ಕಳೆದ ಹಲವು ತಿಂಗಳುಗಳಿಂದ ತಗ್ಗು-ಗುಂಡಿಗಳು ಬಿದ್ದು ಹಾಳಾಗಿದ್ದ ಬಸವೇಶ್ವರನಗರ ಬಡಾವಣೆಯ ರಸ್ತೆಯನ್ನು ಇಲ್ಲಿನ ನಿವಾಸಿಗಳೇ ಸೇರಿ ದುರಸ್ಥಿ ಮಾಡುವ ಕಾರ್ಯವನ್ನು ಗುರುವಾರ ಮಾಡಿದರು.
ಹುಳಿಯಾರಿನ ಬಸವೇಶ್ವರನಗರ ಬಡಾವಣೆಯ ರಸ್ತೆ ದುರಸ್ಥಿಗೆ ಮುಂದಾದ ನಿವಾಸಿಗಳು. |
ಬಿಎಚ್ ರಸ್ತೆಯಿಂದ ಎಪಿಎಂಸಿ ಹಿಂಭಾಗದ ಮೂಲಕ ಬಸವೇಶ್ವರನಗರ ಬಡಾವಣೆಗೆ ಹಾಗೂ ಅಲ್ಲಿಂದ ಅಪ್ಪಸಾಬಿಅಣೆಗೆ ಸಂಪರ್ಕ ಕಲ್ಪಿಸುವ ಈ ಮಣ್ಣುರಸ್ತೆಯಲ್ಲಿ ಹೆಚ್ಚಿನ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲು ಹಾಗೂ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿತ್ತು. ಮಳೆಬಂದಾಗ ಎಪಿಯಂಸಿ ಆವರಣದಲ್ಲಿನ ನೀರೆಲ್ಲಾ ಈ ರಸ್ತೆ ಮೂಲಕ ಹರಿಯುವುದರಿಂದ ರಸ್ತೆ ಹಾಳಾಗಿ ಸಮಸ್ಯೆ ಮತ್ತೊಷ್ಟು ಬಿಗಡಾಯಿಸುತ್ತಿತ್ತು. ಈ ¨ಗ್ಗೆ ಸ್ಥಳಿಯ ಆಡಳಿತದವರಿಗೆ ತಿಳಿಸಿದ್ದರೂ ಸಹ ಯಾರೂ ಈ ಬಗ್ಗೆ ಗಮನಕೊಟ್ಟಿಲ್ಲ ಎಂದು ಆರೋಪಿಸಿದರು.
ರಸ್ತೆ ಸರಿ ಮಾಡುವಂತೆ ಎಷ್ಟು ಬಾರಿ ಗ್ರಾ.ಪಂ.ನವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳು ತಾವೇ ಸ್ವಯಂಪ್ರೇರಣೆಯಿಂದ ರಸ್ತೆಗೆ ಮಣ್ಣು ಹಾಕಿಸುವ ಕಾರ್ಯ ಮಾಡಿದರು. ಇಲ್ಲಿನ ಜನರೇ ಸ್ವಲ್ಪ ಹಣ ಹೊಂದಿಸಿಕೊಂಡು ಜೆಸಿಬಿ ಯಂತ್ರ ಬಳಸಿ ರಸ್ತೆ ಪಕ್ಕದಲ್ಲಿ ಚರಂಡಿ ಹೊಡೆಸಿದ್ದಲ್ಲದೆ, ಆ ಮಣ್ಣನ್ನು ರಸ್ತೆಗೆ ಹಾಕಿಸುವ ಮೂಲಕ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದ್ದರು. ಈ ವೇಳೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು. ಇವರು ಕೈಗೊಂಡ ಕಾರ್ಯ ಇತರರಿಗೆ ಮಾದರಿಯಾಗುವಂತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ