ಸುಕ್ಷೇತ್ರ ಬೆಲಗೂರಿನ ವೀರಪ್ರತಾಪ ಆಂಜನೇಯ ಸನ್ನಿಧಿಯಲ್ಲಿ ನಡೆಯಲಿರುವ ಹನುಮಜಯಂತಿ ಬ್ರಹ್ಮರಥೋತ್ಸವದ ಅಂಗವಾಗಿ ಮಹಾಲಕ್ಷ್ಮಿ ಪಾದುಕಾ ಯಾತ್ರೆ ಮಂಗಳವಾರ ಹುಳಿಯಾರು ಪಟ್ಟಣಕ್ಕೆ ಆಗಮಿಸಿದ್ದು, ಭಕ್ತರುಗಳು ಪಾದುಕೆಯನ್ನು ಮನೆಗಳಿಗೆ ಕರೆತಂದು ಲಕ್ಷ್ಮಿ ಪಾದುಕಾಪೂಜೆ ನಡೆಸಿ, ಭಕ್ತಿ ಸಮರ್ಪಿಸಿದರು.
ರಾಮಧೂತ ಶ್ರೀಬಿಂಧುಮಾಧವ ಸ್ವಾಮಿಗಳ ಪ್ರೇರಣೆಯಂತೆ ಶಕ್ತಿಪೀಠ ಕೊಡಚಾದ್ರಿಯಲ್ಲಿ ಮೊದಲ ಪೂಜೆ ಸಲ್ಲಿಸುವ ಮುಖಾಂತರ ಲಕ್ಷ್ಮಿಪಾದುಕೆಗಳ ಯಾತ್ರೆ ಪ್ರಾರಂಭವಾಗಿದೆ. ಅಂದಿನಿಂದ ಇದುವರೆಗೂ ಒಂದೂವರೆ ತಿಂಗಳ ಕಾಲ ಪಾದುಕೆಗಳ ಸಂಚಾರ ನಡೆಯುತ್ತಲೇ ಸಾಗಿದ್ದು ಆಹ್ವಾನಿತ ಭಕ್ತರ ಮನೆಗಳಿಗೆ ತೆರಳಿ ಪೂಜೆ,ಪ್ರಸಾದ ಸ್ವೀಕರಿಸುವ ಕಾರ್ಯ ನಡೆಯುತ್ತಿದೆ. ಈ ಪಾದುಕೆ ಯಾತ್ರೆ ಹನುಮಜಯಂತಿಯವರೆಗೆ ಸಾಗಿ ಕೊನೆಯದಾಗಿ ಚಾಮುಂಡೇಶ್ವರಿಯ ಸನ್ನಿದಾನದಲ್ಲಿ ಪರಿಸಮಾಪ್ತಿಯಾಗಲಿದೆ.
ಹುಳಿಯಾರಿನ ಬಡ್ಡಿಪುಟ್ಟರಾಜು, ನಾಗರಾಜು,ಗೋಪಾಲಸ್ವಾಮಿ, ಎಸ್.ಆರ್.ಎಸ್.ದಯಾನಂದ್,
ನರೇಂದ್ರಬಾಬು, ಡಾಬಾಸುರೇಶ್ ಸೇರಿದಂತೆ ಇನ್ನೂ ಕೆಲ ಭಕ್ತರು ತಮ್ಮ ಮನೆಗಳಿಗೆ ಪಾದುಕೆಗಳನ್ನು ಬರಮಾಡಿಕೊಂಡು ಆರತಿ ಮಾಡಿ, ಪೂಜೆ ಸಲ್ಲಿಸಿದರು. ನಂತರ ಸಂಜೆ ವೇಳೆಗೆ ಹುಳಿಯಾರಿನಿಂದ ಚಿ.ನಾ.ಹಳ್ಳಿಗೆ ಲಕ್ಷ್ಮಿ ಪಾದುಕೆಗಳ ಯಾತ್ರೆ ಸಾಗಿತು.
ಅರ್ಚಕರುಗಳಾದ ಲಕ್ಷ್ಮಿನಾರಾಯಣಭಟ್ರು,ಸುರೇಶ್ ಜೋಗಯ್ಯನವರ್,ನಾಗಭೂಷಣ್,ಲಕ್ಷ್ಮೀಶ್,ಸುನಿಲ್ ಅವರುಗಳು ಲಕ್ಷ್ಮಿಪಾದುಕೆಯೊಂದಿಗೆ ಸಂಚರಿಸುತ್ತಾ, ಪಾದುಕಾ ಯಾತ್ರೆಯಲ್ಲಿ ತೊಡಗಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ