ಹುಳಿಯಾರು ಪಟ್ಟಣದಲ್ಲಿ 59 ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಮಕ್ಕಳಿಗೆ ಕನ್ನಡ ನಾಡುನುಡಿ ಬಗ್ಗೆ ವಿಷಯಗಳನ್ನು ತಿಳಿಸಿ ಸಿಹಿ ಹಂಚಿಕೆ ಮಾಡುತ್ತಿದ್ದು ಕಂಡು ಬಂತು.
ಪಟ್ಟಣದ ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ನೇತೃತ್ವದಲ್ಲಿ ಸದಸ್ಯರು ಹಾಗೂ ಸಿಬ್ಬಂದಿಯವರು ಸೇರಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಮೂಲಕ ರಾಜ್ಯೋತ್ಸವದ ಆಚರಣೆ ನಡೆಸಿದರು.
ಹುಳಿಯಾರು ಗ್ರಾ.ಪಂನಲ್ಲಿ ಅಧ್ಯಕ್ಷೆ ಕಾಳಮ್ಮ ಹಾಗೂ ಸದಸ್ಯರು ಸೇರಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಾಜ್ಯೋತ್ಸವ ಆಚರಣೆ ನಡೆಸಿದರು. |
ನಾಡಕಛೇರಿಯಲ್ಲಿ ಕಂದಾಯತನಿಖಾಧಿಕಾರಿ ಸತ್ಯನಾರಾಯಣ್ , ಬೆಸ್ಕಾಂನಲ್ಲಿ ಎಸ್.ಓ ಉಮೇಶ್ ನಾಯಕ್, ತಮ್ಮ ಸಿಬ್ಬಂದಿಯೊಡನೆ ಧ್ವಜಾರೋಹಣ ನೆರವೇರಿಸಿ ಆಚರಣೆ ನಡೆಸಿದರು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲ ನಟರಾಜ್ ಧ್ವಜಾರೋಹಣ ನೆರವೇರಿಸಿದರೆ, ಉಪನ್ಯಾಸಕ ಶಶಿಭೂಷಣ್ ಕನ್ನಡ ಭಾಷೆ ಸ್ಥಿತಿಗತಿ ಬೆಳವಣಿಗೆ ಬಗ್ಗೆ ವಿಚಾರಗಳನ್ನು ತಿಳಿಸಿದರು. ತಾ.ಪಂ ಸದಸ್ಯೆ ಬೀಬೀಫಾತೀಮಾ, ಜಲಾಲ್ ಸಾಬ್, ಉಪಪ್ರಾಂಶುಪಾಲೆ ಇಂದಿರಾ, ಎಸ್‍ಡಿಎಂಸಿ ಅಧ್ಯಕ್ಷ ಮಹೇಶ್, ಗುತ್ತಿಗೆದಾರ ನಂದಿಹಳ್ಳಿ ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಟ್ಟಣದ ವಿದ್ಯಾವಾರಿಧಿ ಶಾಲೆ, ವಾಸವಿ,ಕನಕದಾಸ, ಎಂಪಿಎಸ್ ಶಾಲೆ, ಕೇಶವ,ಬಸವೇಶ್ವರ, ಮಾರುತಿ ಶಾಲೆ,ಉರ್ದುಶಾಲೆ, ಬಾಲಕಿಯರ ಪಿಯು ಕಾಲೇಜು, ಹುಳಿಯಾರು-ಕೆಂಕೆರೆ ಪಿಯು ಕಾಲೇಜು,ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ ಕನ್ನಡ ಭಾಷಾಭಿಮಾನದ ಬಗ್ಗೆ ಉಪನ್ಯಾಸ ನೀಡಲಾಯಿತು. ಮಕ್ಕಳಿಂದ ಸಾಂಸ್ಕøತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ