ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಸನ್ನಿಧಾನದಲ್ಲಿ ಕಾರ್ತಿಕಅಮವಾಸ್ಯೆಯು ಭಕ್ತಾಧಿಗಳ ಶ್ರದ್ಧಾಭಕ್ತಿಯೊಂದಿಗೆ ವೈಭವಯುತವಾಗಿ ಜರುಗಿತು.
 |
| ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಸನ್ನಿದಾನದಲ್ಲಿ ಮಹಿಳೆಯರು ಆರತಿ ಸೇವೆ ನಡೆಸಿದರು. |
 |
| ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ಕಾರ್ತಿಕದ ಅಂಗವಾಗಿ ಶ್ರೀರಾಮದೇವರನ್ನು ಬಾಳೆದಿಂಡಿನಿಂದ ವಿಶೇಷವಾಗಿ ಅಲಂಕರಿಸಿರುವುದು. |
ಕಾರ್ತಿಕೋತ್ಸವದ ಅಂಗವಾಗಿ ಶ್ರೀ ರಾಮದೇವರ ಮೂಲ ವಿಗ್ರಹಕ್ಕೆ ಅಭಿಷೇಕ,ಅರ್ಚನೆ ನಡೆಯಿತು. ಬಾಳೆದಿಂಡಿನಿಂದ ಮಾಡಿದ್ದ ಕದಳಿ ಅಲಂಕಾರ ಗಮನಸೆಳೆಯಿತು. ಸಂಜೆ ವೇಳೆಗೆ ಉತ್ಸವ ಶ್ರೀರಾಮನ ಮೂರ್ತಿಯನ್ನು ಸಹ ವಿವಿಧ ಹೂ, ಹಾರಗಳಿಂದ ಅಲಂಕರಿಸಿ ಪೂಜೆ ನಡೆಸಲಾಯಿತು. ಮಹಿಳೆಯರು ಮನೆಯಿಂದ ಆರತಿಯನ್ನು ಸಿದ್ದಮಾಡಿಕೊಂಡು ದೇವಾಲಯದಲ್ಲಿಗೆ ತಂದು ಸ್ವಾಮಿಗೆ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು. ಗ್ರಾಮದ ಭಜನಾ ಮಂಡಳಿಯವರು ಭಜನಾಕಾರ್ಯಕ್ರಮ ನಡೆಸಿಕೊಟ್ಟರು.ಈ ವೇಳೆ ದೇವಾಲಯ ಸಮಿತಿಯವರು, ಊರಿನ ಗೌಡರು ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ