ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕವಿಕಾವ್ಯಗೋಷ್ಠಿ ಪಾಕ್ಷಿಕಕಾರ್ಯಕ್ರಮ ಇಂದು(ತಾ.10) ಸೋಮವಾರ ಸಂಜೆ ಪಟ್ಟಣದ ವಸಂತನಗರದ ಹೆಚ್.ಬಿ.ಗೋಪಾಲಕೃಷ್ಣ ಅವರ ನಿವಾಸದಲ್ಲಿ ನಡೆಯಲಿದೆ.
ಕನಕದಾಸ ಪ್ರೌಢಶಾಲೆಯ ಶಿಕ್ಷಕ ಚಂದ್ರಪ್ಪ ಗೋಷ್ಠಿಯ ಅಧ್ಯಕ್ಷತೆವಹಿಸಲಿದ್ದು, ಜೀವನ ಮೌಲ್ಯಗಳನ್ನು ಕುರಿತು ಆಂಗ್ಲಭಾಷಾ ಶಿಕ್ಷಕ ಹೆಚ್.ಸಿ.ಜಗದೀಶ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ನಿವೃತ್ತಶಿಕ್ಷಕ ಹಾಗೂ ಹೋಬಳಿ ಕಸಾಪದ ತ.ಶಿ.ಬಸವಮೂರ್ತಿಯವರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ