ಸಮಾಜದ ಏಳ್ಗೆಗಾಗಿ ದುಡಿದ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಇಂದಿನ ಯುವಪೀಳಿಗೆಯವರು ಪಾಲಿಸುವ ಮೂಲಕ ಸಮಾಜದ ಏಳ್ಗೆಯತ್ತ ಗಮನ ಕೊಡಬೇಕೆಂದು ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಹಳ್ಳಿ ಅಶೋಕ್ ತಿಳಿಸಿದರು.
ಹುಳಿಯಾರಿನ ಕನಕ ಪತ್ತಿನ ಸಹಕಾರ ಸಂಘದಲ್ಲಿ ಕನಕ ಜಯಂತಿ ಆಚರಣೆಗೆ ಅಂಗವಾಗಿ ಕನಕನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಪಟ್ಟಣದ ಕನಕ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಕನಕ ಜಯಂತೋತ್ಸವದಲ್ಲಿ ಕನಕ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ನಾಡಿನಲ್ಲಿನ ಅನೇಕ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಭಕ್ತ ಕನಕದಾಸರು ಇರುವುದು ಕುರುಬ ಸಮುದಾಯದವರಿಗೆ ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದರು. ಅಂದು ಕನಕರು ಕುಲಕುಲವೆಂದು ಹೊಡೆದಾಡದಿರಿ ಎಂದು ಹೇಳುವ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿ ಸಮಾಜದ ಎಲ್ಲರ ಏಳ್ಗೆಗಾಗಿ ಶ್ರಮಿಸಿದವರಾಗಿದ್ದಾರೆ . ಅವರು ಹೇಳಿದ ವಿಚಾರಗಳನ್ನು ನಾವುಗಳು ಪಾಲಿಸುವ ಮೂಲಕ ನಾವೆಲ್ಲಾ ಒಂದೇ ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡು ಸಾಮಾಜಿಕವಾಗಿ,ಆರ್ಥಿಕವಾಗಿ ಸಬಲರಾಗಬೇಕು ಎಂದರಲ್ಲದೆ, ಮುಂದಿನ ವರ್ಷಗಳಲ್ಲ್ಲಿ ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದರು.
ಜಯಂತೋತ್ಸವದ ಅಂಗವಾಗಿ ಕೆ.ಸಿ.ಪಾಳ್ಯದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ಈ ವೇಳೆ ಸಂಘದ ಗವಿರಂಗಯ್ಯ, ಸಿದ್ರಾಮಯ್ಯ, ನಾಗರಾಜು,ಬೀರಪ್ಪ, ಮುಖಂಡರಾದ ನಂದಿಹಳ್ಳಿ ಶಿವಣ್ಣ, ಕಿಟ್ಟಿ,ಕಾರ್ಯದರ್ಶಿ ದೇವಿಪ್ರಸಾದ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ ಸೇರಿದಂತೆ ಕನಕ ಸೇವಾ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದು ಸಿಹಿ ಹಂಚಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ