ವೇತನ ಪರಿಷ್ಕರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು ನಡೆಸಿದ ಒಂದು ದಿನದ ಮುಷ್ಕರಕ್ಕೆ ಪಟ್ಟಣದ ಬ್ಯಾಂಕ್ ಉದ್ಯೋಗಿಗಳು ಬೆಂಬಲ ಸೂಚಿಸಿದ್ದ ಪರಿಣಾಮ ಬುಧವಾರದಂದು ಬ್ಯಾಂಕ್ ಸೇವೆ ಸ್ಥಗಿತಗೊಂಡಿತ್ತು.
ವೇತನ ಪರಿಷ್ಕರಣೆಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನೌಕರರ ಒಕ್ಕೂಟಗಳು ನೀಡಿದ್ದ ಕರೆಗೆ ಸ್ಪಂದಿಸಿ ಇಂದು ಕೆನೆರಾ ಬ್ಯಾಂಕ್,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಚ್ಚಲ್ಪಟ್ಟಿತ್ತು.ಈ ಬಗ್ಗೆ ಅರಿವಿಲ್ಲದ ಗ್ರಾಮಾಂತರ ಗ್ರಾಹಕರು,ಸ್ತ್ರೀಶಕ್ತಿ ಸಂಘದ ಮಹಿಳೆಯರು ಬ್ಯಾಂಕಿನ ಬಳಿ ಬಂದು ಹೋಗುತ್ತಿದ್ದ ದೃಶ್ಯ ಕಂಡು ಬಂತು.ಎಟಿಎಂಗಳು ಕಾರ್ಯನಿರ್ವಹಿಸಿದ್ದರಿಂದ ಹೆಚ್ಚಿನ ಅನಾನಾಕೂಲವಾಗಲಿಲ್ಲ.
ಹುಳಿಯಾರಿನಲ್ಲಿ ಬ್ಯಾಂಕ್ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮುಚ್ಚಲ್ಪಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ