ಹುಳಿಯಾರು ಪಟ್ಟಣದ ಪುರಾಣಪ್ರಸಿದ್ಧ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಶನಿವಾರದಂದು ಕಾರ್ತಿಕ ಅಮವಾಸ್ಯೆಯ ಅಂಗವಾಗಿ ಗಣೇಶವಿಗ್ರಹಕ್ಕೆವಿಶೇಷ ಅಲಂಕಾರ ಮಾಡಿದ್ದು ಆಕರ್ಷಕವಾಗಿತ್ತು.
ಹುಳಿಯಾರಿನ ಪುರಾಣಪ್ರಸಿದ್ದ ಗಣೇಶನನ್ನು ವಿಶೇಷವಾಗಿ ಅಲಂಕರಿಸಿರುವುದು. |
ಅಮವಾಸ್ಯೆ ಅಂಗವಾಗಿ ಮುಂಜಾನೆಯಿಂದ ಸ್ವಾಮಿ ಅಭಿಷೇಕ,ಅರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿ, ಅರ್ಚಕ ರಾಜಣ್ಣ ಅವರು ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ಅಲಂಕೃತ ಸ್ವಾಮಿ ದರ್ಶನ ಪಡೆಯಲು ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಹಣ್ಣುಕಾಯಿ ಮಾಡಿಸಿದರು. ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ