ಹುಳಿಯಾರು : ಪಟ್ಟಣದ ಪುರಾಣ ಪ್ರಸಿದ್ದ ಅನಂತಶಯನ ಶ್ರೀರಂಗನಾಥಸ್ವಾಮಿಯ ಕೃತಿಕೋತ್ಸವ ಶುಕ್ರವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
![]() |
ಹುಳಿಯಾರಿನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಕೃತಿಕೋತ್ಸವದ ಅಂಗವಾಗಿ ನಡೆದ ಮಣೇವು ಕಾರ್ಯ. |
ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದ ದಿನ ಈ ಆಚರಣೆ ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದು ಅಂತೆಯೇ ಈಬಾರಿಯೂ ಸಹ ನಡೆಯಿತು. ಸುಬ್ರಮಣ್ಯ ಅವರ ಸೇವಾರ್ಥದಲ್ಲಿ ಸ್ವಾಮಿಗೆ ಅಭಿಷೇಕ,ಅರ್ಚನೆ ನಡೆಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ವಾದ್ಯಮೇಳದೊಂದಿಗೆ ಹೊರಡಿಸಿ ದೇವಾಲಯದ ಮುಂಭಾಗದ ಗರುಡಗಂಭದ ಮೇಲೆ ಘಟಾರತಿಯನ್ನು ಹಚ್ಚಲಾಯಿತು. ಪ್ರಕಾರೋತ್ಸವ, ಮಣೇವು ಹಾಕುವ ಕಾರ್ಯ ಹಾಗೂ ಕರುಗ ಸುಡುವ ಕಾರ್ಯ ನಡೆದು ನಂತರ ಮಹಾಮಂಗಳಾರತಿ ಕಾರ್ಯ ನಡೆಸಲಾಯಿತು. ವಿಪ್ರ ಮಹಿಳೆಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ಸೀತಾರಾಮ ಪ್ರತಿಷ್ಠಾನದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್, ವಿಪ್ರ ಸಂಘದ ಲಕ್ಷ್ಮಿನರಸಿಂಹಯ್ಯ,ಲೋಕೇಶಣ್ಣ,ರಾಜಣ್ಣ,ಪಿಎಸೈ ಘೋರ್ಪಡೆ, ಹುಳಿಯಾರಮ್ಮ ದೇವಸ್ಥಾನ ಸಮಿತಿಯ ವೆಂಕಟಾಛಲಪತಿಶೆಟ್ರು , ಹಿಂದೂ ಜಾಗರಣ ವೇದಿಕೆಯ ಬಡಗಿ ರಾಮಣ್ಣ, ರಂಗನಾಥಸ್ವಾಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗನಾಥಶೆಟ್ರು, ಸೇರಿದಂತೆ ಅಪಾರ ಸಂಖ್ಯೆ ಭಕ್ತಾಧಿಗಳು ಹಾಜರಿದ್ದು ಸ್ವಾಮಿ ಕೃತಿಕೋತ್ಸವವನ್ನು ಕಣ್ತುಂಬಿಕೊಂಡರು.
ಗಾಂಧಿಪೇಟೆಯ ಕನ್ನಿಕಪರಮೇಶ್ವರಿ ದೇವಾಲಯದಲ್ಲಿ ಬಿ.ವಿ.ಶ್ರೀನಿವಾಸ್ ಸೇವಾರ್ಥದಲ್ಲಿ ಕನ್ನಿಕಾಪರಮೇಶ್ವರಿಗೆ ಹಾಗೂ ಬನಶಂಕರಿ ದೇವಾಲಯದಲ್ಲಿ ಭಕ್ತಾಧಿಗಳಿಂದ ಅಲಂಕಾರ,ಪೂಜಾ ಕಾರ್ಯಗಳನ್ನು ನಡೆದು ಪಾಗು ಸುಡುವುದರ ಮೂಲಕ ಆ ಬೆಳಕಿನಲ್ಲಿನಲ್ಲಿ ಅಮ್ಮನವರ ದರ್ಶನ ಮಾಡಿ
ಕೃತಾರ್ಥರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ