ಟಿಆರ್‍ಎಸ್‍ಆರ್ ಪ್ರೌಢಶಾಲೆ , ವಾಸವಿ ವಿದ್ಯಾಸಂಸ್ಥೆ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಹುಳಿಯಾರಿನ ಟಿಆರ್‍ಎಸ್‍ಆರ್ ಪ್ರೌಢಶಾಲೆಯಲ್ಲಿ ಅಯೋಜಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಪಿಎಸೈ ವೈ.ಘೋರ್ಪಡೆ ಮಕ್ಕಳಿಗೆ ಮಾಹಿತಿ ನೀಡಿದರು. |
ವಿದ್ಯಾರ್ಥಿಗಳಿಗೆ ಶ್ರದ್ಧೆ , ಆಸಕ್ತಿ ಮತ್ತು ಗುರಿಯಿದ್ದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಭವಿಷ್ಯದಲ್ಲಿ ಮುಂದೆಬರಲು ಸಾಧ್ಯ ಎಂದು ಪಿಎಸೈ ವೈ.ಘೋರ್ಪಡೆ ತಿಳಿಸಿದರು. ಶಾಲಾ ಮಕ್ಕಳು ಮೊಬೈಲ್ ಮತ್ತು ಇನ್ನಿತರೆ ಸಾಮಾಜಿಕತಾಣಗಳ ಬಗ್ಗೆ ಅತಿಯಾದ ಆಸಕ್ತಿ ಹೊಂದಿದಲ್ಲಿ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತದೆ ಎಂದರು. ಪೋಸ್ಕೋ ಕಾಯ್ದೆ ಬಗ್ಗೆ ತಿಳಿಸುತ್ತಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಈ ಕಾಯ್ದೆಯಡಿ ನೀಡುವ ಶಿಕ್ಷೆಯ ಬಗ್ಗೆ ತಿಳಿಸಿದರಲ್ಲದೆ, ಯಾವರೀತಿ ದೂರು ನೀಡಬೇಕು ಎಂಬುದನ್ನು ತಿಳಿಸಿದರು. ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆರಳುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು.
ಹುಳಿಯಾರು ಪೋಲಿಸ್ ಠಾಣೆ ಸಂಖ್ಯೆ 08133-256150, ಸಬ್ ಇಸ್ಪೆಕ್ಟರ್ 9480802900, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 9036421593 ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಸುತ್ತಮುತ್ತ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆದರೆ ದೂರು ನೀಡಬಹುದಾಗಿದೆ ಎಂದರು.
ಈ ವೇಳೆ ಮುಖ್ಯಶಿಕ್ಷಕರಾದ ರಮೇಶ್, ಮಹೇಶ್, ಸಂಸ್ಥೆಯ ಬಿ.ವಿ.ಶ್ರೀನಿವಾಸ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ