ಚಿಕ್ಕನಾಯಕನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬಗರ್ ಹುಕುಂ ಕಮಿಟಿ ರಚಿಸಿ ಸದಸ್ಯರ ನೇಮಕ ಮಾಡುವಂತೆ ಸರ್ಕಾರವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಒತ್ತಾಯಿಸಿದ್ದಾರೆ.
ಸಿಂಗದಹಳ್ಳಿ ರಾಜ್ ಕುಮಾರ್ . |
ಸರ್ಕಾರ ರಚನೆಗೊಂಡು ವರ್ಷ ಕಳೆಯತ್ತಾ ಬಂದರೂ ಕ್ಷೇತ್ರದಲ್ಲಿ ಬಗರ್ ಹುಕುಂ ಕಮಿಟಿ ಸದಸ್ಯರ ನೇಮಕ ಪ್ರಕ್ರಿಯೆ ನಡೆಯದೆ ಇರುವುದರಿಂದ ರೈತರ ಸಾಗುವಳಿ ಮಾಡಿರುವ ಜಮೀನುಗಳ ಮುಂಜೂರಾತಿ ಕಾರ್ಯ ನಡೆಯುತ್ತಿಲ್ಲ. ಬಡವರು ಜೀವನ ನಿರ್ವಹಣೆಗೆ ಅಷ್ಟೋ ಇಷ್ಟು ಉಳಿಮೆ ಮಾಡಿಕೊಂಡಿಕೊಂಡು ಸರ್ಕಾರಿ ಜಮೀನು ಸಕ್ರಮಗೊಳ್ಳದಿರುವುದರಿಂದ ಕ್ಷೇತ್ರದ ಗ್ರಾಮಾಂತರ ಪ್ರದೇಶದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ವೇಳೆಯನ್ನು ಸರ್ಕಾರ ನಿಗದಿ ಪಡಿಸಿರುವುದರಿಂದ ಕಮಿಟಿ ಇಲ್ಲದಿರುವುದರಿಂದ ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ಜಮೀನು ಕೈ ತಪ್ಪುವ ಸಂಭವವಿದೆ. ಕೂಡಲೇ ಸಮಿತಿ ರಚಿಸಿ ಸದಸ್ಯರ ನೇಮಕ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ