ಕನ್ನಡನಾಡಿನಲ್ಲಿರುವ ನಾವುಗಳು ಎಂದಿಗೂ ನಮ್ಮ ನಾಡು-ನುಡಿಯನ್ನು ಮರೆಯದೆ, ಅನ್ಯ ಭಾಷಿಕರಿಗೆ ಕನ್ನಡ ಭಾಷೆಯ ಹಿರಿಮೆಯನ್ನು ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ಪ್ರಾಂಶುಪಾಲ ಬಸವರಾಜು ತಿಳಿಸಿದರು.
ಹುಳಿಯಾರಿನ ಯೋಗಿನಾರಾಯಣ ಐಟಿಐ ಕಾಲೇಜಿನಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆದ ಸಮಾರಂಭವನ್ನು ಪ್ರಾಂಶುಪಾಲ ಬಸವರಾಜು ಉದ್ಘಾಟಿಸಿದರು. |
ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರುವರ್ಷಗಳ ಐತಿಹ್ಯವಿದ್ದು ಅನೇಕ ಸಾಹಿತ್ಯ ಪ್ರಕಾರಗಳು, ಮಹಾನ್ ಕವಿಗಳು,ಸಾಹಿತಿಗಳು,ವಿದ್ವಾಂಸರುಗಳು ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ಸಾಹಿತ್ಯ ರಚನೆ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು. ಇಂದಿನ ಅನೇಕ ಕ್ಷೇತ್ರಗಳಲ್ಲಿ ಆಂಗ್ಲಭಾಷೆ ಹೆಚ್ಚೆಚ್ಚು ಬಳಕೆಯಾಗುತ್ತಾ ಪ್ರಾಂತೀಯ ಭಾಷೆಗಳನ್ನು ಮೂಲೆಗುಂಪಾಗುವಂತೆ ಮಾಡುತ್ತಿದೆ ಎಂದು ವಿಷಾದಿಸಿದರು. ಇಂಗ್ಲಿಷನ್ನು ವ್ಯವಹಾರಿಕ ಭಾಷೆಯಾಗಿ ಮಾತ್ರ ಬಳಸಬೇಕೆ ಹೊರತು ಅದನ್ನೇ ನಮ್ಮ ಮಾತೃಭಾಷೆಯಂತೆ ಬಳಸಬಾರದು. ಕರ್ನಾಟಕದಲ್ಲಿನ ಎಲ್ಲರೂ ಒಗ್ಗೂಡಿ ಕನ್ನಡವನ್ನು ಉಳಿಸಿ,ಬೆಳಸುವಲ್ಲಿ ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ,ಖಜಾಂಚಿ ಶಂಕರಪ್ಪ,ಉಪನ್ಯಾಸಕರಾದ ರಮೇಶ್,ವಿಜಯ್ ಕುಮಾರ್,ರಂಗನಾಥ್,ಸಾಗರ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ