್ಲಿ ಚೇತನ ಸ್ವರೂಪಿಗಳಾಗಿದ್ದಾರೆಂಬ ನಂಬಿಕೆಯೆ ಈ ಕ್ಷೇತ್ರದ ಪ್ರಭಾವ ಹೆಚ್ಚಲು ಕಾರಣ ಎನ್ನಲಾಗಿದೆ.ಶಲವಡಿಯ ಪೂಜ್ಯರಾದ ಶ್ರಿಶೈಲಪ್ಪ ಶಿರೂಳ ಅವರು ಯಡಿಯೂರು ಕ್ಷೇತ್ರಕ್ಕೆ ಪಾದಯಾತ್ರೆ ಪರಂಪರೆಗೆ ಚಾಲನೆ ನೀಡಿದವರಾಗಿದ್ದು ಇಂತಹ ಸುಕ್ಷೇತ್ರಕ್ಕೆ ಕಳೆದ 39 ವರ್ಷಗಳಿಂದಲೂ ನಿರಂತರವಾಗಿ ಪಾದ ಯಾತ್ರೆ ನಡೆಸುತ್ತಿರುವ ಭಕ್ತಪಡೆಯ ಕಾರ್ಯ ಅಭಿನಂದನೀಯ.
ಪಾದಯಾತ್ರೆಯ ಯಾತ್ರಿಗಳು ನಿತ್ಯ 35 ರಿಂದ 40 ಕಿ.ಮೀ. ಕ್ರಮಿಸಿ, ಸಂಜೆ ನಂತರ ಮೊದಲೇ ನಿಗದಿಯಾದ ಸ್ಥಳಗಳಲ್ಲಿ,ದೇವಾಲಯಗಳಲ್ಲಿ ತಂಗುತ್ತಾರೆ. ವಿಶ್ರಮಿಸಿಕೊಂಡು, ಭಜನೆಯನ್ನು ನಡೆಸಿ,ಭಕ್ತಾಧಿಗಳು ನೀಡುವ ಪ್ರಸಾದವನ್ನು ಸ್ವೀಕರಿಸಿ, ಮರುದಿನ ಮುಂಜಾನೆ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಾರೆ.
ಭಕ್ತಿಯಿಂದ ನೆನೆಸಿಕೊಂಡೆ ಬಡತನ ನೀಗುತ್ತದೆ, ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುತ್ತಾರೆ 79 ವರ್ಷದ ಹಿರಿಯ ಬೂದಪ್ಪ ನಾಯ್ಕರ್.
ಪಾದಯಾತ್ರೆಗೆ ಅವರವರೆ ತಮ್ಮ ಸ್ವಯಿಚ್ಚೆಯಿಂದ ಎಡೆಯೂರು ಸಿದ್ಧಲಿಂಗನ ಮೇಲಿನ ಭಕ್ತಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ನೆಡಿಗೆಯಿಂದ ದೇಹದಲ್ಲಿನ ಕಲ್ಮಶದ ಕರಗಿ ದೇಹ ಹಗುರಾಗುತ್ತದೆ ಎನ್ನುತ್ತಾರೆ ಸತತ 39 ವರ್ಷದ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಮಂಡಳಿಯ ಚೇರಮನ್ನರಾದ ಚಂದ್ರಶೇಖರ ಗಡಾದ.
ನವಲಗುಂದ ಶಲವಡಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯಲ್ಲಿ ದಾಟನಾಳ,ಶಾನವಾಡ,ಪಡೇಸೂರ,ಖನ್ನೂರ,ನಾಯ್ಕನೂರ,ಯಾವಗಲ್ಲ,ಕೋತಬಾಳ ಬೆಳವಣಕಿ, ಇಂಗಳಹಳ್ಳಿ,ಹೆಬ್ಬಾಳ, ನಿರಲಗಿ,ಬನ್ನಿಕೊಫ್ಫ,ಇಬ್ರಾಹಿಮಪೂರ,ಅಳಗವಾಡಿ,ಅಕ್ಕಿಗುಂದ,ಬಟ್ಟೂರ,ಗದಗ,ಬಾವನೂರ,ಬಾಗಲಕೋಟೆ,ಅರಕೇರಿ,ನೆಲವಡಿ,ಕಂಗವಳ್ಳಿ, ಹಾಗಲಕೇರಿ,ಮೇವುಂಡಿ ಸ್ಥಳಗಳ ಯಾತ್ರಿಕರಿದ್ದಾರೆ.
ಹೊಸದುರ್ಗದ ಕೆಲ್ಲೋಡಿನ ಮಾರ್ಗವಾಗಿ ಹುಳಿಯಾರಿಗೆ ಭಾನುವಾರ ಸಂಜೆ ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿಗೆ ಪಾದಯಾತ್ರಿಗಳು ಆಗಮಿಸಿದರು.
ಬ್ಯಾಂಕ್ ಮರುಳಯ್ಯ ದಂಪತಿಗಳು, ಜಲ್ಲಿಗೌಡರ ರುದ್ರಯ್ಯ, ಶಿಕ್ಷಕ ಜಗದೀಶ್,ಚನ್ನಬಸಪ್ಪ, ಯೋಗಮೂರ್ತಿ ಇತರರರು ಪಾದಯಾತ್ರಿಕರನ್ನು ಸತ್ಕರಿಸಿದರು. ಪಂಚಾಕ್ಷರಿ ಹಿರೇಮಠ್ ಅವರಿಂದ ಜ್ಞಾನದಾಸೋಹ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ