ಹುಳಿಯಾರು ಹೋಬಳಿ ಹೊಸಹಳ್ಳಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಬುಧವಾರದಂದು ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರಯ್ಯ ಸಮ್ಮುಖದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಹುಳಿಯಾರು; ಹೋಬಳಿ ಹೊಸಹಳ್ಳಿಪಾಳ್ಯದ ಸ.ಕಿ.ಪ್ರಾ. ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. |
ಈ ವೇಳೆ ಅವರು ಮಾತನಾಡಿ ಇಂದಿನ ದಿನದಲ್ಲಿ ಪರಿಸರ ಸಂರಕ್ಷಣೆಯಿಂದ ಹೆಚ್ಚಿನ ಅನುಕೂಲವಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗ ಬೇಕು ಎಂದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಮನೆಯ ಸುತ್ತಮುತ್ತಲಿನವರಲ್ಲಿ ಜಾಗೃತಿ ಹಾಗೂ ಕಾಳಜಿ ಮೂಡಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಮುಖ್ಯಶಿಕ್ಷಕಿ ಪ್ರೇಮಾಕ್ಷಿ ಮಾತನಾಡಿ, ಮರಗಿಡಗಳ ಮಹತ್ವದ ಬಗ್ಗೆ ತಿಳಿಸಿದರಲ್ಲದೆ ಪರಿಸರ ಸಂರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಶಾಲಾವರಣದಲ್ಲಿನ ಸಸಿಗಳನ್ನು ಪ್ರತಿ ನಿತ್ಯ ಆರೈಕೆ ಮಾಡುವಲ್ಲಿ ಮಕ್ಕಳು ಮುಂದಾಗಬೇಕು ಎಂದರು. ಈ ಬಗ್ಗೆ ಶಿಕ್ಷಕರೂ ಸಹ ಹೆಚ್ಚು ಗಮನಹರಿಸಬೇಕೆಂದು ತಿಳಿಸಿದರು.
ಊರಿನ ಗೌಡರಾದ ಮುದ್ದರಾಮೇಗೌಡ ಮಾತನಾಡಿದರು. ಶಿವಣ್ಣಗೌಡರು, ಗಿರೀಶ್, ಪ್ರಕಾಶ್,ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರು
ಉಪಸ್ಥಿತರಿದ್ದ ಸಮಾರಂಭದಲ್ಲಿ ಶುಭಲಕ್ಷ್ಮಿ ಪ್ರಾರ್ಥಿಸಿ, ಶಿಕ್ಷಕ ಲಕ್ಷ್ಮಣ್ ಸ್ವಾಗತಿಸಿ, ಶಿಕ್ಷಕ ರವಿ ನಿರೂಪಿಸಿ, ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ