ಹುಳಿಯಾರು ಪಟ್ಟಣದಲ್ಲಿ ಹಾದುಹೋಗಿರುವ ಹೆದ್ದಾರಿಗಳಲ್ಲಿ ಹೆಚ್ಚಿನ ಗುಂಡಿಗಳು ಬಿದ್ದಿದ್ದು ನಿತ್ಯ ಸಂಚಾರಕ್ಕೆ ತೊಂದರೆಯಾಗಿದ್ದು, ಮೀಸೆರಂಗಪ್ಪನ ಅಂಗಡಿಯ ಎದುರಿನÀ ರಸ್ತೆ ಉಬ್ಬು ಮತ್ತು ಗುಂಡಿಯಿಂದ ಕೂಡಿದ್ದು ಸಂಚಾರ ಪ್ರಾಣಕಂಟಕವಾಗಿದೆ.
ಹಂಪ್ಸ್ ಪಕ್ಕದಲ್ಲಿಯೇ ಗುಂಡಿಗಳು ಬಿದ್ದಿರುವುದರಿಂದ ಹಂಪ್ಸ್ ಹತ್ತಿದ ವಾಹನಗಳು ಗುಂಡಿಯೊಳಗೆ ಇಳಿದು ಹೋಗುವಂತಾಗಿದ್ದು, ಲಾರಿ,ಬಸ್, ಟ್ರ್ಯಾಕ್ಟರ್ ನಂತ ದೊಡ್ಡ ವಾಹನಗಳು ಈ ಗುಂಡಿಯೊಳಗೆ ಇಳಿದು ಹೇಗೋ ಹೋಗುತ್ತವೆ. ಕಾರ್ ,ಆಟೋ ದಂತಹ ಚಿಕ್ಕಪುಟ್ಟ ವಾಹನಗಳು ಇದರಲ್ಲಿ ಸಿಕ್ಕಿ ಹಾಕಿಕೊಂಡು ಪರಿಪಾಟಲು ಪಡುವಂತಾಗಿದೆ. ಅಲ್ಲದ ಕೆಲ ಬಾರಿ ವಾಹನಗಳು ಈ ಗುಂಡಿಯೊಳಗೆ ಇಳಿದಾಗ ಬಿಡಿಭಾಗಗಳ ಮುರಿತವೂ ಸಹ ಉಂಟಾಗಿ ರಸ್ತೆ ಮಧ್ಯೆಯೇ ವಾಹನಗಳು ನಿಂತರೆ, ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುವಂತಾಗಿದೆ. ಹಂಪಿನೊಳ್ಳಗಿರುವ ಗುಂಡಿ ತಪ್ಪಿಸಲು ಹೋಗಿ ವಾಹನಗಳು ಹಾವಿನಂತೆ ಆಬದಿ ಈಬದಿ ಚಲಿಸುವುದರಿಂದ ಹಾಗೂ ಹಂಪಿನೊಳಗೆ ಗುಂಡಿಯೊಳಗೆ ಇಳಿದ ಗಾಡಿಗಳು ತಕ್ಷಣ ಆಫ್ ಆಗುವುದರಿಂದ ಹಿಂದಿನಿಂದ ಬರುವ ಗಾಡಿಗಳು ಡಿಕ್ಕಿ ಹೊಡೆಯುವಂತಾಗುತ್ತದೆ. ಇಂತಹ ಹತ್ತಾರೂ ತೊಂದರೆಗಳು ನಿತ್ಯ ಉಂಟಾಗುತ್ತಿದ್ದರೂ ಸಹ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಕೊಡದೆ ಶಾಂತಚಿತ್ತದಿಂದುರುವುದು ಸಾರ್ವಜನಿಕರ, ಪ್ರಯಾಣಿಕರ ಹಾಗೂ ವಾಹನದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳ ಬಂದ ಮಳೆಗೆ ಗುಂಡಿಯಲ್ಲಿದ್ದ ಮಣ್ಣೆಲ್ಲಾ ಕೊಚ್ಚಿಹೋಗಿ, ಗುಂಡಿಯಲ್ಲಿ ನೀರು ಶೇಖರಣೆಯಾಗಿ ಚಿಕ್ಕದಾಗಿದ್ದ ಗುಂಡಿಗಳು ದೊಡ್ಡ ಗುಂಡಿಗಳಾಗಿ ಮಾರ್ಪಾಡಾಗಿವೆ. ಪ್ರಾಣಾಪಾಯ ಸಂಭವಿಸುವ ಮೊದಲೇ ಒಂದೋ ಈ ರಸ್ತೆಯಲ್ಲಿನ ಗುಂಡಿಮುಚ್ಚಿ ಇಲ್ಲ ರಸ್ತೆಗೆ ಹಾಕಿರುವ ಹಂಪ್ ತೆಗೆದು ಹಾಕಿ ಎಂಬುದು ವಾಹನ ಸಂಚಾರರ ಒತ್ತಾಸೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ