ಹುಳಿಯಾರು ಪಟ್ಟಣದ ಕೆನರಾಬ್ಯಾಂಕ್ ಶಾಖೆಯಲ್ಲಿ ಶಾಖಾವ್ಯವಸ್ಥಾಪಕ ಹೆಚ್.ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳೆಲ್ಲಾ ಸೇರಿ ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಆಚರಿಸಿದರು.
ಹುಳಿಯಾರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಆಚರಿಸಲಾಯಿತು.
|
ಕೆನರಾ ಬ್ಯಾಂಕ್ ಸಂಸ್ಥಾಪಕರಾದ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮ್ಯಾನೇಜರ್ ಹೆಚ್.ವಿಜಯ್ ಕುಮಾರ್ ಮಾತನಾಡಿ,
ಕೆನರಾಬ್ಯಾಂಕ್ ಸಂಸ್ಥಾಪಕರಾದ ಸುಬ್ಬರಾವ್ ಪೈ ಅವರನ್ನು ನಾವು ಎಂದಿಗೂ ಮರೆಯುಂತಿಲ್ಲ, ಅಂದು ಅವರಿಂದ ಸಣ್ಣ ಘಟಕವಾಗಿ ಸ್ಥಾಪಿತವಾದ ಬ್ಯಾಂಕ್ ಪ್ರಸ್ತುತದಲ್ಲಿ ದೇಶದೆಲ್ಲೆಡೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತನ್ನ ನೂರಾರು ಶಾಖೆಗಳನ್ನು ತೆರೆದು ತನ್ನದೇ ಆದ ಗ್ರಾಹಕರನ್ನು ಹೊಂದಿ,ಸಾಲಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ ಎಂದರು. ಗ್ರಾಮೀಣ ಭಾಗದಲ್ಲಿ ಇತರ ಬ್ಯಾಂಕ್ ಗಳಿಗೆ ಹೋಲಿಸಿದರೆ ಕೆನರಾ ಬ್ಯಾಂಕ್ ನ ವಹಿವಾಟು ಉತ್ತಮವಾಗಿದೆ ಎಂದರು.
ಈ ವೇಳೆ ಶಾಖೆಯ ಸಿಬ್ಬಂದಿಗಳಾದ ರಾಮಣ್ಣ,ವೇಣು,ರವಿ,ಜಯಶಂಕರ್,ಅಕ್ಷಯ್,ವೈ.ಜೆ.ಲಕ್ಷ್ಮಿನಾರಾಯಣ್,ಶಿವಣ್ಣ,ಅನಿಲ್ ಉಪಸ್ಥಿತರಿದ್ದು ಗ್ರಾಹಕರಿಗೆ ಸಿಹಿ ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ