ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನ ಕಲ್ಪತರು ಇಟ್ಟಿಗೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು ಹೆದ್ದಾರಿತಡೆ: ಕಾರ್ಖಾನೆ ಮುಂದೆ ಶವವಿಟ್ಟು ಪ್ರತಿಭಟನೆ

ಪಟ್ಟಣದ ಒಣಕಾಲುವೆ ಬಳಿಯ ರಂಗನಾಥ ಶೆಟ್ರು ಅವರಿಗೆ ಸೇರಿದ್ದ ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ನಡೆದಿದ್ದು ಕುಪಿತರಾದ ಸಾರ್ವಜನಿಕರು ಹಾಗೂ ಮೃತನ ಸಂಬಂಧಿಕರು ಕಾರ್ಖಾನೆಯ ಬಾಗಿಲಲ್ಲಿ ಶವವಿಟ್ಟು ಹೆದ್ದಾರಿ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದು , ರಾತ್ರಿಯಾದರೂ ಮುಂದುವರೆದಿದೆ. ಹುಳಿಯಾರು ಪಟ್ಟಣದ ಕಲ್ಪತರು ಟೈಲ್ಸ್ ಅಂಡ್ ಬ್ರಿಕ್ಸ್ ಕಾರ್ಖಾನೆಯೆದುರು ಶಾಮಿಯಾನ ಹಾಕಿ ಪ್ರತಿಭಟನೆ ನಡೆಸುತ್ತಿರುವುದು.   ಮೃತ ವ್ಯಕ್ತಿಯ ಶವವನ್ನು ಕಾರ್ಖಾನೆಯ ಮುಖ್ಯದ್ವಾರದಲ್ಲಿಟ್ಟಿರುವುದು.  ಕೆರೆಸೂರಗೊಂಡನ ಹಳ್ಳಿಯ ರವಿ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಕೆಲಸ ಮಾಡುವ ವೇಳೆ ವಿದ್ಯುತ್ ತಗುಲಿದ್ದ ಪರಿಣಾಮ ಮೃತ ಪಟ್ಟಿದ್ದು , ಆ ಸಮಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದನ್ನು ಬಿಟ್ಟರೆ ಮಾಲೀಕರು ಬಂದು ಏನಾಯಿತು ಎಂಬುದನ್ನು ವಿಚಾರಿಸಿಲ್ಲವೆಂದು ಮೃತ ವ್ಯಕ್ತಿಯ ಗ್ರಾಮದವರು, ಸಂಬಂಧಿಕರು ಸೇರಿ ಮೃತ ವ್ಯಕ್ತಿಯ ಶವವನ್ನು ಆಸ್ಪತ್ರೆಯಿಂದ ಕಾರ್ಖಾನೆಯಲ್ಲಿಗೆ ಕೊಂಡೈದು ಮುಖ್ಯದ್ವಾರದಲ್ಲಿಟ್ಟು ಪ್ರತಿಭಟಿಸಿ ಸ್ಥಳಕ್ಕೆ ಮಾಲೀಕರು ಬರುವವರೆಗೂ ಶವತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾರ್ಖಾನೆಯ ಕಾರ್ಮಿಕ ಮೃತಪಟ್ಟರು ಮಾಲೀಕರು ಸ್ಥಳಕ್ಕೆ ಬಾರದೆ ಪೋಲೀಸರನ್ನು ಕರೆಸ

ವಿದ್ಯುತ್ ಶಾಕ್ 6 ಮೇಕೆ ಸಾವು

ಪಟ್ಟಣದ ಬಿ.ಎಚ್.ರಸ್ತೆಯ ಎಸ್.ಬಿ.ಐ ಬ್ಯಾಂಕ್ ಎದುರಿನ ಖಾಸಗಿ ಕಂಪನಿಗೆ ಸೇರಿದ ಟವರ್ ನಲ್ಲಿ ವಿದ್ಯುತ್ ಶಾಕ್ ನಿಂದಾಗಿ 6 ಮೇಕೆಗಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಕರಿಯಪ್ಪ ಎಂಬುವರಿಗೆ ಸೇರಿದ್ದ ಮೇಕೆಗಳು ಮೇಯುತ್ತಾ ಮೇಯುತ್ತಾ ಟವರ್ ಬಳಿ ಹೋಗಿದ್ದು ಅಲ್ಲಿ ಟವರ್ ಗೆ ವಿದ್ಯುತ್ ಸಂಪರ್ಕ ಪಡೆದಿದ್ದ ವೈರ್ ಗಳು ಅಸ್ಥವ್ಯಸ್ಥವಾಗಿ ಬಿದ್ದಿದ್ದು, ಮೇಕೆಗಳು ಆ ವೈರ್ ಗಳನ್ನು ತುಳಿದು ಸಾವನಪ್ಪಿವೆ. ಹುಳಿಯಾರು ಪಟ್ಟಣದ ಟಾಟಾ ಡೆಕೋಮ ಟವರ್ ನ ಆವರಣದಲ್ಲಿ ವಿದ್ಯುತ್ ಶಾಕ್ ನಿಂದ ಸಾವನಪ್ಪಿದ ಮೇಕೆಗಳು. ಟವರ್ ಇರುವ ಜಾಗದಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ, ಟವರ್ ಸುತ್ತಾ ಸರಿಯಾದ ಬೇಲಿಕೂಡ ಇಲ್ಲ , ವೈರ್ ಗಳೆಲ್ಲಾ ಕಿತ್ತು ಬಿದ್ದಿದ್ದರೂ ಸಹ ಅದನ್ನು ಕೂಡಲೇ ಸರಿ ಮಾಡಿಸದೆ ಹಾಗೆಯೇ ಬಿಟ್ಟು ತಮಗಿಷ್ಟ ಬಂದಾಗ ಸರಿ ಮಾಡಿಸುತ್ತಿದ್ದಾರೆ ಈ ಬಗ್ಗೆ ಹಲವಾರು ಬಾರಿ ಟವರ್ ನವರಿಗೆ ಎಚ್ಚರಿಸಿದ್ದರೂ ಸಹ ಗಮನ ಹರಿಸಿಲ್ಲವೆಂದು ಗ್ರಾ.ಪಂ. ಸದಸ್ಯ ಧನುಷ್ ರಂಗನಾಥ ಹಾಗೂ ಯುವಕಾಂಗ್ರೆಸ್ ನ ವೆಂಕಟೇಶ್ ಹರಿಹಾಯ್ದರು. ವೆಂಕಟಾಛಲಿ ಶೆಟ್ರು, ಪ್ರಭಾಕರ್,ನಾಗೇಶ್ ಎಂಬುವರು ಈ ಟವರ್ ಗೆ ಸ್ಥಳ ನೀಡಿದ್ದು ,ಪಟ್ಟಣದ ಹೃದಯಭಾಗದಲ್ಲಿರುವ ಟವರ್ ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇವುಗಳನ್ನು ಬೇರೆಡೆ ತೆರವುಗೊಳಿಸುವಂತೆ ಜಮೀನುದಾದರಿಗೂ ಹಾಗೂ ಕಂಪನಿಯವರ

ಪದವಿ ಹಂತದ ಪರೀಕ್ಷಾ ಶುಲ್ಕ ಹೆಚ್ಚಳ : ತರಗತಿ ತೊರೆದು ಪ್ರತಿಭಟನೆ

 ತುಮಕೂರು ವಿಶ್ವ ವಿದ್ಯಾನಿಲಯ ಪದವಿ ಹಂತದ ಪರೀಕ್ಷಾ ಶುಲ್ಕವನ್ನು ಏಕಾಏಕಿ ಹೆಚ್ಚಳಮಾಡಿರುವುದನ್ನು ಖಂಡಿಸಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳನ್ನು ತೊರೆದು ಮಂಗಳವಾರ ಪ್ರತಿಭಟಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರಿಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು. ಬಿಎ,ಬಿಕಾಂ ಸೇರಿದಂತೆ ಇನ್ನಿತರ ಕೋರ್ಸ್ ಗಳ ಪರೀಕ್ಷೆಗಳ ಶುಲ್ಕವಾಗಿ ಎಲ್ಲರೂ 1220 ಕಟ್ಟಬೇಕು ಎಂದು ತಿಳಿಸಿದ್ದೆ ಪ್ರತಿಭಟನೆಗೆ ಕಾರಣಾವಾಯಿತು. ಈ ಹಿಂದೆ ಆದಾಯ ಪ್ರಮಾಣಪತ್ರ ನೀಡಿದವರು 220ರೂ , ಆದಾಯ ಪ್ರಮಾಣಪತ್ರವಿಲ್ಲದವರು 1220ರೂ ಕಟ್ಟುತ್ತಿದ್ದು ಇದೀಗ ಎಲ್ಲರೂ 1220ರೂ ಕಟ್ಟಬೇಕು ಎಂದು ತಿಳಿಸಿರುವುದು ಗ್ರಾಮೀಣಭಾಗದ ಬಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಆರೋಪಿಸಿದರು. ವಿಶ್ವವಿದ್ಯಾನಿಲಯ ಅವೈಜ್ಞಾನಿಕವಾಗಿ ಪರಿಕ್ಷಾ ಶುಲ್ಕ ಹೆಚ್ಚಳ ಮಾಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಕುಲಸಚಿವರು ಪರೀಕ್ಷಾ ಶುಲ್ಕವನ್ನು ಈ ಹಿಂದಿನಂತೆ ಮುಂದುವರಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದರು. ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡದೆ ಹೋದರೆ ನಾವ್ಯಾರು ಪರಿಕ್ಷಾ ಶುಲ್ಕ ಕಟ್ಟದೆ ಪುನ: ಮತ್ತೊಮ್ಮೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಗೊಬ್ಬರಕ್ಕಾಗಿ ರೈತರ ಸರದಿ ಸಾಲು

ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹದಮಳೆಯಾಗುತ್ತಿದ್ದು , ರೈತರು ರಸಗೊಬ್ಬರಕೊಳ್ಳಲು ಮುಗಿಬಿದ್ದಿದ್ದಾರೆ. ಯೂರಿಯಾ ಗೊಬ್ಬರಕ್ಕೆ ದಿಢೀರ್ ಬೇಡಿಕೆ ಉಂಟಾಗಿದ್ದು ಅದಕ್ಕಾಗಿ ರೈತರು ಪಟ್ಟಣದ ಗೊಬ್ಬರದ ಅಂಗಡಿಗಳಿಗೆ ಎಡತಾಕುತ್ತಿದ್ದರು. ಹುಳಿಯಾರಿನ ಬಸ್ ನಿಲ್ದಾಣದ ಗೊಬ್ಬರದ ಅಂಗಡಿಯಲ್ಲಿ ಗೊಬ್ಬರ ಖರೀದಿ ಮಾಡಲು ರೈತರು ಸರದಿ ಸಾಲಿನಲ್ಲಿ ನಿಂತಿರುವುದು. ಮಳೆಯಿಲ್ಲದೆ ಗೊಬ್ಬರಕ್ಕೆ ಬೇಡಿಕೆಯಿಲ್ಲದ ಹಿನ್ನಲೆಯಲ್ಲಿ ಅಂಗಡಿಯವರೂ ಸಹ ದಾಸ್ತಾನು ಮಾಡದೆ ರೈತರು ಒಮ್ಮೆಗೆ ಗೊಬ್ಬರಕ್ಕೆ ಬಂದಿದ್ದರಿಂದ ಪರಿಪಾಟಲು ಪಡುವಂತಾಯಿತು. ದಾಸ್ತಾನಿಲ್ಲವೆಂದು ಹೇಳಿದರೂ ಕೂಡ ಕೇಳದ ಜನ ಗೊಬ್ಬರದ ಅಂಗಡಿ ಮುಂದೆ ಕಾಯುತ್ತಿದ್ದ ದೃಶ್ಯಕಂಡುಬಂತು. ಮಂಗಳವಾರ ಸಂಜೆ ಲಾಯಿಯಲ್ಲಿ ಬಂದ ಗೊಬ್ಬರವನ್ನು ಗೋಡನ್ ಗೆ ದಾಸ್ತಾನು ಮಾಡಲು ಬಿಡದೆ ಸ್ಥಳದಲ್ಲೇ ಖರೀದಿ ಮಾಡಿದರು. ಬಂದಗೊಬ್ಬರಕ್ಕಿಂತ ದುಪ್ಪಟ್ಟು ಜನ ಇದುದ್ದರಿಂದ ಸರದಿ ಸಾಲಿನಲ್ಲಿ ಕಾದ ರೈತರಿಗೆ ಒಬ್ಬರಿಗೆ ಒಂದು ಚೀಲದಂತೆ ವಿತರಿಸಲಾಯಿತು. ಬುಧವಾರ ಮುಂಜಾನೆಯೇ ಆಗಮಿಸಿದ ರೈತರು ಗೊಬ್ಬರ ಬರುತ್ತಿದ್ದಂತೆ ಲಾರಿ ಬಳಿಯೇ ಕೊಂಡೈದಿದ್ದು ಒಟ್ಟಾರೆ ಗೊಬ್ಬರಕ್ಕೆ ಬಾರಿ ಬೇಡಿಕೆ ಕಂಡುಬಂದಿದೆ. ಗೊಬ್ಬರಕ್ಕೆ ದುಪ್ಪಟ್ಟು ದರ: ಗೊಬ್ಬರಕ್ಕೆ ಬೇಡಿಕೆ ಬರುತ್ತದೆ ಎಂದು ಅರಿತಿದ್ದ ವ್ಯಾಪಾರಸ್ಥರು ರೈತರಿಂದ ಹೆಚ್ಚಿನ ದರ ಪಡೆದಿರುವುದಾಗಿ ರೈತ ಸಂಘದವರು ಆರೋಪಿಸಿದ್ದಾರೆ. ನಿಗದಿತದರ

ಕಲೆ , ಸಂಗೀತ ಎಂತಹ ನೋವನ್ನು ಮರೆಸುತ್ತದೆ : ಶಾಸಕ ಸಿಬಿಎಸ್

    ಇಂದಿನ ಒತ್ತಡಮಯ ಜೀವನಜೆಂಜಾಟದಲ್ಲಿ ಸುಖ,ಶಾಂತಿ ,ನೆಮ್ಮದಿ ಎಂಬುದು ಕಣ್ಮರೆಯಾಗುತ್ತಿದ್ದು ಕಲೆ, ಸಂಗೀತದ ಆಸ್ವಾದನೆ ಮೂಲಕ ಕೆಲಸಮಯವಾದರೂ ಇಂತಹ ಒತ್ತಡಮಯ ಜೀವನದಿಂದ ಮುಕ್ತರಾಗಬಹುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪಟ್ಟಣದ ಎಂಪಿಎಸ್ ಶಾಲಾವರಣದಲ್ಲಿ ಗುರುವಾರ ಸಂಜೆ ಅಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು. ಮರೆಯಾಗುತ್ತಿರುವ ಜಾನಪದ ಕಲೆಯನ್ನು ಮೆಲುಕುಹಾಕುವಂತೆ ಹಾಗೂ ಜಾನಪದ ಸೊಗಡನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಡಿಕೊಂಡು ಬರುತ್ತಿದ್ದು ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು. ಪ್ರಸ್ತುತದ ದಿನಗಳಲ್ಲಿ ಜನ ಟಿ.ವಿ ಗೆ ಮಾರು ಹೋಗಿದ್ದು ಗ್ರಾಮಗಳಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು. ಜಿಲ್ಲೆ,ತಾಲ್ಲೂಕು ಹಂತದಲ್ಲಿ ನಡೆಯುವಂತಹ ಕಾರ್ಯಕ್ರಮ ಹುಳಿಯಾರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಸೊಗಡನ್ನು ಬಿತ್ತರಿಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ,ಅದಕ್ಕೆ ನಮ್

ಲಕ್ಕೇನಹಳ್ಳಿಗೆ ರಸ್ತೆ : ಶಾಸಕ ಸಿಬಿಎಸ್ ಭರವಸೆ

      ಗ್ರಾಮೀಣ ಪ್ರದೇಶವಾದ ಲಕ್ಕೇನಹಳ್ಳಿಗೆ ಡಾಂಬಾರು ರಸ್ತೆ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ಭರವಸೆ ನೀಡಿದ್ದಾರೆ. ಹುಳಿಯಾರು ಹೋಬಳಿ ಲಕ್ಕೇನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸುರೇಶ್ ಬಾಬು ಮಾತನಾಡಿದರು         ಲಕ್ಕೇನಹಳ್ಳಿಯಲ್ಲಿನ ನಡೆದ ಎನ್.ಎಸ್.ಎಸ್.ಶಿಬಿರದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ, ಈ ಗ್ರಾಮವು ಹೆದ್ದಾರಿಯಿಂದ ಎರಡು ಕಿ.ಮೀ ಅಂತರವಿದ್ದು ಗ್ರಾಮಕ್ಕೆ ಡಾಂಬಾರು ರಸ್ತೆ ಕಲ್ಪಿಸುವುದರ ಮೂಲಕ ಈ ಭಾಗದ ಹತ್ತಾರು ಹಳ್ಳಿಗಳ ಸುಗಮಸಂಚಾರಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದರು. ಶೀಘ್ರವೇ ಈ ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು. ಜಿ.ಪಂ.ಸದಸ್ಯರಾದ ಮಂಜುಳಾ,ನಿಂಗಮ್ಮ,ತಾ.ಪಂ.ಸದಸ್ಯರಾದ ಕವಿತಾ,ಫಾತೀಮಾಭಿ ಇನ್ನಿತರರಿದ್ದರು.

ಕೆರೆ ಒತ್ತುವರಿ ತೆರವು : ಮೂರು ತಿಂಗಳ ಗಡುವು

 ಕೆರೆ ಒತ್ತುವರಿ ತೆರವು : ಮೂರು ತಿಂಗಳ ಗಡುವು ಪುನರ್ವಸತಿಗೆ ಲಿಂಗಪ್ಪನಪಾಳ್ಯದ ಬಳಿ ಜಾಗ ಬಿಟ್ಟು ಕೊಡುವುದಿಲ್ಲ : ಗ್ರಾಮಸ್ಥರು                              --------------------------------------------------------------- ಹುಳಿಯಾರು ಪಟ್ಟಣದ ಕೆರೆ ಒತ್ತುವರಿ ಜಾಗವನ್ನು ತೆರವು ಮಾಡುವ ಮೊದಲು ಇಲ್ಲಿನ ನಿವಾಸಿಗಳಿಗೆ ಬೇರೆಡೆ ಪುನರ್ವಸತಿ ಕಲ್ಪಿಸಿಕೊಡುವಂತೆ ಶಂಕರಪುರ ಬಡಾವಣೆಯ ನಿವಾಸಿಗಳು ಕೋರಿದರೆ ಯಾವುದೇ ಕಾರಣಕ್ಕೂ ಅಲ್ಲಿನ ನಿರಾಶ್ರಿತರಿಗೆ ನಮ್ಮೂರಿಗೆ ಸೇರಿದ ಗೋಮಾಳದಲ್ಲಿ ಸ್ಥಳಾವಾಕಾಶ ಕಲ್ಪಿಸಕೂಡದೆಂದು ಲಿಂಗಪ್ಪನಪಾಳ್ಯದವರು ವಾಗ್ವಾದ ನಡೆಸಿದ ಪ್ರಸಂಗ ಶಾಸಕರು ಹಾಗೂ ತಹಶೀಲ್ದಾರರ ಸಮಕ್ಷಮ ನಡೆಯಿತು. ಇಂದು ಪಟ್ಟಣದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಕೊಡುತ್ತಿರುವಾಗಲೇ ಶಾಸಕರಿಗೆ ಎರಡು ಕಡೆಯವರು ತಂತಮ್ಮ ಅಹವಾಲು ಸಲ್ಲಿಸಿದರು. ನಿರಾಶ್ರಿತರಿಗೆ ತಮ್ಮ ಗ್ರಾಮದ ಬಳಿಯ ಗೋಮಾಳದಲ್ಲಿ ಜಾಗ ಕೊಡುವ ಬಗ್ಗೆ ಚಿಂತನೆ ನಡೆದಿರುವುದನ್ನು ಅರಿತ ಅಲ್ಲಿನ ಗ್ರಾಮಸ್ಥರು ಗ್ರಾಮದ ಪ್ರತಿಯೊಬ್ಬರು ಇಂದು ಶಾಸಕರ ಬಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸಾರಿ ಹಾಕುವ ಮುಖಾಂತರ ಗ್ರಾಮದ ನೂರಾರು ಜನರು ಪಾಲ್ಗೊಳ್ಳುವಂತೆ ನೋಡಿಕೊಂಡರು. ಗ್ರಾಮದ ಪರವಾಗಿ ಮಾತನಾಡಿದ ಬೀರಣ್ಣ ಹಾಗೂ ಪ್ರಭಣ್ಣ ಗ್ರಾಮದವರು ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟ ಪ್ರದೇಶವನ್ನು

ಪಿಂಚಣಿ ಆದಾಲತ್

ಹುಳಿಯಾರಿನ ನಾಢಕಛೇರಿಯಲ್ಲಿ ನಡೆದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು. ಹುಳಿಯಾರು ನಾಢಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಹೋಬಳಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಿದರು.               ಹೋಬಳಿಯ 13 ಕಂದಾಯವೃತ್ತಗಳ ವ್ಯಾಪ್ತಿಯ 53 ಜನರಿಗೆ ಮನಸ್ವಿನಿ , ಸಂಧ್ಯಾಸುರಕ್ಷಾ, ವಿಧವಾವೇತನ,ಅಂಗವಿಕಲ ವೇತನ ಪಡೆಯಲು ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಬೆಳಿಗ್ಗೆ 11 ಕ್ಕೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಮಧ್ಯಾಹ್ನದ ವೇಳೆಗೆ ಪ್ರಾರಂಭವಾಗಿದ್ದು, ಬೆಳಿಗ್ಗಿನಿಂದಲೇ ಸಾರ್ವಜನಿಕರು ಇಲ್ಲಿ ಕಾದುಕೂರುವಂತಾಗಿತ್ತು. ಮಂಜೂರಾತಿ ಪತ್ರ ಪಡೆಯಲು ಹೆಸರು ಕೂಗಿದಾಗ ಫಲಾನುಭವಿಗಳು ಬಾರದೆ ಇದ್ದಾಗ ಕೆಲ ಗ್ರಾಮದ ಸಾರ್ವಜನಿಕರು ಈ ಪಿಂಚಣಿ ಆದಲಾತ್ ಕಾರ್ಯಕ್ರಮದ ಬಗ್ಗೆ ಸೂಕ್ತಪ್ರಚಾರವಿಲ್ಲ , ನಮಗ್ಯಾರು ತಿಳಿಸಿಲ್ಲ ಎಂದು ಚಕಾರವೆತ್ತಿದರು.                     ನಂತರ ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ ಕಂದಾಯ ವೃತ್ತದ ಎಲ್ಲಾ ಗ್ರಾಮಲೆಖ್ಖಿಗರಿಗೂ ಈ ಬಗ್ಗೆ ಪ್ರತಿ ಮನೆಗಳಿಗೆ ಹೋಗಿ ತಿಳಿಸುವಂತೆ ಹೇಳಲಾಗಿದೆ ಅದರಂತೆ ತಿಳಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿ ಸಾರ್ವಜನಿಕರನ್ನು ಸುಮ್ಮನೆ ಮಾಡಿದರು.      

ವಚನದ ನುಡಿಗಳನ್ನು ಅಳವಡಿಸಿ ಬಾಳು ಸಾರ್ಥಕ ಪಡಿಸಿಕೊಳ್ಳಿ

 ಶಿವಶರಣರ ವಚನಗಳು ಅವರ ಅನುಭವದ ನುಡಿಗಳಾಗಿದ್ದು , ಅವು ಇಂದಿಗೂ ಪ್ರಚುರದಲ್ಲಿದ್ದು ಅವನ್ನು ನಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಿದ್ದೇ ಆದರೆ ನಮ್ಮ ಬಾಳು ಸಾರ್ಥಕವಾಗುತ್ತದೆ ಎಂದು ಕಂದಾಯ ಇಲಾಖೆಯ ಭುವನೇಶ್ವರಿ ಅವರು ತಿಳಿಸಿದರು.              ಹುಳಿಯಾರಿನ ಶಿಕ್ಷಕ ಮಹೋಹನ್ ಕುಮಾರ್ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡಕವಿಕಾವ್ಯ ಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ  ವಚನ ಸಾಹಿತ್ಯ ಕುರಿತು  ಅವರು ವಿಶೇಷ ಉಪನ್ಯಾಸ ನೀಡಿದರು. ವಚನಕಾರರಲ್ಲೇ ಪ್ರಮುಖರಾದ ಬಸವೇಶ್ವರರು ಹೇಳಿದ ಕಾಯಕದ ಮಹತ್ವ ಎಂತಹದ್ದು ಎಂಬುದನ್ನು ಕುರಿತ ಕೆಲ ವಚನಗಳನ್ನು ಪಠಿಸುವ ಮೂಲಕ ಅವುಗಳ ಮಹತ್ವ ತಿಳಿಸಿದರು.              ಬನಶಂಕರಿ ದೇವಾಲಯದ ಅಧ್ಯಕ್ಷ ಅನಂತ್ ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ತ.ಶಿ.ಬಸವಮೂರ್ತಿ ಅವರು ಶಿವಶರಣರ ವಚನಗಳನ್ನು ಹಾಡುವ ಮೂಲಕ ಅವುಗಳ ತಾತ್ಪರ್ಯವನ್ನು ತಿಳಿಸಿದರು. ಲಾವಣ್ಯ ಭಾವಗೀತೆಯನ್ನು, ಶಿಕ್ಷಕ ಯಲ್ಲಪ್ಪ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.ಸಾಗರ್ ಪ್ರಾರ್ಥಿಸಿ, ಶಿಕ್ಷಕ ನಾರಾಯಣಪ್ಪ ನಿರೂಪಿಸಿ,ವಂದಿಸಿದರು.           

ರಾಜ್ಯಮಟ್ಟಕ್ಕೆ ಆಯ್ಕೆ

  ಹುಳಿಯಾರು ಹೋಬಳಿ ದಬ್ಬಗುಂಟೆ ಪ್ರೌಢಶಾಲೆಯ ಶಿಲ್ಪ ಹಾಗೂ ರವಿಕುಮಾರ್ ಜಿಲ್ಲಾಮಟ್ಟದ 800ಮೀ , 1500 ಮೀ ಓಟದಲ್ಲಿ ವಿಜೇತರಾಗುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಶಿಕ್ಷಕರು ಹಾಗೂ ಸಿಬ್ಬಂದಿಯವರು ಅಭಿನಂದಿಸಿದರು.

ಡೊಳ್ಳುಕುಣಿತ ಪ್ರದರ್ಶನ

ಹುಳಿಯಾರಿನ ವಿದ್ಯಾವಾರಿಧಿಶಾಲಾ ಮಕ್ಕಳು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಡೊಳ್ಳುಕುಣಿತ ಪ್ರದರ್ಶನ ನೀಡಿದರು. ಡಾ.ಲಕ್ಷ್ಮಣದಾಸ್ ಇತರರಿದ್ದಾರೆ.

ಹುಳಿಯಾರು : ಅದ್ದೂರಿ ಗಣೇಶ ವಿಸರ್ಜನೆ

       ಇಲ್ಲಿನ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿನ ನಂದಿರೂಢ ಬಾಲಗಣಪತಿ ಹಾಗೂ ಇಂದಿರಾನಗರದ ಗಜಾನನ ಸೇವಾ ಸಂಘದವರು ಪ್ರತಿಷ್ಠಾಪಿಸಿದ್ದ ಶೇಷಾರೂಢ ಗಣಪತಿಯ ವಿಸರ್ಜನಾ ಕಾರ್ಯ ಶುಕ್ರವಾರದಂದು ಅದ್ದೂರಿಯಾಗಿ ನಡೆಯಿತು. ಹುಳಿಯಾರಿನ ಇಂದಿರಾನಗರದ ಗಜಾನನ ಸೇವಾ ಛಾರಿಟಬಲ್ ಟ್ರಸ್ಟ್ ನವರು ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಸಮಯದಲ್ಲಿ ನೆರದಿದ್ದ ಭಕ್ತಾಧಿಗಳು.           ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದು ಗಣೇಶ ಮೂರ್ತಿಗೆ ಒಟ್ಟು 29 ದಿನಗಳ ಕಾಲ ನಿತ್ಯ ಅಲಂಕಾರ,ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗಿತ್ತು. ಪ್ರತಿ ದಿನ ಸಂಜೆ ಭಜನಾ ಕಾರ್ಯಕ್ರಮ, ಸಂಗೀತ ಕಚೇರಿ, ಪುರಾಣ ಪಠಣ, ಹರಿಕಥೆ ಸೇರಿದಂತೆ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಸಹ ಜರುಗಿದ್ದವು. ವಿಸರ್ಜನೆಯ ಅಂಗವಾಗಿ ಗುರುವಾರ ರಾತ್ರಿ ಗಣೇಶ ಮೂರ್ತಿಯನ್ನು ಹೂವಿನಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ ಕೂರಿಸಿ ಊರಿನ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಜಾನಪದ ಕಲಾ ತಂಡದೊಂದಿಗೆ ಯುವಕರುಗಳು ಸಹ ಹೆಜ್ಜೆಹಾಕುತ್ತಾ ಉತ್ಸವಕ್ಕೆ ರಂಗೇರಿಸಿದ್ದರು. ಶುಕ್ರವಾರ ಬೆಳಿಗ್ಗೆ ಗಣಪತಿಗೆ ಹಾಕಲಾಗಿದ್ದ ಹಾರವನ್ನು ಸಾರ್ವಜನಿಕವಾಗಿ ಹರಾಜು ಹಾಕಿದ ನಂತರ ಮೆರವಣಿಗೆ ಮೂಲಕ ತಿರುಮಲಾಪುರ ಕೆರೆಯಲ್ಲಿಗೆ ತೆರಳಿ ವಿಸರ್ಜಿಸಲಾಯಿತು.ಮೆರವಣಿಗೆಯುದ್ದಕ್ಕೂ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್, ತಾಂಡಾವಚಾರ್,

ಕಲೆ , ಸಂಗೀತ ಎಂತಹ ನೋವನ್ನು ಮರೆಸುತ್ತದೆ : ಶಾಸಕ ಸಿಬಿಎಸ್

       ಇಂದಿನ ಒತ್ತಡಮಯ ಜೀವನಜೆಂಜಾಟದಲ್ಲಿ ಸುಖ,ಶಾಂತಿ ,ನೆಮ್ಮದಿ ಎಂಬುದು ಕಣ್ಮರೆಯಾಗುತ್ತಿದ್ದು ಕಲೆ, ಸಂಗೀತದ ಆಸ್ವಾದನೆ ಮೂಲಕ ಕೆಲಸಮಯವಾದರೂ ಇಂತಹ ಒತ್ತಡಮಯ ಜೀವನದಿಂದ ಮುಕ್ತರಾಗಬಹುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.        ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪಟ್ಟಣದ ಎಂಪಿಎಸ್ ಶಾಲಾವರಣದಲ್ಲಿ ಗುರುವಾರ ಸಂಜೆ ಅಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು.          ಮರೆಯಾಗುತ್ತಿರುವ ಜಾನಪದ ಕಲೆಯನ್ನು ಮೆಲುಕುಹಾಕುವಂತೆ ಹಾಗೂ ಜಾನಪದ ಸೊಗಡನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಡಿಕೊಂಡು ಬರುತ್ತಿದ್ದು ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು. ಪ್ರಸ್ತುತದ ದಿನಗಳಲ್ಲಿ ಜನ ಟಿ.ವಿ ಗೆ ಮಾರು ಹೋಗಿದ್ದು ಗ್ರಾಮಗಳಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು. ಜಿಲ್ಲೆ,ತಾಲ್ಲೂಕು ಹಂತದಲ್ಲಿ ನಡೆಯುವಂತಹ ಕಾರ್ಯಕ್ರಮ ಹುಳಿಯಾರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಸೊಗಡನ್ನು ಬಿತ್ತರಿಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ,ಅದಕ್ಕೆ

ವಿಭಾಗೀಯ ಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಹೆಣ್ಣುಮಕ್ಕಳ ವಿಭಾಗದ ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ವಾಸವಿ ಶಾಲೆಯ ವಿದ್ಯಾರ್ಥಿನಿಯರು.

ಖೋಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ

 ಹುಳಿಯಾರಿನ ವಾಸವಿ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಹಂತದ ಕ್ರೀಡಾಕೂಟದ ಖೋಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಯಶಸ್ವಿ ಮಂಗಳಯಾನ ವಾಸವಿ ಶಾಲೆಯಲ್ಲಿ ಸಿಹಿ ಹಂಚಿಕೆ

        ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿ ಮಂಗಳಯಾನ ಮಾಡಿದ್ದರ ಹಿನ್ನಲೆಯಲ್ಲಿ ಪಟ್ಟಣದ  ವಾಸವಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಹುಳಿಯಾರಿನ ವಾಸವಿ ಶಾಲೆಯಲ್ಲಿ ಮುಖ್ಯಶಿಕ್ಷಕ ಮಹೇಶ್ ಮಕ್ಕಳಿಗೆ ಮಂಗಳಯಾನದ ಯಶಸ್ಸಿನ ಬಗ್ಗೆ ತಿಳಿಸಿ, ಸಂಭ್ರಮಾಚರಣೆ ಮಾಡಿದರು.          ಮುಖ್ಯ ಶಿಕ್ಷಕ ಮಹೇಶ್ ಮಾತನಾಡಿ ಮಂಗಳಯಾನವನ್ನು ಯಶಸ್ವಿಗೊಳಿಸಿದ್ದು ನಮ್ಮ ವಿಜ್ಞಾನಿಗಳ ಐತಿಹಾಸಿಕ ಸಾಧನೆಯಾಗಿದ್ದು ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಇವರ ಈ ಸಾಧನೆ ಶ್ಲಾಘನೀಯ ಎಂದರು. ಇಂತಹ ಮಹತ್ವದ ಕಾರ್ಯಕ್ಕೆ ಕೈಹಾಕಿ ಅದನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ ಇಸ್ರೋದ ಸಾಧನೆ ಅವಿಸ್ಮರಣೀಯ ಎಂದರು. ಮಂಗಳಯಾನಕ್ಕೆ ವಿಜ್ಞಾನಿಗಳು ಪಟ್ಟ ಪರಿಶ್ರಮ ಎಂತಹದ್ದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ ಇಂತಹ ವಿಜ್ಞಾನಿಗಳಂತೆ ಇಂದಿನ ವಿದ್ಯಾರ್ಥಿಗಳು ಹೊರಹುಮ್ಮಬೇಕು ಎಂದು ತಿಳಿಸಿದರು.        ಸಂಸ್ಥೆಯ ಅಧ್ಯಕ್ಷ ಲಕ್ಷ್ಮಿಕಾಂತ್, ಕಾರ್ಯದರ್ಶಿ ರಾಮನಾಥ್,ನಿರ್ದೇಶಕರಾದ ಬಿ.ವಿ.ಶ್ರೀನಿವಾಸ್, ಚಂದ್ರಶೇಖರ್, ಮುಖ್ಯ ಶಿಕ್ಷಕ ರಮೇಶ್ ಸೇರಿದಂತೆ ಇತರ ಶಿಕ್ಷಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಶಿಸ್ತು ರೂಪಿಸುವ ನಿಟ್ಟಿನಲ್ಲಿ ಸಮವಸ್ತ್ರ ವಿತರಣೆ : ಶಾಸಕ ಸಿಬಿಎಸ್

ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಸಮಾನತೆ ಹಾಗೂ ಶಿಸ್ತು ರೂಪಿಸುವ ಉದ್ದೇಶದಿಂದ ತಾಲ್ಲೂಕಿನ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುತ್ತಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಸಮವಸ್ತ್ರ ವಿತರಿಸಿದರು. ಪ್ರಾಚಾರ್ಯ ನಟರಾಜ್ ಹಾಗೂ ಇತರರಿದ್ದಾರೆ. ಹತ್ತನೇ ತರಗತಿಯವರೆಗೆ ಸರ್ಕಾರದಿಂದ ಸಮವಸ್ತ್ರ ಹಾಗೂ ಸೈಕಲ್ ವಿತರಿಸಲಾಗುತ್ತಿದೆ ಆದರೆ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ಸೌಲಭ್ಯವಿಲ್ಲ ಆ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಹ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವುದರಿಂದ ಕಾಲೇಜಿನಲ್ಲಿ ಶಿಸ್ತಿನ ವಾತಾವರಣ ನಿರ್ಮಾಣವಾಗುತ್ತದಲ್ಲದೆ ವಿದ್ಯಾರ್ಥಿಗಳಲ್ಲಿ ಯಾವುದೇ ಭೇದಭಾವ ಉಂಟಾಗುವುದಿಲ್ಲ ಎಂದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಸಮವಸ್ತ ವಿತರಿಸುತ್ತಿದ್ದು ಅದನ್ನು ವಾರದಲ್ಲಿ ಕಡ್ಡಾಯವಾಗಿ ನಾಲ್ಕುದಿನ ಹಾಕಿಕೊಂಡು ಬರಬೇಕು ಎಂದರಲ್ಲದೆ, ಪ್ರಸ್ತುತದ ದಿನಗಳಲ್ಲಿ ಕೇವಲ ಪಾಸಾದರೆ ಯಾವುದೇ ಸರ್ಕಾರಿ ಅಥವಾ ಇನ್ನಿತರ ಉತ್ತಮ ಕೆಲಸ ಪಡೆಯಲಾಗುವುದಿಲ್ಲ, ಚೆನ್ನಾಗಿ ಓದಿ ಹೆಚ್ಚಿನ ಅಂಕ

ಸಂಗೀತ ಕಛೇರಿ

ಹುಳಿಯಾರಿನ ಸಂಗೀತ ಶಿಕ್ಷಕ ಸುಭಾಷ್ ಪಾಟೀಲ್ ತಂಡದಿಂದ ನಡೆದ ಭಾವಗೀತೆಗಳ ಸಂಗೀತ ಕಛೇರಿ ಕೇಳುಗರ ಮನಸೂರೆಗೊಳ್ಳುವಂತಿತ್ತು.

ವಿಸರ್ಜನೆ ಅಂಗವಾಗಿ ಹೋಮ ಹಾಗೂ ಅನ್ನಸಂತರ್ಪಣೆ

    ಹುಳಿಯಾರು  ಪಟ್ಟಣದ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನ ವಿಸರ್ಜನಾ ಕಾರ್ಯ ಶುಕ್ರವಾರ ನಡೆಯಲಿದ್ದು, ಇದರ ಅಂಗವಾಗಿ ಬುಧವಾರದಂದು ಗಣಪತಿಗೆ ಹೋಮ ನಡೆಯಿತು. ಹುಳಿಯಾರಿನ ಗಣಪತಿ ದೇವಾಲಯದಲ್ಲಿ ವಿಶೇಷ ಹೋಮ ನೆರವೇರಿತು.         ಎಚ್.ಎಸ್.ಲಕ್ಷ್ಮಿನರಸಿಂಹಯ್ಯ ಮತ್ತು ರವಿ ಪೌರೋಹಿತ್ಯದಲ್ಲಿ ಗಣಪತಿಗೆ ನಾಂದಿ, ಪುಣ್ಯಾಹ, ಅರ್ಚನೆ, ಅಭಿಷೇಕ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನಡೆಸಿದ್ದಲ್ಲದೆ, ನವಗ್ರಹ,ಮೃತ್ಯುಂಜಯ,ಮಹಾಲಕ್ಷ್ಮಿ,ಅಂಜನೇಯ ಹೋಮಗಳನ್ನು ನಡೆಸಲಾಯಿತು. ಮಹಾಮಂಗಳಾರತಿ ಹಾಗೂ ಪೂರ್ಣಾಹುತಿ ಅರ್ಪಿಸಿದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಹುಳಿಯಾರಿನ ಶ್ರೀ ಗಣಪತಿ ದೇವಾಲಯದಲ್ಲಿ ಬುಧವಾರದಂದು ವಿಶೇಷ ಹೋಮಕಾರ್ಯ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.         ವೆಂಕಟಾಚಲಪತಿಶೆಟ್ಟರು ಕುಟುಂಬ ವರ್ಗದವರಿಂದ ಪಾನಕಪನಿವಾರ ಸೇವೆ ನಡೆಯಿತು. ಈ ವೇಳೆ ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್, ತಾಂಡವಾಚಾರ್, ನಾಗಣ್ಣ, ಕಿರುತೆರೆ ಕಲಾವಿದ ಗೌಡಿ, ಸುದರ್ಶನ್, ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸೌರಭ

          ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇಂದು ಗುರುವಾರ ಮಧ್ಯಾಹ್ನ ಪಟ್ಟಣದ ಎಂಪಿಎಸ್ ಶಾಲಾವರಣಾದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆವಹಿಸುವರು. ತಹಶೀಲ್ದಾರ್ ಕಾಮಾಕ್ಷಮ್ಮ, ಜಿ.ಪಂ.ಸದಸ್ಯರಾದ ಮಂಜುಳಾ, ನಿಂಗಮ್ಮ, ತಾ.ಪಂ.ಸದಸ್ಯರಾದ ಫಾತೀಮಾ, ಜಯಲಕ್ಷ್ಮಿ, ಜಯಣ್ಣ,ಕೆಂಕೆರೆನವೀನ್, ಸೀತಾರಾಮಯ್ಯ, ಕವಿತಾ,ವಸಂತಯ್ಯ, ತಾಲ್ಲೂಕು ಕಸಾಪ ಅಧ್ಯಕ್ಷ ರವಿಕುಮಾರ್ ಅತಿಥಿಗಳಾಗಿ ಆಗಮಿಸುವರು. ಸಾಂಸ್ಕೃತಿಕಕಾರ್ಯಕ್ರಮದಲ್ಲಿ ಜಿ.ಎಸ್.ಶ್ರೀಕಂಠಭಟ್ ತಂಡದಿಂದ ಭಕ್ತಿ ಸಂಗೀತ, ಪ್ರಕಾಶ್ ಹೆಗ್ಗಡೆ ತಂಡದವರಿಂದ ಕೊಳಲುವಾದನ, ವಾಣಿವೆಂಕಟರಾಮು ತಂಡದಿಂದ ಭರತನಾಟ್ಯ, ಡಾ.ಲಕ್ಷ್ಮಣದಾಸ್ ತಂಡದಿಂದ ರಂಗಗೀತೆಗಳ ಗಾಯನ,ಮಲ್ಲಿಕಾರ್ಜುನ್ ಕೆಂಕೆರೆ ತಂಡವರಿಂದ ಸುಗಮ ಸಂಗೀತ, ವಿದ್ಯಾವಾರಿಧಿ ಶಾಲಾಮಕ್ಕಳಿಂದ ಜನಪದ ನೃತ್ಯಪ್ರದರ್ಶನ ಹಾಗೂ ಮಾರುತಿ ನಾಟಕ ಮಂಡಳಿಯಿಂದ "ದೈವ ತಂದ ಬಿರುಗಾಳಿ" ನಾಟಕ ಪ್ರದರ್ಶನ ನಡೆಯಲಿದೆ.

ಹುಳಿಯಾರು ಗಣೇಶನ ಗಂಗಾ ಪ್ರವೇಶ

         ಇಲ್ಲಿನ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನ ವಿಸರ್ಜನಾ ಮೆರವಣಿಗೆ ಇಂದು(ತಾ.25) ಗುರುವಾರ ರಾತ್ರಿ ನಡೆಯಲಿದೆ. ವಿಸರ್ಜನಾ ಮೆರವಣಿಗೆ ಅಂಗವಾಗಿ ಪೋಲಿಸ್ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿಯವರಿಂದ ಮುಂಜಾನೆ ಹಾಗೂ ಸಂಜೆ ಭಕ್ತಾಧಿಗಳಿಂದ ಗಣೇಶ ಮೂರ್ತಿಗೆ ವಿಶೇಷ ಪೂಜಾಕಾರ್ಯ ನಡೆಯಲಿದೆ. ರಾತ್ರಿ 11 ವೇಳೆಗೆ ಸ್ವಾಮಿಯವರನ್ನು ಭವ್ಯ ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ನಾದಸ್ವರ, ಬೊಂಬೆ ಕುಣಿತ, ವೀರಗಾಸೆ, ನಾಸಿಕ್ ಡೋಲ್,ಕೀಲುಕುದುರೆ,ಡೊಳ್ಳುಕುಣಿತ, ಚಿಟ್ಟಿಮೇಳದೊಂದಿಗೆ ಊರಿನ ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ.ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗಣಪತಿ ಮಂಡಳಿಯವರು ಕೋರಿದ್ದಾರೆ.

ಲಕ್ಕೇನಹಳ್ಳಿಯಲ್ಲಿ (ತಾ.25) ಎನ್.ಎಸ್.ಎಸ್.ಶಿಬಿರ

          ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಇಂದಿನಿಂದ (ತಾ.25) ಗುರುವಾರದಿಂದ ತಾ.1 ರ ಬುಧವಾರದ ವರೆಗೆ ಒಂದುವಾರದ ಕಾಲ 2014-15 ನೇ ಸಾಲಿನ ಎನ್.ಎಸ್.ಎಸ್. ವಿಶೇಷ ಶಿಬಿರ ನಡೆಯಲಿದೆ.        ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯುವ ಶಿಬಿರವನ್ನು ಜಿ.ಪಂ.ಸದಸ್ಯೆ ನಿಂಗಮ್ಮ ಉದ್ಘಾಟಿಸುವರು. ಶಿಬಿರದ ನಿರ್ದೇಶಕರಾದ ಪ್ರಾಚಾರ್ಯ ನಟರಾಜ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ತಾ.ಪಂ.ಸದಸ್ಯೆ ಕವಿತಾ,ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ,ಉಪಾಧ್ಯಕ್ಷ ಹರೀಶ್,ಸದಸ್ಯರಾದ ಭಾಗ್ಯಮ್ಮ,ಈರಮ್ಮ,ಕಾರ್ಯುದರ್ಶಿ ರೇವಯ್ಯ ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಸೇರಿದಂತೆ ಇತರರು ಆಗಮಿಸಲಿದ್ದು ಒಂದುವಾರದ ಕಾಲ ನಿತ್ಯ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿರುವುದಾಗಿ ಶಿಬಿರಾಧಿಕಾರಿ ಆರ್.ಯೋಗೀಶ್ ತಿಳಿಸಿದ್ದಾರೆ.

ನವರಾತ್ರಿಯ ಬೊಂಬೆ ಹಬ್ಬದ ಸಂಭ್ರಮ

       ಮಹಾಲಯ ಅಮಾವಾಸ್ಯೆ ಮುಗಿದು ಆಶ್ವಿಜ ಮಾಸದ ಪಾಡ್ಯದಿಂದ ನವರಾತ್ರಿ ಸಂಭ್ರಮ ಶುರುವಾಗಲಿದೆ.ನಾಡಹಬ್ಬವಾಗಿ ದಸರಾದ ಆಚರಣೆಯ ಸಂತಸ ಒಂದೆಡೆಯಾದರೆ ಮನೆಗಳಲ್ಲಿ ಬೊಂಬೆ ಕೂರಿಸುವ ಸಡಗರ ಮತ್ತೊಂದೆಡೆ.ಮನೆಗಳಲ್ಲಿ ಬೊಂಬೆಗಳನ್ನು ಚೆಂದವಾಗಿ ಜೋಡಿಸಿ ಪೂಜಿಸುವುದು ಕೆಲವೊಂದು ಮನೆಗಳಲ್ಲಿ ಸಂಪ್ರದಾಯವಾಗಿದೆ.ಬೊಂಬೆಹಬ್ಬ ನವರಾತ್ರಿಯ ಒಂಬತ್ತು ದಿನಗಳು ನಡೆಯಲಿದ್ದು ಇದಕ್ಕಾಗಿ ಎರಡು ಮೂರು ದಿನಗಳಿಂದಲೆ ಬೊಂಬೆ ಜೋಡಿಸುವ ಕಾರ್ಯ ಆರಂಭವಾಗುತ್ತದೆ. ಪಾಡ್ಯದಂದು ಆಚರಿಸುವ ಬೊಂಬೆಹಬ್ಬದ ಪ್ರಯುಕ್ತ ಹುಳಿಯಾರಿನ ಮನೆಯೊಂದರಲ್ಲಿ ಬೊಂಬೆ ಕೂರಿಸಿರುವುದು.           ಬೊಂಬೆ ಹಬ್ಬವೆಂದರೆ ಪಟ್ಟದ ಬೊಂಬೆಯ ಜೊತೆಗೆ ಒಂದಷ್ಟು ಬೊಂಬೆಗಳನ್ನು ಇಟ್ಟು ಪೂಜಿಸುವುದು.ಸಂಗ್ರಹದಲ್ಲಿರುವ ಎಲ್ಲಾರೀತಿಯ ಬೊಂಬೆಗಳನ್ನು ಜೋಡಿಸುತ್ತರಾದರೂ ಪಟ್ಟದ ಬೊಂಬೆಗೆ ಪ್ರಥಮ ಪ್ರಾಶಸ್ತ್ಯ. ಪಟ್ಟದ ಬೊಂಬೆಯು ಚಂದನದಿಂದ ಕೆತ್ತಿದ ಗಂಡು ಹೆಣ್ಣಿನ ಜೋಡಿಯ ಸುಂದರವಾದ ಸಾಂರದಾಯಿಕ ಶೈಲಿಯ ಬೊಂಬೆಯಾಗಿದ್ದು ಇದನ್ನು ಶ್ರೀನಿವಾಸ ಪದ್ಮಾವತಿಯ ಪ್ರತೀಕವೆಂದು ಭಾವಿಸಲಾಗುತ್ತದೆ.ಹೆಚ್ಚಾಗಿ ತಿರುಪತಿಯಲ್ಲಿ ದೊರಕುವ ಈ ಬೊಂಬೆಗೆ ಯಾವಾಗಲೂ ಅಗ್ರ ಸ್ಥಾನ.ಪಟ್ಟದ ಬೊಂಬೆಗಳಿಗೆ ಸಾಂಪ್ರದಾಯಿಕ ಉಡುಗೆ ತೊಡಿಸಿ ಶೃಂಗಾರ ಮಾಡುವುದು ಕೂಡ ಒಂದು ಕಲೆಯಾಗಿದ್ದು ಎಲ್ಲರಿಗೂ ಬರುವಂತದಲ್ಲ. ಮದುವೆಯ ಸಮಯದಲ್ಲಿ ತಾಯಿ ಮನೆಯಿಂದ ಮಗಳಿಗೆ ಈ ಬೊಂಬೆ ಕೊಡುವುದು ವಾಡಿಕೆ.ಸುಖ ದಾಂಪತ್ಯದ ಪ್ರತೀಕವೆನ್

ಕಟ್ಟೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

           ಕಟ್ಟೆಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಸಾವನಪ್ಪಿದ ಘಟನೆ ಹೋಬಳಿಯ ಗುರುವಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.          ಮೃತ ವಿದ್ಯಾರ್ಥಿ ಕಾರಪ್ಪ ಎಂಬುವರ ಪುತ್ರ ಮಂಜುನಾಥ್ (15) ಆಗಿದ್ದು, ರಜ ದಿನವಾದ್ದರಿಂದ ಜಾನುವಾರು ಮೇಯಿಸಲೆಂದು ಹೋಗಿದ್ದ ಈತ ನೀರುಕುಡಿಸಲೆಂದು ಕಟ್ಟೆಗೆ ತೆರಳಿದಾಗ ದುರ್ಘಟನೆ ಸಂಭವಿಸಿದೆ. ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಆಗಿರುವ ಈತ ಗ್ರಾಮದ ಸಮೀಪವೇ ಇದ್ದ ಗಾಣಗಿತ್ತಿ ಕಟ್ಟೆಯಲ್ಲಿ ನೀರು ಕುಡಿಸುವ ಸಂದರ್ಭದಲ್ಲಿ ಕಾಲುಜಾರಿ ಮೃತಪಟ್ಟಿದ್ದಾನೆ. ವಿಚಾರ ಅರಿತ ಬಿಇಒ ಸಾ.ಚಿ.ನಾಗೇಶ್ ಮೃತ ವಿದ್ಯಾರ್ಥಿಯ ಕುಟುಂಬದವರಿಗೆ ಸಾಂತ್ವಾನ ಹೇಳಿ ಇಲಾಖೆಯಿಂದ ಸಿಗಬಹುದಾದ ಸೌಲಭ್ಯ ಕೊಡಿಸುವ ಭರವಸೆ ನೀಡಿದರು.        ಮೃತ ವಿದ್ಯಾರ್ಥಿಯ ನಿಧನದ ಹಿನ್ನಲೆಯಲ್ಲಿ ಶಾಲೆಗೆ ರಜಾ ಘೋಷಿಸಲಾಗಿತ್ತು. ಪ್ರಕರಣ ಇಲ್ಲಿನ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ಸಮುದಾಯದ ಸಹಕಾರ ಸಂಘ ಅಗತ್ಯ : ನೀಲಕಂಠಯ್ಯ

        ಸಮಾಜದಲ್ಲಿನ ಯಾವುದೇ ಒಂದು ಸಂಘ ಹೆಚ್ಚು ಅಭಿವೃದ್ಧಿಯಾಗಬೇಕು ಎಂದರೆ ಅದಕ್ಕೆ ಆ ಸಮುದಾಯದವರ ಸಂಪೂರ್ಣ ಬೆಂಬಲ,ಸಹಕಾರ ಅತ್ಯಗತ್ಯ ಎಂದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ತಿಳಿಸಿದರು. ಹುಳಿಯಾರಿನಲ್ಲಿ ನಡೆದ ವೀರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯ ಉದ್ಘಾಟನೆಯಲ್ಲಿ ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ, ಗಂಗಾಧರಯ್ಯ, ಲೋಕೇಶ್,ಯೋಗಮೂರ್ತಿ ಇದ್ದಾರೆ.           ಪಟ್ಟಣದ ಬಸವಭವನದಲ್ಲಿ ಭಾನುವಾರ ನಡೆದ ಹೋಬಳಿಯ ವೀರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.            ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿ ಅವರು ಸಿದ್ದಾಂತಗಳನ್ನು ತಿಳಿಸಿಲ್ಲ ಅವರು ಅಂದು ಹೇಳಿದ ವಚನಗಳು ಸಮಾಜದ ಎಲ್ಲಾ ಸಮುದಾಯದವರಿಗೂ ಅನ್ವಯವಾಗುವಂತವು ಎಂದರು. ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ವೀರಶೈವ ಸಮುದಾಯದವರಿದ್ದರೂ ಸಹ ಯಾವುದೇ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳುವಂತೆ ಮಾತ್ರ ಕಡಿಮೆಯಿರುವುದು ನಮ್ಮಲ್ಲಿ ಒಗ್ಗಟ್ಟಿಲ್ಲವೇನೋ ಎನ್ನುವಂತೆ ಭಾಸವಾಗುತ್ತದೆ. ಆ ನಿಟ್ಟಿನಲ್ಲಿ ಜನಾಂಗದವರು ನಮ್ಮ ಸಮುದಾಯದ ಕಾರ್ಯಕ್ರಮಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಬಸವೇಶ್ವರ ಪತ್ತಿನ ಸಹಕಾರ ಸಂಘ ಪ್ರಾರಂಭದಿಂದ ಇಂದಿನವರೆಗೂ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗುತ್ತಾ ಲಾಭಾಂಶವನ್ನ

ತಿರುಮಲಾಪುರ ಕೆರೆ ಒತ್ತುವರಿ ತೆರವು

        ಹುಳಿಯಾರು  ಹೋಬಳಿ ಜೋಡಿತಿರುಮಲಾಪುರದ ಕೆರೆ ಒತ್ತುವರಿ ಜಾಗದ ತೆರವು ಕಾರ್ಯ ತಹಶೀಲ್ದಾರ್ ಕಾಮಾಕ್ಷಮ್ಮ ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಹುಳಿಯಾರು ಹೋಬಳಿ ಜೋಡಿತಿರುಮಲಾಫುರದ ಕೆರೆಯ ಒತ್ತುವರಿ ಜಾಗದಲ್ಲಿನ ತೆಂಗಿನ ಮರಗಳನ್ನು ತಹಶೀಲ್ದಾರ್ ಕಾಮಾಕ್ಷಮ್ಮ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.        ಈ ಬಗ್ಗೆ ಪತ್ರಿಕೆಯವರೊಂದಿಗೆ ಮಾತನಾಡಿದ ತಹಶೀಲ್ದಾರ್ ಕಾಮಾಕ್ಷಮ್ಮ ತಿರುಮಲಾಪುರ ಕೆರೆ ಹುಳಿಯಾರಿನ ಒಣಕಾಲುವೆಯಿಂದ ಪ್ರಾರಂಭವಾಗಿ ಸೀಗೆಬಾಗಿ,ತೊರೆಮನೆ,ನಂದಿಹಳ್ಳಿವರೆಗೆ ವಿಸ್ತಾರವಾಗಿದ್ದು ಕೆರೆದಂಡೆಯನ್ನು ಒತ್ತುವರಿ ಮಾಡಿಕೊಂಡು ತೆಂಗಿನ ತೋಟಗಳೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸರ್ವೆ ಮಾಡಿಸಿ ಕೆರೆ ಜಾಗವನ್ನು ಗುರ್ತಿಸಿ, ಮಾರ್ಕ್ ಮಾಡಲಾಗಿದ್ದು ಸುಮಾರು ಇಪ್ಪತ್ತು ಎಕರೆಯಷ್ಟು ಕೆರೆ ಜಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಸುಮಾರು ನೂರಕ್ಕೂ ಹೆಚ್ಚು ತೆಂಗಿನ ಮರಗಳು ಕೆರೆ ಜಾಗದಲ್ಲಿದ್ದು, ಅವುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿಸುವುದಾಗಿ ತಿಳಿಸಿದರು.            ಸರ್ಕಾರಿ ಆದೇಶದಂತೆ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಂಡಿದ್ದು ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುತ್ತೇವೆ. ಇಂದು ತಿರುಮಲಾಪುರದ ಕೆರೆ ಜಾಗ ತೆರವು ಮಾಡುವ ಮೂಲಕ ಈ ಕಾರ್ಯಾಚರಣೆ ಚಾಲನೆಗೊಂಡಿರ

ಹುಳಿಯಾರು ಕೆರೆ ಒತ್ತುವರಿ ತೆರವಿಗೆ ಕ್ಷಣಗಣನೆ ಪುನರ್ವಸತಿ ಭಾಗ್ಯ ಇದೆಯೋ , ಇಲ್ಲವೋ ಎಂಬುದು ಯಕ್ಷಪ್ರಶ್ನೆ

           ತಾಲ್ಲೂಕು ಆಡಳಿತದಿಂದ ಹುಳಿಯಾರು ಅಮಾನಿಕೆರೆ ಒತ್ತುವರಿ ಜಾಗದ ಸರ್ವೆಕಾರ್ಯ ಮುಗಿದಿದ್ದು ತೆರವುಗೊಳಿಸಲು ಕ್ಷಣಗಣನೆ ನಡೆದಿದೆ. ಹಿಂದೆ ಹಲವು ಬಾರಿ ಕಾರ್ಯಾಚರಣೆ ನಡೆದಿದ್ದರೂ ಸಹ ರಾಜಕೀಯ ಒತ್ತಡದ ನಡುವೆ ಕೈಬಿಡಲಾಗಿತ್ತು. ಸದ್ಯ ಕೋರ್ಟ್ ಆದೇಶದಂತೆ ಅತಿಕ್ರಮ ತೆರವುಗೊಳಿಸಲು ಮುಂದಾಗಿರುವ ತಾಲ್ಲೂಕು ಆಡಳಿತ ಈ ನಿಟ್ಟಿನಲ್ಲಿ ಕೆರೆ ಅಂಗಳದ ಸಮೀಕ್ಷೆ ಪೂರ್ಣಗೊಳಿಸಿ ಒತ್ತುವರಿ ಜಾಗವನ್ನು ಗುರುತು ಮಾಡಿದ್ದಾರೆ. ಹುಳಿಯಾರಿನ ಶಂಕರಪುರಬಡಾವಣೆಯ ಕೆರೆ ಅಂಗಳದಲ್ಲಿನ ನಿರ್ಗತಿಕರ ಗುಡಿಸಲುಗಳು.             ಹುಳಿಯಾರು ಕೆರೆ ಸಾಕಷ್ಟು ವಿಸ್ತೀರ್ಣವಾಗಿದ್ದು ಕೇಶವಾಪುರ, ವಳಗೆರೆಹಳ್ಳಿ,ಶಂಕರಪುರ ಹಾಗೂ ಬಸ್ ನಿಲ್ದಾಣದ ಸೇರಿದಂತೆ ಒಟ್ಟು 45 ಎಕರೆ ಪ್ರದೇಶದಷ್ಟು ಜಾಗ ಜಮೀನು , ಇಟ್ಟಿಗೆ ಫ್ಯಾಕ್ಟರಿ,ಮನೆ ಹಾಗೂ ಅಂಗಡಿದಾರರಿಂದ ಒತ್ತುವರಿಯಾಗಿದೆ.ಸಮೀಕ್ಷೆಯಲ್ಲಿ 199 ಮಂದಿಯ ಪಟ್ಟಿ ಮಾಡಲಾಗಿದ್ದು ಅದರಲ್ಲಿ 90 ಹಾಗೂ 86 ಅಂಗಡಿಗಳು ಸೇರಿದೆ.         ಗುಡಿಸಲುವಾಸಿಗಳು: ಸುಮಾರು 90ಕ್ಕೂ ಅಧಿಕ ಕುಟುಂಬಗಳು ಕಳೆದ ಹತ್ತಾರು ವರ್ಷಗಳಿಂದ ಮನೆಕಟ್ಟಿಕೊಂಡು ಇಲ್ಲಿ ಬೀಡುಬಿಟ್ಟಿದ್ದು, ಬಹುತೇಕರು ನಿರ್ಗತಿಕರು ಹಾಗೂ ಕೂಲಿನಾಲಿ ಮಾಡುವ ಗುಡಿಸಲು ವಾಸಿಗಳೇ ಜನರೇ ಆಗಿದ್ದು, ನಿತ್ಯ ಕೂಲಿಮಾಡಿ ಅದರಿಂದ ಬರುವ ಪುಡಿಗಾಸಿನಿಂದ ಜೀವನ ನಡೆಸುತ್ತಿದ್ದಾರೆ,ಇವರಿಗೆ ಸ್ವಂತ ಜಮೀನಾಗಲಿ, ಖಾಯಂ ಕೆಲಸಗಳಾಗಲಿ,ವರಮಾನ ಬರುವ ಯಾವುದೇ

ಪ್ರತಿಭಾಪುರಸ್ಕಾರ

  ಹುಳಿಯಾರು ಹೋಬಳಿ ವೀರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದದವತಿಯಿಂದ ಪ್ರತಿಭಾಪುರಸ್ಕಾರ ನಡೆಸಲಾಯಿತು. ಅಧ್ಯಕ್ಷ ನೀಲಕಂಠಯ್ಯ, ಗಂಗಾಧರಯ್ಯ,ಧನಂಜಯ್,ರಾಜಶೇಖರ್ ಇತರರಿದ್ದಾರೆ.

ಬಿತ್ತಲು ಬೀಜವಿಲ್ಲದೆ ಕೃಷಿ ಇಲಾಖೆ ಮೊರೆ ಹೋಗುವಂತಾಗಿದೆ : ರಾಮಕೃಷ್ಣಪ್ಪ

           ಹಿಂದಿನ ಕಾಲದಲ್ಲಿ ರೈತರು ಬಿತ್ತನೆ ಬೀಜದ ಕಾಳುಗಳನ್ನು ಸುರಕ್ಷಿತವಾಗಿಟ್ಟು ಕೊಂಡು ಅವುಗಳನ್ನೇ ಮುಂದಿನ ವರ್ಷದಲ್ಲಿ ಬಿತ್ತನೆ ಮಾಡುತ್ತಿದ್ದರು. ಆದರೆ ಈಗ ಬರಗಾಲದಿಂದಾಗಿ ಫಸಲು ಬಾರದೆ, ಬಿತ್ತಲು ಬೀಜದಕಾಳುಗಳಿಲ್ಲದೆ, ಬಿತ್ತನೆ ಬೀಜಕ್ಕಾಗಿ ಕೃಷಿ ಇಲಾಖೆಯ ಮೊರೆ ಹೋಗುವಂತಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ತಿಳಿಸಿದರು. ಹುಳಿಯಾರಿನಲ್ಲಿ ಕೃಷಿ ಇಲಾಖೆವತಿಯಿಂದ ನಡೆದ ಭೂಚೇತನಯೋಜನೆಯಡಿ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ವಿಜ್ಞಾನ ಕೇಂದ್ರ ರಾಮಕೃಷ್ಣಪ್ಪ ಉದ್ಘಾಟಿಸಿದರು.           ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕೃಷಿ ಇಲಾಖೆವತಿಯಿಂದ ಆಯೋಜಿಸಿದ್ದ ಭೂಚೇತನ ಯೋಜನೆಯಡಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭೂಚೇತನ ಯೋಜನೆ ಭೂಮಿಗೆ ಚೇತನವನ್ನು ನೀಡುವಂತ ಯೋಜನೆಯಾಗಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಿದ್ದು ಅವುಗಳನ್ನು ಸಮಗ್ರವಾಗಿ ಬಳಸಿಕೊಳ್ಳುವ ಮೂಲಕ ಫಲವತ್ತತೆ ಕಳೆದುಕೊಳ್ಳುತ್ತಿರುವ ಭೂಮಿಗೆ ಹೊಸ ಚೇತನವನ್ನು ನೀಡುವಂತಾಗಬೇಕು ಎಂದರು. ರೈತರಿಗೆ ಸೂಕ್ತ ಮಾರ್ಗದರ್ಶನ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಕೃಷಿ ಇಲಾಖೆ ಸ್ಥಾಪಿಸಿದ್ದು ಅದರಡಿ ಬೆಳೆ ಬಿತ್ತಲು, ಕಾಲಕ್ಕೆ ತಕ್ಕಂತೆ ಗೊಬ್ಬರ,ನೀರು ಹಾಯಿಸುವುದರ ಬಗ್ಗೆ, ಕೃಷಿಯಲ್ಲಿ ಯಂತ್ರಗಳ ಬಳಕೆ ಹಾಗೂ ತಾಂತ್ರಿಕ ಸಲಹೆಗಳನ್ನ ಪಡೆಯುವಲ್ಲಿ ರೈತರು ಮುಂದಾಗಬೇಕು ಎಂದರು. ಶ್ರಮಪಟ್ಟು

ವಿನಾಶದ ಅಂಚಿನಲ್ಲಿ ದೇಶಿಕಲೆಗಳು : ಜಿ.ಪಂ,ಮಂಜುಳಾ

      ಪಸ್ತುತದ ದಿನಗಳಲ್ಲಿ ದೇಶಿಕಲೆಗಳು ವಿನಾಶದ ಅಂಚಿನಲ್ಲಿದ್ದು, ಜಾನಪದ ಕಲೆಗಳು ಅವಸಾನದ ಹಂತದಲ್ಲಿವೆ ಎಂದು ಜಿ.ಪಂ.ಸದಸ್ಯೆ ಮಂಜುಳಾ ವಿಷಾದಿಸಿದರು. ಹುಳಿಯಾರಿನಲ್ಲಿ ನಡೆದ ಜಾನಪದ ಸಿರಿ ಸಿಂಚನ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.            ಪಟ್ಟಣದಲ್ಲಿ ನಡೆದ ಜಾನಪದ ಸಿರಿ ಸಿಂಚನ ಕಾರ್ಯಕ್ರ್ಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪ್ರತಿಭಾಪುರಸ್ಕಾರ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಸದಸ್ಯೆ ಸಿದ್ದಗಂಗಮ್ಮ, ಲ.ಪು.ಕರಿಯಪ್ಪ, ಗವಿರಂಗಯ್ಯ, ಕಿರುತೆರೆ ಕಲಾವಿದ ಗೌಡಿ,ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಉದ್ಘಾಟನೆ

ಹುಳಿಯಾರಿನ ಕನಕದಾಸ ಶಾಲೆಯಲ್ಲಿ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ವಿಜ್ಞಾನಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ, ಸಂಸ್ಥೆಯ ಶಿವಪ್ರಕಾಶ್ ಉದ್ಘಾಟಿಸಿದರು. 

ಅಗ್ನಿಶಾಮಕದಳದಿಂದ ಪ್ರಾತ್ಯಕ್ಷಿಕೆ

ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಯವರು ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಬಗೆಯನ್ನು ಠಾಣಾಧಿಕಾರಿ ಪಂಚಾಕ್ಷರಯ್ಯ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ತೋರ್ಪಡಿಸಿದರು.

ಥ್ರೋ ಬಾಲ್ ನಲ್ಲಿ ವಿಭಾಗೀಯ ಮಟ್ಟಕ್ಕೆ

        ಇಲ್ಲಿನ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಹೆಣ್ಣುಮಕ್ಕಳ ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೆಣ್ಣುಮಕ್ಕಳ ಥ್ರೋಬಾಲ್ ನಲ್ಲಿ ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ಜ್ಞಾನಜ್ಯೋತಿ ಎಚ್.ಪಿ.ಎಸ್ ನ ವಿದ್ಯಾರ್ಥಿಗಳು.         ಗೌತಮಿ,ಸ್ನೇಹ,ಅನುಷಾ,ವಿನುತ,ಮೇಘನಾ,ದಿವ್ಯ,ಸಿಂಧು,ಶೃತಿ,ಕೃತಿಕಾ,ಚಂದನ,ಶುಭ್ರತ,ಋತು,ಐಶ್ವರ್ಯ ಥ್ರೋಬಾಲ್ ತಂಡದವನ್ನು ಪ್ರತಿನಿಧಿಸಿದ್ದು, ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನೀಡಿ ವಿಜೇತರಾಗುವ ಮೂಲಕ ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ .ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಿವಣ್ಣ,ಕಾರ್ಯದರ್ಶಿ ಸುಧಾ,ಶಿಕ್ಷಕರಾದ ಗಿರೀಶ್,ಗಂಗಾಧರ್, ಸಿಬ್ಬಂದಿಯವರು ಅಭಿನಂದಿಸಿದ್ದಾರೆ.