ರೈತರು ಕೃಷಿ ಚಟುವಟಿಕೆಯಲ್ಲಿ ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಸಹಾಯಕಕೃಷಿ ನಿರ್ದೇಶಕ ಹೊನ್ನದಾಸೇಗೌಡ ಅವರು ತಿಳಿಸಿದರು.
ಹುಳಿಯಾರು ಸಮೀಪದ ಅವಳಗೆರೆಯಲ್ಲಿ ನಡೆದ ರಾಗಿಬೆಳೆ ಕ್ಷೇತ್ರೋತ್ಸವದಲ್ಲಿ ಸಹಾಯಕಕೃಷಿ ನಿರ್ದೇಶಕ ಹೊನ್ನದಾಸೇಗೌಡ ಉತ್ತಮವಾಗಿ ಬೆಳೆದ ರಾಗಿತಾಕು ವೀಕ್ಷಿಸಿದರು. |
ಹುಳಿಯಾರು ಸಮೀಪದ ಅವಳಗೆರೆ ಗ್ರಾಮದಲ್ಲಿ ತಾಲ್ಲೂಕು ಕೃಷಿ ಇಲಾಖೆವತಿಯಿಂದ ಒರಟುಧಾನ್ಯ ಅಭಿವೃದ್ಧಿಯೋಜನೆಯಡಿ ಅಯೋಜಿಸಿದ್ದ ರಾಗಿಬೆಳೆಕ್ಷೇತ್ರೋತ್ಸವದಲ್ಲಿ ಅವರು ರೈತರಿಗೆ ಮಾಹಿತಿ ನೀಡಿದರು.
ರಾಗಿ ಬಿತ್ತನೆ ಬೀಜದ ಆಯ್ಕೆಯಲ್ಲಿ ರೈತರು ಎಚ್ಚರವಹಿಸಿ ಬಿತ್ತನೆರಾಗಿಯನ್ನು ಆಯ್ಕೆ ಮಾಡಿ ಬಿತ್ತಿದರೆ ರಾಗಿ ಉತ್ತಮವಾಗಿ ಬೆಳೆದು ಫಸಲು ಸಿಗುತ್ತದೆ ಎಂದರು. ಅಲ್ಲದೆ ತಮ್ಮ ಇಲಾಖೆಯಿಂದ ರೈತರಿಗಾಗಿ ಅನೇಕ ಸೌಲಭ್ಯಗಳಿದ್ದು ಅವುಗಳನ್ನು ಪಡೆಯುವಂತೆ ತಿಳಿಸಿದರು. ಅತಿಯಾದ ರಾಸಾಯನಿಕ ಗೊಬ್ಬರದಿಂದ ಮನುಷ್ಯನ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ , ಕೃಷಿಯಲ್ಲಿ ಸಾವಯವ ಗೊಬ್ಬರದ ಬಳಕೆಯ ಬಗ್ಗೆ ಹಾಗೂ ಸಾವಯವಭಾಗ್ಯ ಯೋಜನೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಂಜುಳಾ, ಗ್ರಾಪಂ ಅಧ್ಯಕ್ಷೆ ಶಶಿಕಲಾ, ಸಹಾಕಯ ಕೃಷಿಅಧಿಕಾರಿಗಳಾದ ಕರಿಬಸವಯ್ಯ,ನೂರುಲ್ಲಾ, ಶಿವಣ್ಣ ಸೇರಿದಂತೆ ರೈತ ಅನುವುಗಾರರು ಹಾಗೂ ರೈತರು ಉಪಸ್ಥಿತರಿದ್ದರು.a
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ