ಈ ಬಾರಿಯ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹುಳಿಯಾರು ಹೋಬಳಿಯ ಇಬ್ಬರಿಗೆ ಸಂದಿರುವುದು ಹೋಬಳಿಗೆ ಹೆಮ್ಮೆಯ ಸಂಗತಿಯಾಗಿದ್ದು, ಈರ್ವರನ್ನು ಪಟ್ಟಣದ ಸಾರ್ವಜನಿಕರು, ಸಂಘಸಂಸ್ಥೆಯವರು, ಕಸಾಪದವರು ಅಭಿನಂದಿಸಿದ್ದಾರೆ.
ತಾಲ್ಲೂಕು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಹುಳಿಯಾರು ಹೋಬಳಿಯ ಶ್ರೀರಂಗಯ್ಯ ಹಾಗೂ ಬೋರಯ್ಯ. |
ಚಿಕ್ಕನಾಯಕನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿಯ ಶ್ರೀರಂಗಯ್ಯ ಹಾಗೂ ಪಟ್ಟಣದ ದುರ್ಗಾಂಭ ಡ್ರಾಮ ಸೀನರಿಯ ಹೆಚ್.ಡಿ. ಬೋರಯ್ಯ ಅವರನ್ನು ಸನ್ಮಾನಿಸಲಾಯಿತು.
ಎಂ.ಕೆ. ಶ್ರೀರಂಗಯ್ಯ ಹೋಬಳಿಯ ಪುಟ್ಟ ಹಳ್ಳಿಯಾದ ಹೆಚ್.ಮೇಲನಹಳ್ಳಿಯವರಾಗಿದ್ದು , ಗ್ರಾಮೀಣ ಪ್ರತಿಭೆಯಾಗಿರುವ ಇವರು ಐಎಎಸ್
ಅಧಿಕಾರಿಯಾಗಿದ್ದು, ಸದ್ಯ ಚಿತ್ರದುರ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೆಚ್.ಡಿ. ಬೋರಯ್ಯ ಅವರು ಪಟ್ಟಣದ ದುರ್ಗಾಂಭ ಸೀನ್ಸ್ ಮಾಲೀಕರಾಗಿದ್ದು , ಕಳೆದ 50ವರ್ಷಗಳಿಂದಲೂ ಈ ಭಾಗದಲ್ಲಿ ನಡೆಯುವ ನಾಟಕಗಳಿಗೆ ಸೀನ್ಸ್ ಹಾಗೂ ವೇದಿಕೆ ಸಜ್ಜುಗೊಳಿಸುವ ಮೂಲಕ ಮನೆಮಾತಾಗಿದ್ದಾರೆ. ಇವರ ತಂದೆ ಕಾಲದಿಂದಲೂ ಇದೇ ಕಾಯಕದಲ್ಲಿ ತೊಡಗಿರುವ ಇವರು ದೇವಿಮಹಾತ್ಮೆ ನಾಟಕ್ಕೆ ಬೇಕಾದ ಪರಿಕರಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಸದ್ಯ ನಾಟಕಗಳೆಲ್ಲಾ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಜೀವನ ನಡೆಸುವುದು ದುಸ್ಥರ ಎನ್ನುವ ಸನ್ನಿವೇಶದಲ್ಲಿ ಅವರಿಗೆ ಪ್ರಶಸ್ತಿ ಸಂದಿರುವುದು ಅವರ ಶ್ರಮಕ್ಕೆ ಪ್ರತಿಫಲ ನೀಡಿದಂತಾಗಿದೆ.
ಇದೇ ಸಮಾರಂಭದಲ್ಲಿ ಚಿ.ನಾ.ಹಳ್ಳಿಯ ಕ್ರೀಡಾಪಟು ಪವಿತ್ರಾ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ಕಾಮಾಕ್ಷಮ್ಮ,ಪುರಸಭಾ ಅಧ್ಯಕ್ಷೆ ಪುಷ್ಟ ಟಿ.ರಾಮಯ್ಯ,ಬಿಇಓ ಸಾ.ಚಿ.ನಾಗೇಶ್, ವೃತ್ತ ನಿರೀಕ್ಷಕ ಜಯಕುಮಾರ್, ಕಸಾಪ ರವಿಕುಮಾರ್ ,ಕನ್ನಡಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮುಂತಾದವರ ಉಪಸ್ಥಿತಿಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರಶಸ್ತಿ ವಿತರಿಸಿ, ಸನ್ಮಾನಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ