ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಘಟಕದ ವತಿಯಿಂದ ಶನಿವಾರದಂದು ಪಟ್ಟಣದ ಕರವೇ ವೃತ್ತದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ವೈಭವಯುತವಾಗಿ ರಾಜ್ಯೋತ್ಸವ ಆಚರಿಸಿದರು.
ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. |
ಮಾಜಿ ಶಾಸಕ ಕೆ.ಎಸ್.ಕಿರಣ್ ಅವರು ಧ್ವಜಾರೋಹಣ ನೇರವಿಸಿದ್ದು ಸಿಹಿ ಹಾಗೂ ಉಪಹಾರವನ್ನು ಸಹ ಹಂಚಿದರು. ನಂತರ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಅಲಂಕರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸುತ್ತಾ ಸಾಸಿಕ್ ಡೋಲಿನ ವಾದ್ಯಕ್ಕೆ ಹೆಜ್ಜೆ ಹಾಕಿದ್ದಲ್ಲೆ, ಕನ್ನಡ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ ನಡೆಸಿದರು. ಈ ವೇಳೆ ಕರವೇ ಅಧ್ಯಕ್ಷ ಸಿದ್ದೇಶ್, ಗೌರವಾಧ್ಯ ಕೋಳಿಶ್ರೀನಿವಾಸ್, ಖಜಾಂಚಿ ಚನ್ನಬಸವಯ್ಯ, ಕಾರ್ಯದರ್ಶಿ ಲಕ್ಷ್ಮಿಕಾಂತ, ಮಂಜುನಾಥ, ಪದಾಧಿಕಾರಿಗಳಾದ ಅಂಜನ್ ಕುಮಾರ್, ರಂಗಸ್ವಾಮಿ, ಮುರುಳಿ, ರಘು,ಬೀರಪ್ಪ, ಕೆ.ಕುಮಾರ್,ಗಣೇಶ್,ನವೀನ್,ದಿವಾಕರ,ಬಸವರಾಜು, ಯೋಗೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
----------
ಹುಳಿಯಾರಿನ ಖಾಸಗಿ ಬಸ್ ಏಜೆಂಟರ ಹಾಗೂ ಮಾಲೀಕರ ಸಂಘದಿಂದ ಬಸ್ ನಿಲ್ದಾಣದಲ್ಲಿ ಕನ್ನಡದ ಭಾವುಟ ಹಾರಿಸಲಾಯಿತು. |
ಹುಳಿಯಾರಿನಲ್ಲಿ ವಿವಿಧ ಸಂಘ ಸಂಸ್ಥೆಯವರು ಶನಿವಾರದಂದು ನಡೆಸಿದ ರಾಜ್ಯೋತ್ಸವ ಆಚರಣೆಯಲ್ಲಿ ಭುವನೇಶ್ವರಿತಾಯಿಯ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. |
ಮಾರುತಿನಗರದಲ್ಲಿ ರಾಜ್ಯೋತ್ಸವ
ಹುಳಿಯಾರು: ಪಟ್ಟಣದ ಮಾರುತಿನಗರದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶ್ರೀ ಮಾರುತಿ ಯುವ ಛಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಿ ಸಿಹಿವಿತರಿಸಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ರಾಮಗೋಪಾಲ್ ಸರ್ಕಲ್ ನ ಬಸವೇಶ್ವರ ನಗರದ ವೃತ್ತದಲ್ಲಿಯೂ ಇಲ್ಲಿನ ನಿವಾಸಿಗಳೆಲ್ಲಾ ಸೇರಿ ಕನ್ನಡ ಭಾವುಟ ಹಾರಿಸುವ ಮೂಲಕ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಈವೇಳೆ ಸಂಘದ ಅಧ್ಯಕ್ಷ ಚನ್ನಬಸವಯ್ಯ,ಹರೀಶ್, ದಯಾನಂದ್,ಲೋಕೇಶ್ ಸೇರಿದಂತೆ ಇತರರಿದ್ದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ