ಪಟ್ಟಣದಿಂದ ಶಿರಾಗೆ ತೆರಳುತ್ತಿದ್ದ ಖಾಸಗಿ ಬಸ್ ಹೊರವಲಯದಲ್ಲಿರುವ ಎಸ್‍ಎಲ್‍ಆರ್ ಬಂಕ್ ಬಳಿ ಮರಕ್ಕೆ ಗುದ್ದಿ ಸುಮಾರು ಇಪ್ಪತ್ತು ಮಂದಿಗೆ ಪೆಟ್ಟಾದ ಘಟನೆ ಬುಧವಾರ ಬೆಳಿಗ್ಗೆ 9.30ರ ಸಮಯದಲ್ಲಿ ಜರುಗಿದೆ.
ಬಸ್‍ನಿಲ್ದಾಣದಿಂದ ಶಿರಾಕ್ಕೆ ತೆರಳುತ್ತಿದ್ದ ಹನುಮಾನ್ ಬಸ್‍ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದು ಶಿರಾ ರಸ್ತೆಯ ತಿರುವುನ ಸಮೀಪ ಸ್ಟೇರಿಂಗ್ ರಾಡ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ್ದ ಬಸ್ಸ್ ನೇರಳೆ ಮರಕ್ಕೆ ಗುದ್ದಿದ್ದು ಅದೃಷ್ಟವಶಾತ್ ಯಾರಿಗೂ ತೀವ್ರತರದ ಪ್ರಾಣಾಪಾಯವಾಗಿಲ್ಲ. ಮುಂಭಾಗದ ರಾಡ್‍ಗಳಿಗೆ ಮುಖ ತಾಕಿ ಗದ್ದ ಹಣೆಗೆ ಪೆಟ್ಟಾಗಿದ್ದು ಎಲ್ಲರಿಗೂ ತಕ್ಷಣವೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚು ಪೆಟ್ಟಾಗಿದ್ದ ಒಂದಿಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಹುಳಿಯಾರಿನ ಹೊರವಲಯದಲ್ಲಿ ಮರಕ್ಕೆ ಗುದ್ದಿರುವ ಖಾಸಗಿ ಬಸ್ |
ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ