ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಸ್ತ್ರೋಕ್ತವಾಗಿ ಬಸವನ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿಯ ಪಟ್ಟದ ಬಸವ ಮಂಗಳವಾರ ಸಾವನಪ್ಪಿದ್ದು ಗ್ರಾಮಸ್ಥರೆಲ್ಲಾ ಸೇರಿ ಬಸವನ ಮೆರವಣಿಗೆ ಮಾಡಿದರಲ್ಲದೆ ಶಾಸ್ತ್ರೋಕ್ತವಾಗಿ ಅದರ ಅಂತ್ಯಕ್ರಿಯೆ ನಡೆಸಿದರು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿಯ ಪಟ್ಟದ ಬಸವ ಮಂಗಳವಾರ ಸಾವನಪ್ಪಿದ್ದು ಗ್ರಾಮಸ್ಥರೆಲ್ಲಾ ಸೇರಿ ಬಸವನ ಮೆರವಣಿಗೆ ಮಾಡಿದರು. ಸುಮಾರು ೧೫ ವರ್ಷ ವಯಸ್ಸಿನದಾಗಿದ್ದ ಬಸವ ಕಳೆದ ನಾಲ್ಕೈದು ವರ್ಷದಿಂದ ಸ್ವಾಮಿಯ ಪಟ್ಟದ ಬಸವನಾಗಿದ್ದು ಜಾತ್ರೆ ಸಮಯದಲ್ಲಿ ನಗಾರಿಯನ್ನು ಹೊತ್ತು ತನ್ನ ಸೇವೆ ಸಲ್ಲಿಸುತ್ತಿತ್ತು. ಗ್ರಾಮದ ಜನರು ಈ ಬಸವನನ್ನು ಚನ್ನಬಸವೇಶ್ವರಸ್ವಾಮಿಯ ಪ್ರತಿರೂಪವೆಂದು ನಿತ್ಯ ಪೂಜಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಬಸವ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕೊನೆಯುಸಿರೆಳಿಯಿತು. ಸ್ವಾಮಿಯ ಪಟ್ಟದ ಬಸವ ಅಂತ್ಯಕ್ರಿಯೆ ಮಾಡುವ ನಿಟ್ಟಿನಲ್ಲಿ ಗ್ರಾಮದೇವರೆ ಕಾಳಮ್ಮದೇವಿಯ ಅಪ್ಪಣೆಯಂತೆ ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿಗೆ ಬಸವನ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಿ ಕಾರ್ಯಗಳನ್ನು ಮುಗಿಸಿದರು. ನಂತರ ಪಾನಕ ಪನಿವಾರ ವಿತರಿಸಿದರು.

ವೈಭವಯುತ ವಾಸವಿ ಜಯಂತಿ ಆಚರಣೆ

ಹುಳಿಯಾರು ಪಟ್ಟಣದ ಆರ್ಯವೈಶ್ಯ ಮಂಡಳಿ, ಮಹಿಳಾ ಸಂಘ, ವಾಸವಿ ವಿದ್ಯಾಸಂಸ್ಥೆ, ವಾಸವಿ ಯುವಜನ ಸಂಘ ಹಾಗೂ ಕನ್ನಿಕಾಪರಮೇಶ್ವರಿ ಸಹಕಾರ ಸಂಘದವತಿಯಿಂದ ವಾಸವಿ ಜಯಂತಿ ಹಾಗೂ ಶ್ರೀಕನ್ನಿಕಾಪರಮೇಶ್ವರಿ ದೇವಿಯ ೨೪ ನೇ ವಾರ್ಷಿಕೋತ್ಸವ ಮಂಗಳವಾರ ವೈಭವಯುತವಾಗಿ ನಡೆಯಿತು. ಹುಳಿಯಾರಿನಲ್ಲಿ ವಾಸವಿ ಜಯಂತಿ ಅಂಗವಾಗಿ ಶ್ರೀಕನ್ನಿಕಾಪರಮೇಶ್ವರಿ ದೇವಿಯ ರಾಜಬೀದಿ ಉತ್ಸವ ನಡೆಸಲಾಯಿತು. ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು ಕನ್ನಿಕಾಪರಮೇಶ್ವರಿದೇವಿಗೆ ಹಾಲಿನ ಪಂಚಾಮೃತಾಭಿಷೇಕ,ಸುಮಂಗಲಿಯರಿಂದ ಆರತಿಸೇವೆ, ಕನ್ಯಕಾ ಬಾಲನಗರು ಪೂಜೆ ನಡೆದ ನಂತರ ತಂಬಿಟ್ಟಿನ ಆರತಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ನಡೆಸಲಾಯಿತು. ಜಯಂತಿ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಸಾರ್ವಜನಿಕರಿಗೆ ಉಪಹಾರ ವಿತರಿಸಿದರು. ಸಂಜೆ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಅಮ್ಮನವರನ್ನು ಕುಳ್ಳಿರಿಸಿ ಪಟ್ಟಣದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಈ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ನಟರಾಜ್ ಗುಪ್ತ, ಚಂದ್ರಶೇಖರ್, ನಾಗರಾಜು,ರಾಮಮೂರ್ತಿ,ಪ್ರದೀಪ್,ನಾಗೇಶ್,ಶ್ರೀನಿವಾಸ ಶೆಟ್ರು,ಶ್ರೀನಿವಾಸ್,ರಾಮನಾಥ್,ರಮಾಕಾಂತ್ ಸೇರಿದಂತೆ ಇತರರಿದ್ದರು.

ಅನಧಿಕೃತ ಸಂಪರ್ಕ ಮೌನವಹಿರುವ ಇಲಾಖೆ ರೈತರಿಂದ ಠೇವಣಿ ವಸೂಲಿ ಹುನ್ನಾರ : ಪಂಪ್ ಸೆಟ್ ದಾರರ ಆರೋಪ

ವರದಿ : ಡಿ.ಆರ್.ನರೇಂದ್ರಬಾಬು ------------ ಹುಳಿಯಾರು : ಆಕ್ರಮ-ಸಕ್ರಮದಡಿ ಅನಧಿಕೃತ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗಳಿಸಿಕೊಳ್ಳುವಂತೆ ಮಾರ್ಚ್ ೩೧ ಅಂತಿಮ ಗಡುವು ನೀಡಿ ಮತ್ತೆ ವಿಸ್ತರಣೆ ಪ್ರಶ್ನೆಯೇ ಇಲ್ಲ ನಂತರದ ದಿನದಿಂದಲೆ ಸಕ್ರಮ ಮಾಡಿಕೊಳ್ಳದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಬೆಸ್ಕಾಂ ಇದೀಗ ಮತ್ತೆ ಮೇ.೧೫ರ ವರೆಗೆ ಸಕ್ರಮಕ್ಕೆ ಗಡುವು ನೀಡಿದೆ. ಆಕ್ರಮ-ಸಕ್ರಮದಡಿ ರೈತರು ಅರ್ಜಿಸಲ್ಲಿಸಿ ತಮ್ಮ ಬೋರ್ ವೆಲ್ ಗಳನ್ನು ಸಕ್ರಮಗಳಿಸಿಕೊಂಡಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ ಕೊಡುವುದಾಗಿ ಹೇಳುತ್ತಾ ಸಾಗುತ್ತಿದ್ದಾರೆ ಹೊರತು ಇದುವರೆಗೂ ಸಕ್ರಮಗಳಿಕೊಂಡವರಿಗೆ ಯಾವುದೇ ರೀತಿಯ ಸೌಲಭ್ಯ ಮಾತ್ರ ದೊರೆತಿಲ್ಲ.ಜೊತೆಗೆ ಆಕ್ರಮ ಸಂಪರ್ಕ ಪಡೆದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡ ಉದಾಹರಣೆಯಿಲ್ಲ. ಬಹುತೇಕ ಮಂದಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಪಂಪ್ ಸೆಟ್ ಗಳನ್ನು ಓಡಿಸುತ್ತಿದ್ದು ಗೊತ್ತಿದ್ದರೂ ಕಂಡುಕಾಣದಂತೆ ಇಲಾಖೆ ವರ್ತಿಸುತ್ತಿದೆ. ಪ್ರಸ್ತುತದಲ್ಲಿ ಮಳೆಯ ಕೊರತೆಯಿಂದಾಗಿ ರೈತರು ಹೊಲ,ಗದ್ದೆ,ತೋಟಗಳಿಗೆ ಬೋರ್ ವೆಲ್ ಗಳನ್ನೆ ಆಶ್ರಯಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುವಲ್ಲಿ ಇಲಾಖೆ ವಿಫಲವಾಗಿದ್ದು ಕೇವಲ ೨ ರಿಂದ ೩ ಗಂಟೆ ಅದೂ ರಾತ್ರಿ ಸಮಯದಲ್ಲಿ ಕೊಡಲಷ್ಟೆ ಶಕ್ತವ

ಮೂಲಭೂತ ಸೌಕರ್ಯ ಕಲ್ಪಿಸದಿದ್ದಲ್ಲಿ ರೈತರು ಸುಂಕ ಕಟ್ಟಲು ತಯಾರಿಲ್ಲ

ಹುಳಿಯಾರು  ಪಟ್ಟಣದಲ್ಲಿ ಪ್ರತಿ ಗುರುವಾರ ಸಂತೆ ನಡೆಯುವ ಜಾಗದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ರೈತಸಂಘದವರು ಹಾಗೂ ಸಾರ್ವಜನಿಕರು ಪಂಚಾಯ್ತಿ ಅಧಿಕಾರಿಗಳನ್ನು ಒತ್ತಾಯಿಸಿದರು. ಹುಳಿಯಾರು ಗ್ರಾ.ಪಂ. ಎದುರು ನಡೆದ ಹರಾಜು ಪ್ರಕ್ರಿಯಲ್ಲಿ ರೈತ ಸಂಘದವರು, ಸಾರ್ವಜನಿಕರು ಹಾಗೂ ಗ್ರಾ.ಪಂ. ಅಧಿಕಾರಿಗಳೊಂದಿಗೆ ನಡೆದ ಮಾತಿನ ಚಕಮುಕಿ. ೨೦೧೫-೧೬ ನೇ ಸಾಲಿನ ಸಂಜೆ ಸುಂಕ, ಬಸ್ ಸುಂಕ,ಪುಟ್ ಬಾತ್ ಅಂಗಡಿಗಳ ಸುಂಕ ವಸೂಲಾತಿ ಬಗ್ಗೆ ಬಹಿರಂಗ ಹರಾಜು ಮಾಡಲು ಮಂಗಳವಾರ ಸಭೆ ಕರೆಯಲಾಗಿತ್ತು. ಸಭೆಗೆ ಆಗಮಿಸಿದ್ದ ರೈತಸಂಘದವರು, ಸಾರ್ವಜನಿಕರು ಪ್ರತಿ ವರ್ಷ ಪಂಚಾಯ್ತಿವರು ಲಕ್ಷಾಂತರ ರೂಪಾಯಿಗೆ ಹರಾಜು ಮಾಡಿ ಸುಂಕ ಕಟ್ಟಿಸಿಕೊಳ್ಳುತ್ತೀರಾ ಆದರೆ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸಂತೆ ಮುಗಿದು ಎರಡು ಮೂರು ದಿನಗಳಾದರೂ ಸಂತೆ ಮೈದಾನದಲ್ಲಿ ಬಿದ್ದಿರುವ ತ್ಯಾಜ್ಯವನ್ನು ವಿಲೇ ಮಾಡದೆ ಅನೈರ್ಮಲ್ಯ ಹೆಚ್ಚುವಂತೆ ಮಾಡುತ್ತಾರೆ. ಈ ಬಗ್ಗೆ ಪಂಚಾಯ್ತಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು. ಸಂತೆ ಜಾಗ ಹಾಗೂ ಬಸ್ ನಿಲ್ದಾಣದಲ್ಲಿ ಸೂಕ್ತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟನಂತರ ತಮ್ಮ ಹರಾಜು ಪ್ರಕ್ರಿಯೆ ಮುಂದುವರಿಸುವಂತೆ ರೈತ ಸಂಘದವರು ಪಟ್ಟು ಹಿಡಿದರಲ್ಲದೆ, ಒಂದು ವೇಳೆ ಹರಾ

ಶಂಕರ ಜಯಂತಿ ಕಡೆಗಣಿಸಿದ ತಾಲ್ಲೂಕು ಆಡಳಿತ :ವಿಹಿವೇ ಖಂಡನೆ

ಮಹಾನ್ ದಾರ್ಶನಿಕರಾದ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ತಾಲ್ಲೂಕ್ ಆಡಳಿತ ಆಚರಿಸದೆ ಕಡೆಗಣಿಸಿರುವುದನ್ನು ತಾಲ್ಲೂಕ್ ವಿಪ್ರಹಿತರಕ್ಷಣಾ ವೇದಿಕೆ ಖಂಡಿಸಿದೆ. ವೇದಾಂತ ತತ್ವಕ್ಕೆ ಆದಿ ಶಂಕರರು ನೀಡಿದ ಕೊಡುಗೆ ಪರಿಗಣಿಸಿದ ರಾಜ್ಯ ಸರ್ಕಾರ ಈ ಹಿಂದೆಯೇ ಶ್ರೀ ಶಂಕರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ. ಈ ದಿನವನ್ನು ತತ್ವಜ್ಞಾನಿಗಳ ದಿನಚಾರಣೆಯಾಗಿ ಸರ್ಕಾರಿ ಕಛೇರಿಗಳಲ್ಲಿ ರಜೆ ರಹಿತವಾಗಿ ಆಚರಿಸುವ ಆಶಯ ಹೊಂದಿ 5-3-2003ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಇದನ್ನು ಅನುಸರಿಸಿ ಶಂಕರ ಜಯಂತಿಯನ್ನು ಆಚರಿಸಿ ಎಂಬ ವಿಪ್ರವಿಪ್ರಹಿತರಕ್ಷಣಾ ವೇದಿಕೆ ಮನವಿಯನ್ನು ಪರಿಗಣಿಸದೆ ತಹಸಿಲ್ದಾರ್ ತಾತ್ಸಾರ ಮಾಡಿದ್ದಾರೆ ಎಂದು ವೇದಿಕೆಯ ಪ್ರಧಾನಕಾರ್ಯದರ್ಶಿ ಮಧೂಸೂಧನ್ ಆರೋಪಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರಾದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸರ್ಕಾರದ ಸುತ್ತೋಲೆಯಂತೆ ಆಚರಿಸಿ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಡಳಿತವನ್ನು ತಾಲ್ಲೂಕ್ ವಿಪ್ರಹಿತರಕ್ಷಣ ವೇದಿಕೆ ಒತ್ತಾಯಿಸಿತ್ತು. ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮನವಿಪತ್ರದೊಂದಿಗೆ ರಾಜ್ಯ ಸರ್ಕಾರದ ಗೆಜೆಟ್ ಪ್ರತಿಯನ್ನು ಸಹ ಸಲ್ಲಿಸಿ ೨೩ರಂದು ಆಚರಿಸುವಂತೆ ಮನವಿ ಕೂಡ ಮಾಡಲಾಗಿತ್ತು. ರಾಜ್ಯಪತ್ರ

ಸಂಗಿತಾಭ್ಯಾಸದಿಂದ ಏಕಾಗ್ರತೆ ಸಾಧ್ಯ : ಶಿಕ್ಷಕ ಶಂಕರ್

ಸಂಗಿತಾಭ್ಯಾಸ ಮಾಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುವುದಲ್ಲದೆ ಮನಸ್ಸಿನ ಏಕಾಗ್ರತೆಗೆ ಸಂಗೀತಾಸ್ವಾದನೆ ನೆರವಾಗಲಿದೆ ಎಂದು ಸಂಗೀತ ಶಿಕ್ಷಕ ಶಂಕರ್ ತಿಳಿಸಿದರು. ಹುಳಿಯಾರಿನ ಶ್ರೀ ಮಾರುತಿ ಸಂಗೀತ ಶಾಲೆವತಿಯಿಂದ ಗಾಂಧಿಭವನದಲ್ಲಿ ಹತ್ತು ದಿನಗಳಕಾಲ ಅಯೋಜಿಸಿದ್ದ ಉಚಿತ ಸಂಗೀತ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಹುಳಿಯಾರಿನ ಶ್ರೀಮಾರುತಿ ಸಂಗೀತ ಶಾಲೆ ವತಿಯಿಂದ ಗಾಂಧಿಭವನದಲ್ಲಿ ಅಯೋಜಿಸಿದ್ದ ಉಚಿತ ಸಂಗೀತ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಗೀತ ಶಿಕ್ಷಕ ಶಂಕರ್ ಮಾತನಾಡಿದರು. ಸಂಗೀತ ಕಲಿಯುಲು ಅನೇಕ ಅವಕಾಶಗಳಿದ್ದು ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು , ಸಂಗೀತದಲ್ಲಿ ಹೆಚ್ಚಿನ ವಿದ್ವತ್ ಪಡೆಯುವವರಿಗಾಗಿ ಸಂಗೀತ ಶಾಲೆಗಳಿರುವುದಾಗಿ ತಿಳಿಸಿದರು. ಶಿಬಿರಕ್ಕೆ ಬರುವ ಪಟ್ಟಣದ ವಿದ್ಯಾರ್ಥಿಗಳಲ್ಲಿ ಸಂಗೀತದ ಬಗ್ಗೆ ಆಸಕ್ತಿಯಿದ್ದು ನಿರಂತರ ಅಭ್ಯಾಸ ಮಾಡುವಂತೆ ತಿಳಿಸಿದರು. ಪೋಷಕರು ತಮ್ಮ ಮಕ್ಕಳನ್ನು ಸಂಗೀತ ಶಾಲೆಗೆ ಕಳುಹಿಸುವ ಮೂಲಕ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರತರಲು ಸಹಕಾರಿಯಗುವಂತೆ ತಿಳಿಸಿದರು. ಹುಳಿಯಾರಿನ ಶ್ರೀಮಾರುತಿ ಸಂಗೀತ ಶಾಲೆ ವತಿಯಿಂದ ಗಾಂಧಿಭವನದಲ್ಲಿ ಅಯೋಜಿಸಿದ್ದ ಉಚಿತ ಸಂಗೀತ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು.  ಶ್ರೀಮಾರುತಿ ಸಂಗೀತ ಶಾಲೆಯ ಬಡಗಿ ರಾಮಣ್ಣ ಮಾತನಾಡಿ, ಸಂಗೀತ ಶಾಲೆ

ನಿಧನ : ಮಾಜಿ ತಾ.ಪಂ. ಸದಸ್ಯ ಎನ್.ಬಿ.ಲಿಂಗದೇವರು

ಮಾಜಿ ತಾ.ಪಂ.ಸದಸ್ಯ ಎನ್.ಬಿ.ಲಿಂಗದೇವರು(೫೪) ತೀವ್ರ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು. ಮೃತರು ಹುಳಿಯಾರು ಬ್ಲಾಕ್ ಕ್ರಾಂಗ್ರೆಸ್ ಅಧ್ಯಕ್ಷ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಸಚಿವ ಜಯಚಂದ್ರ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಎನ್.ಬಿ.ಲಿಂಗದೇವರು ಪತ್ನಿ ಮಾಜಿ ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ಸೇರಿದಂತೆ ಒಬ್ಬ ಪುತ್ರನನ್ನು ಅಗಲಿದ್ದಾರೆ. ಭಾನುವಾರ ಸಂಜೆ ಮೃತರ ಸ್ವಗ್ರಾಮ ನಂದಿಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿತು. ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ, ರೈತಸಂಘದ ಕೆಂಕೆರೆ ಸತೀಶ್, ತಾ.ಪಂ.ಸದಸ್ಯ ಹೊಸಹಳ್ಳಿ ಜಯಣ್ಣ ಸೇರಿದಂತೆ ಇತರರು ಅಂತಿಮ ದರ್ಶನ ಪಡೆದರು.

ಕುರುಕ್ಷೇತ್ರ ನಾಟಕ

ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ತಾ.೨೭ರ ಸೋಮವಾರ ರಾತ್ರಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.ಕಾಟಂಲಿಂಗೇಶ್ವರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ತಿರುಮಲ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು ಸಂಸದ ಮುದ್ದಹನುಮೇಗೌಡ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ ಬಾಬು, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಸೇರಿದಂತೆ ಇತರ ಜನಪ್ರತಿನಿಧಿಗಳು ಉಪಸ್ಥಿತರಿರುವರು.

ಸೌದೆ ತರಲು ಹೋಗಿದ್ದ ಯುವಕ ಆತ್ಮಹತ್ಯೆ

ಸೌದೆ ತರಲು ಹೋಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೋಬಳಿಯ ಬೆಳ್ಳಾರ ಆರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಮೃತನನ್ನು ಬೆಳ್ಳಾರ ಗ್ರಾಮದ ಸಣ್ಣಕರಿಯಪ್ಪ(೨೮) ಎಂದು ಗುರ್ತಿಸಲಾಗಿದೆ. ಶನಿವಾರ ಮನೆಗೆ ಸೌದೆ ತರಲು ಕಾಡಿಗೆ ಹೋಗಿದ್ದ ಈತ ಸಂಜೆಯದರೂ ಮನೆಗೆ ಹಿಂದಿರುಗಿರಲಿಲ್ಲ.ತೀವ್ರ ಹುಡುಕಾಟ ನಡೆಸಿದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಈತನ ಅಣ್ಣತಮ್ಮಂದಿರಿಬ್ಬರಿಗೂ ವಿವಾಹವಾಗಿ ಈತನಿಗೆ ಕಂಕಣಭಾಗ್ಯ ಕೂಡಿಬಾರದೆ ಜಿಗುಪ್ಸೆಗೊಂಡು ಮರಕ್ಕೆ ತನ್ನ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ..ಪ್ರಕರಣ ಇಲ್ಲಿನ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ಮನೆಗೆ ಮಳೆನೀರು ನುಗ್ಗಿ ಗೋಡೆ ಕುಸಿತ

ಹುಳಿಯಾರು  ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು ಪಟ್ಟಣದ ಮಾರುತಿನಗರದ ಐದನೇ ಬ್ಲಾಕ್ ನ ನೇಮತ್ ಬಿನ್ ಅನ್ವರ್ ಸಾಬ್ ಎಂಬುವರ ಮನೆಗೆ ಶುಕ್ರವಾರ ರಾತ್ರಿ ಬಂದ ಮಳೆಯ ನೀರು ನುಗ್ಗಿದ ಪರಿಣಾಮ ಮನೆಯ ಗೋಡೆಕುಸಿದಿದೆ. ಹುಳಿಯಾರಿನ ೫ನೇ ಬ್ಲಾಕ್ ನ ಅವರ ಮನೆಗೆ ಮಳೆ ನೀರು ನುಗ್ಗಿ ಗೋಡೆ ಕುಸಿದಿರುವುದು ಹಾಗೂ ಮನೆಗೆ ನೀರು ನುಗ್ಗಿರುವುದು. ಶುಕ್ರವಾರ ಸಂಜೆಯಿಂದ ಮಳೆ ಪ್ರಾರಂಭವಾಗಿ ಕೆಲ ಗಂಟೆಗಳಕಾಲ ಸುರಿದ ಹಿನ್ನಲೆಯಲ್ಲಿ ಪಟ್ಟಣದ ರಸ್ತೆಬದಿಯ ಚರಂಡಿಯ ತುಂಬಿ ರಸ್ತೆಯಲೆಲ್ಲಾ ನೀರು ಹರಿಯುವಂತಾಗಿತ್ತು. ನೇಮತ್ ಅವರ ಮನೆ ಮುಂದಿನ ಚರಂಡಿಯಲ್ಲಿಯೂ ಸಹ ತ್ಯಾಜ್ಯ ತುಂಬಿಕೊಂಡಿದ್ದ ಪರಿಣಾಮ ನೀರು ಸರಾಗವಾಗಿ ಹರಿಯದೆ ಅವರ ಮನೆಗೆ ನುಗ್ಗಿದ್ದು, ಗೋಡೆ ಕುಸಿದಿದೆ. ಮನೆ ಒಳಗೆ ನಿಲ್ಲಿಸಿದ ಬೈಕ್ ಮೇಲೆ ಗೋಡೆ ಬಿದ್ದು ಬೈಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರವೂ ಸಹ ಪಟ್ಟಣದೆಲ್ಲೆಡೆ ಉತ್ತಮಮಳೆಯಾಗಿದ್ದು ಬೆಳಿಗ್ಗಿನಿಂದ ಮೋಡಕವಿದ ವಾತಾವರಣವಿದ್ದು ಮಧ್ಯಾಹ್ನದ ವೇಳೆ ಗಾಳಿಸಹಿತ ಜೋರುಮಳೆ ಸುರಿಯಿತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ್ದರಿಂದ ರಸ್ತೆಯಲ್ಲಿ ನೀರು ಹರಿದು ರಸ್ತೆಯ ತುಂಬೆಲ್ಲಾ ಕಸ,ಕಡ್ಡಿ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದವು. ಬಸ್ ನಿಲ್ದಾಣದಲ್ಲ

ಶ್ರದ್ದಾಭಕ್ತಿಯಿಂದ ನಡೆಯಿತು ಕರಿಯಮ್ಮದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ

ಹುಳಿಯಾರು  ಹೋಬಳಿ ಬರಕನಹಾಲ್ ನ ಶ್ರೀಕರಿಯಮ್ಮದೇವಿಯ ನೂತನ ದೇವಾಲಯ ಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಶುಕ್ರವಾರ ವಿವಿಧ ದೇವರುಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನಡೆಯಿತು. ಹುಳಿಯಾರು ಹೋಬಳಿ ಬರಕನಹಾಲ್ ನ ಶ್ರೀಕರಿಯಮ್ಮದೇವಿಯ ನೂತನ ದೇವಾಲಯ ಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಅಂಗವಾಗಿ ಪೂರ್ಣಕುಂಭಗಳ ಮೆರವಣಿಗೆ ನಡೆಸಲಾಯಿತು. ಹುಳಿಯಾರು ಹೋಬಳಿ ಬರಕನಹಾಲ್ ನ ಶ್ರೀಕರಿಯಮ್ಮದೇವಿಯ ನೂತನ ದೇವಾಲಯ ಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಅಂಗವಾಗಿ ೧೦೧ ಪೂರ್ಣಕುಂಭ ಕಳಸಗಳನ್ನು ಪ್ರತಿಷ್ಠಾಪಿಸಿರುವುದು. ದೇವಾಲಯ ಪ್ರಾರಂಭೋತ್ಸವದ ಅಂಗವಾಗಿ ಗುರುವಾರ ಸಂಜೆ ಆಲಯ ಪ್ರವೇಶ, ಪುಣ್ಯಾಹ, ನಾಂದಿ,ಅಂಕುರಾರೋಹಣ, ನವಗ್ರಹ,ಅಷ್ಠ ದಿಕ್ಪಾಲಕ,ಸಪ್ತ ಸಭಾ ದೇವತಾ ಕಳಸ ಸ್ಥಾಪನೆ, ಪೂರ್ವಕ ಹೋಮ ನಡೆಸಲಾಯಿತು. ಸಂಜೆ ಶಿಡ್ಲಕಟ್ಟೆ ಕರಿಯಮ್ಮದೇವಿ,ಕಾರೇಹಳ್ಳಿ ರಂಗನಾಥಸ್ವಾಮಿ,ಸಂಗೇನಹಳ್ಳಿ ಆಂಜನೇಯಸ್ವಾಮಿ,ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿ,ದೊಡ್ಡಬ್ಯಾಲದಕೆರೆ ಆಂಜನೇಯಸ್ವಾಮಿ, ಹಟ್ಟಿಲಕ್ಕಮ್ಮದೇವಿ, ಆಗ್ರಹಾರ ಭೈರೇಶ್ವರಸ್ವಾಮಿ,ದೊಡ್ಡನಹಟ್ಟಿ ದೊಡ್ಡಮ್ಮದೇವಿ,ಬಾಲದೇವರಹಟ್ಟಿ ಮಾಳಮ್ಮ, ಬರಕನಹಾಲ್ ತಾಂಡ್ಯದ ಸೇವಾಲಾಲ್ , ಮರಿಯಮ್ಮದೇವಿ, ಭೈರಾಪುರಹಟ್ಟಿ ದೊಡ್ಡಮ್ಮದೇವಿ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆಸಲಾಯಿತು. ಶುಕ್ರವಾರ ಮುಂಜಾನೆಯಿಂದ ಪೂಜಾಕೈಂಕರ್ಯಗಳು ಪ್ರಾರಂಭಗೊಂಡು ಶಿಖರದ ಕಳಸ ಸ್ಥಾಪನೆ ,ಅಭಿ

ಬಸವಣ್ಣನ ಕಾಯಕ ತತ್ವದ ಪಾಲನೆ ಅಗತ್ಯ

೧೨ ನೇ ಶತಮಾನದ ಶಿವಶರಣರಲ್ಲಿ ಕಾಯಕಯೋಗಿ ಬಸವಣ್ಣನವರು ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ವಚನಗಳು ಇಂದಿಗೂ ಪ್ರಸ್ತುತವಾಗಿರುವುದಲ್ಲದೆ, ಅವರ ಕಾಯಕ ತತ್ವದ ಪಾಲನೆ ಮಾಡಬೇಕು ಎಂದು ಬಸವಮಂಟಪದ ಸೋಮಶೇಖರ್ ತಿಳಿಸಿದರು. ಹುಳಿಯಾರು ಹೋಬಳಿ ಯಳನಡು ಗ್ರಾಮದ ಬಸವ ಮಂಟಪದಲ್ಲಿ ಬಸವ ಜಯಂತಿ ಆಚರಣೆ ನಡೆಯಿತು. ಹುಳಿಯಾರು ಹೋಬಳಿ ಯಳನಡು ಗ್ರಾಮದ ಬಸವ ಮಂಟಪದಲ್ಲಿ ಕಾರ್ಯಕಾರಿ ಮಂಡಳಿ ಹಾಗೂ ಸಾರ್ವಜನಿಕರು ಸೇರಿ ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು. ಸಮಾಜದಲ್ಲಿ ಸಮಾನತೆ ತರುವಲ್ಲಿ ಎಲ್ಲರೂ ಸಮಾನರು, ಮೇಲು-ಕೀಳು ಎಂಬ ಯಾವುದೇ ಜಾತಿ ಭೇದವಿಲ್ಲ ಎಂದು ಸಾರಿದ ಮಹಾನ್ ವ್ಯಕ್ತಿ ಬಸವಣ್ಣ, ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅನೇಕ ಕಟ್ಟುಪಾಡುಗಳನ್ನು ಕಿತ್ತೊಗೆಯುವ ಕಾರ್ಯ ಮಾಡಿದವರು ಎಂದರು. ಬಸವಣ್ಣಬವರ ವಚನಗಳನ್ನು ಹಾಡುವ ಮೂಲಕ ಅವುಗಳ ಸಾರ ತಿಳಿಸಿದರು. ಈ ವೇಳೆ ಬಸವ ಮಂಟಪದ ನಾಗರಾಜು,ಮಹೇಶ್ ಶಾಸ್ತ್ರಿ, ಮಲ್ಲಿಕಾರ್ಜುನಯ್ಯ,ಬಸವರಾಜಪ್ಪ, ಉಮಾಮಹೇಶ್,ಭಾಗ್ಯ ಶಶಿಧರ್,ಮಂಜುಳಾ,ಸಿದ್ದರಾಮಯ್ಯ, ಸ್ಟುಡಿಯೋ ಸುದರ್ಶನ್, ಚಂದ್ರಶೇಖರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಡೊಳ್ಳು ಕುಣಿತ

ಹುಳಿಯಾರು ಸಮೀಪದ ನಂದಿಹಳ್ಳಿಯ ಯುವಕರು ಜಾನಪದ ನೃತ್ಯ ಡೊಳ್ಳುಕುಣಿತ ಅಭ್ಯಾಸ ಮಾಡುತ್ತಿದ್ದು , ಅದರ ಮೊದಲ ಪ್ರದರ್ಶನವನ್ನು ಶನೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರ ಮುಂದೆ ಪ್ರದರ್ಶಿಸಿದರು.

ಸೀಗೆಬಾಗಿ ತಿಪ್ಪೇರುದ್ರಸ್ವಾಮಿಯ ಪಟ್ಟದ ಕಳಸ ಮಹೋತ್ಸವ

ಹುಳಿಯಾರು  ಹೋಬಳಿ ಸೀಗೆಬಾಗಿಯ ಪುರಾಣಪ್ರಸಿದ್ದ ಶ್ರೀ ತಿಪ್ಪೇರುದ್ರಸ್ವಾಮಿಯ ೧೪ ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಪಟ್ಟದ ಕಳಸ ಮಹೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು. ಹುಳಿಯಾರು ಹೋಬಳಿ ಸೀಗೆಬಾಗಿಯ ಶ್ರೀ ತಿಪ್ಪೇರುದ್ರಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ ಪಟ್ಟದ ಕಳಸ ಮಹೋತ್ಸವ ನಡೆಯಿತು. ಜಾತ್ರಮಹೋತ್ಸವದ ಅಂಗವಾಗಿ ವರದರಾಜಸ್ವಾಮಿ, ದುರ್ಗಮ್ಮ,ಚೌಲಿಹಳ್ಳಿ ಹರಳಪ್ಪಸ್ವಾಮಿ, ತೊರೆಮನೆ ಮಹಾಲಿಂಗಸ್ವಾಮಿಗಳ ಅಶೀರ್ವಾದದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಸ್ವಾಮಿಯ ಗಂಗಾಸ್ನಾನ,ನಡೆಮುಡಿ ಉತ್ಸವ,ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಸೀಗೆಬಾಗಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಭಕ್ತಾಧಿಗಳು ಆಗಮಿಸಿದ್ದು ಅಲಂಕೃತಸ್ವಾಮಿಯ ದರ್ಶನ ಪಡೆದರು.

ಹುಳಿಯಾರು ಗ್ರಾ.ಪಂ ನಲ್ಲಿ ಶಂಕರ ಜಯಂತಿ ಆಚರಣೆ

ಹುಳಿಯಾರು  ಪಟ್ಟಣದ ಗ್ರಾಮ ಪಂಚಾಯ್ತಿಯಲ್ಲಿ ಮಹಾನ್ ದಾರ್ಶನಿಕರಾದ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಹಾಗೂ ವಿಪ್ರ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಗುರುವಾರ ಆಚರಿಸಲಾಯಿತು. ಹುಳಿಯಾರು ಗ್ರಾ.ಪಂನಲ್ಲಿ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಹಾಗೂ ವಿಪ್ರ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಗುರುವಾರ ಆಚರಿಸಲಾಯಿತು.   ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದ ನಂತರ ವಿಪ್ರ ಸಂಘದ ಹು.ಲ.ವೆಂಕಟೇಶ್ ಮಾಸ್ಟರ್ ಮಾತನಾಡಿ, ಶ್ರೀಶಂಕರರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರಾಗಿದ್ದು, ವೇದಾಂತ ತತ್ವಕ್ಕೆ ಆದಿ ಶಂಕರರು ಹೆಚ್ಚಿನ ಕೊಡುಗೆ ನೀಡಿದ್ದಾರೆ.ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ಶಂಕರಾಚಾರ್ಯರ ಜನ್ಮ ದಿನ ಆಚರಿಸುತ್ತಾರೆ.ಇವರನ್ನು ಆದಿ ಶಂಕರ, ಶಂಕರ ಭಗವತ್ಪಾದಾಚಾರ್ಯ ಎಂದೂ ಸಹ ಕರೆಯುತ್ತಾರೆ. ಸುಮಾರು ೮ನೇ ಶತಮಾನದ ಮಹನೀಯರಲ್ಲಿ ಶಂಕರರೂ ಸಹ ಒಬ್ಬರಾಗಿದ್ದು,ಶಂಕರರು ತಮ್ಮ ಜೀವಿತದ ಕಡಿಮೆ ಅವಧಿಯಲ್ಲಿ ಮಾಡಿದ ಸಾಧನೆ ಅಪಾರವಾದದ್ದು ಎಂದರು. ಹಿಂದೂ ಧರ್ಮದ ಪ್ರಚಾರಕ್ಕಾಗಿ ನಾಲ್ಕು ದಿಕ್ಕುಗಳಲ್ಲಿ ೪ ಮಠಗಳನ್ನು ಸ್ಥಾಪಿಸಿದರು. ಕರ್ನಾಟಕದಲ್ಲಿ ಶೃಂಗೇರಿ ಶಾರದ ಪೀಠ ,ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾದ ಪೂರಿಯಲ್ಲಿ ಮತ್ತು ಉತ್ತರಾಖಾಂಡದಲ್ಲೂ ಸಹ ಮಠಗಳನ್ನು ಸ

ಹುಳಿಯಾರು : ಬಿಸಿಲ ತಾಪ ತಣಿಸಿದ ಮಳೆ

ಹುಳಿಯಾರು  ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು ಬಿಸಿಲ ಧಗೆಯನ್ನು ಕಡಿಮೆಮಾಡಿತು. ಕಳೆದ ನಾಲ್ಕೈದು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿ ಜನ ಸೆಕೆಯಿಂದ ಬಳಲುವಂತಾಗಿದ್ದು ಮಧ್ಯಾಹ್ನದ ವೇಳೆಯಂತೂ ಬಿಸಿಲ ಝಳ ಹೆಚ್ಚಾಗಿ ರಸ್ತೆಯಲ್ಲಿ ಸಂಚರಿಸುವುದು ದುಸ್ಥರವಾಗಿತ್ತು. ಜನ ಇದೇನಪ್ಪಾ ಇಷ್ಟೋಂದು ಸೆಕೆ ಮಳೆಯಾದರೂ ಬರಬಾರದ ಎಂದು ಕನವರಿಸುತ್ತಿದ್ದರು. ರೈತರು ಈ ಹಿಂದೆ ಬಂದ ಮಳೆಗೆ ಮುಂಗಾರು ಬೆಳೆ ಹೆಸರು ಬಿತ್ತಿದ್ದರು ಆದರೆ ಮಳೆಬಾರದೆಯಿದ್ದು ಬಿಸಿಲು ಹೆಚ್ಚಾಗಿದ್ದರಿಂದ ಈ ಸಲ ಹೆಸರು ಹೋಯಿತು ಎನ್ನುವ ಪರಿಸ್ಥಿತಿ ಎದುರಾಗಿತ್ತು. ಇಂತಹ ಸನ್ನಿವೇಶದಲ್ಲಿ ಬುಧವಾರ ಬಂದ ಮಳೆ ರೈತರಲ್ಲಿ ತುಸು ಸಂಸತ ಉಂಟುಮಾಡಿದ್ದು ಚಿಗುರೊಡೆಯುವ ಹಂತದಲ್ಲಿದ್ದ ಹೆಸರಿಗೆ ಅನುಕೂಲ ಮಾಡಿದೆ. 

ಬೆಂಕಿ ಹಚ್ಚಿಕೊಂಡಿದ್ದ ಮಾನಸಿಕ ಅಸ್ವಸ್ಥ ಸಾವು

ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಮಾನಸಿಕ ಅಸ್ವಸ್ಥ ಮಂಗಳವಾರ ತಡರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕುಶಾಲಪುರ(ಹಂದಿಗನಡು) ಗ್ರಾಮದ ಗುರುಮೂರ್ತಿ(35) ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದು, ಕಳೆದ ಬಹು ದಿನಗಳಿಂದ ಮಾನಸಿಕ ಅಸ್ವಸ್ಥಿಕೆಯಿಂದ ಬಳಲುತ್ತಿದ್ದ ಈತ ಕಳೆದ 19ರ ಭಾನುವಾರರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದನು. ಇದೇ ವೇಳೆ ಬೆಂಕಿಯ ಜ್ವಾಲೆಯೊಂದಿಗೆ ಗ್ರಾಮದಲ್ಲಿ ಸಂಚರಿಸಿ ಕೆಲ ಮಂದಿಗೆ ಗಾಯಗೊಳಿಸಿದ್ದ ಎನ್ನಲಾಗಿದೆ. ಪ್ರಕರಣ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹಳ್ಳಿಗೊಂದು ಕಲಾತಂಡವಿರಬೇಕು : ಮಲ್ಲಿಕಾರ್ಜುನ್ ಕೆಂಕೆರೆ

ಹಳ್ಳಿಗೊಂದು ಅರಳಿಮರ ಎಷ್ಟು ಮುಖ್ಯವೋ ಅಂತೆಯೇ ಹಳ್ಳಿಗೊಂದು ಕಲಾತಂಡ ಅಷ್ಟೇ ಮುಖ್ಯವಾಗಿದ್ದು , ಜಾನಪದ,ಪೌರಾಣಿಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾತಂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಕಲಾವಿದ ಮಲ್ಲಿಕಾರ್ಜುನ್ ಕೆಂಕೆರೆ ತಿಳಿಸಿದರು. ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಶ್ರೀಚನ್ನಬಸವೇಶ್ವರಸ್ವಾಮಿ ಕೃಪಾಪೂಷಿತ ನಾಟಕ ಮಂಡಳಿಯವತಿಯಿಂದ ನಡೆದ ಶನಿಪ್ರಭಾವ ನಾಟಕ ಪ್ರದರ್ಶನವನ್ನು ಕಲಾವಿದ ಮಲ್ಲಿಕಾರ್ಜುನ್ ಕೆಂಕೆರೆ ಉದ್ಘಾಟಿಸಿದರು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಚನ್ನಬಸವೇಶ್ವರಸ್ವಾಮಿ ಕೃಪಾಪೂಷಿತ ನಾಟಕ ಮಂಡಳಿಯ ಕಲಾವಿದರು ಮಂಗಳವಾರ ರಾತ್ರಿ ಅಭಿನಯಿಸಿದ ಶನಿಪ್ರಭಾವ ನಾಟಕ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಒಬ್ಬ ಕಲಾವಿದನಿಗೆ ವಿವಿಧ ಗ್ರಾಮಗಳಲ್ಲಿ ಎಷ್ಟೇ ಪುರಸ್ಕಾರ,ಪ್ರಶಸ್ತಿಗಳು ಬಂದಿದ್ದರೂ ಸಹ ಆತನ ಸ್ವಂತ ಊರಿನವರು ಮಾಡುವ ಸನ್ಮಾನ ಎಲ್ಲದಕ್ಕಿಂತ ಮೀರಿದ್ದು ಅದಕ್ಕೆ ತಾನು ಅಬಾರಿಯಾಗಿರುವುದಾಗಿ ತಿಳಿಸಿದರು. ಟಿ.ವಿ.ಮಾಧ್ಯಮದಿಂದ ಪ್ರಸ್ತುತದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಕಣ್ಮರೆಯಾಗುತ್ತಿದ್ದರೂ ಸಹ ಕೆಂಕೆರೆಯಲ್ಲಿ ಮಾತ್ರ ಪ್ರತಿ ವರ್ಷ ತಪ್ಪದೇ ನಾಟಕಾಭಿನಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಚಿ.ನಾ.ಹಳ್ಳಿ ಕಸಾಪ ರವಿಕುಮಾರ್ ಮಾತನಾಡಿ, ಕೆಂಕೆರೆ ಗ್ರಾಮದಲ

ವೈಭವಯುತ ಕೆಂಕೆರೆ ಚನ್ನಬಸವೇಶ್ವರಸ್ವಾಮಿ ರಥೋತ್ಸವ

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದಲ್ಲಿ ಬಸವಜಯಂತಿ ಅಂಗವಾಗಿ ಶ್ರೀಚನ್ನಬವೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.   ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಬಸವಜಯಂತಿ ಅಂಗವಾಗಿ ಶ್ರೀಚನ್ನಬವೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು. ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀಬಸವಕೇಂದ್ರದವರು ಮಂಗಳವಾರ ಬಸವಜಯಂತಿ ಅಂಗವಾಗಿ ಗ್ರಾಮದ ಬೀದಿಗಳಲ್ಲಿ ಬಸವ ಭಜನೆ ಮಾಡುವ ಮೂಲಕ ಮೆರವಣಿಗೆ ನಡೆಸಿದರು. ರಥೋತ್ಸವದ ಅಂಗವಾಗಿ ಮುಂಜಾನೆ ಮಹದೇವಜ್ಜನ ಮನೆಯವರಿಂದ ಕಾಳಮ್ಮದೇವಿ ಸಮ್ಮುಖದಲ್ಲಿ ರಥದ ಪುಣ್ಯಾಹ ಕಾರ್ಯ,ಅನ್ನಬಲಿ, ಕಳಸ ಸ್ಥಾಪನೆ ನಡೆಯಿತು. ನಂತರ ಗ್ರಾಮಸ್ಥರೆಲ್ಲಾ ಸೇರಿ ರಥಕ್ಕೆ ಬಗೆಬಗೆಯ ಹೂ,ಹಾರ, ಕೊಬ್ಬರಿ ಹಾರ, ಹತ್ತಿ ಹಾರ,ಬಾಳೆಗೊನೆ,ಎಳನೀರು ಗೊನೆ, ಬಾವುಟಗಳನ್ನು ಕಟ್ಟಿ ಅಲಂಕರಿಸಿದರು. ನಂತರ ದೇವಸ್ಥಾನದಿಂದ ಅಲಂಕೃತ ಚನ್ನಬಸವೇಶ್ವರಸ್ವಾಮಿಯನ್ನು ಕಾಳಮ್ಮದೇವಿ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಗೌಡಗೆರೆ ದುರ್ಗಮ್ಮದೇವಿ, ಬರದಲೇಪಾಳ್ಯದ ಅಂಬಿಕದೇವಿಯೊಂದಿಗೆ ಹೊರಡಿಸಿದರು. ಧ್ವಜಕುಣಿತ ಹಾಗೂ ಬಸವನ ಮೆರವಣಿಗೆಯೊಂದಿಗೆ ಸ್ವಾಮಿಯನ್ನು ರಥದಲ್ಲಿಗೆ ಕರೆತಂದು ರಥ ಪ್ರದಕ್ಷಿಣೆ ನಂತರ ಸ್ವಾಮಿ ಹಾಗೂ ಕಾಳಮ್ಮ ದೇವಿಯನ್ನು ರಥಕ್ಕೇರಿಸಿದರು. ಭಕ್ತರ

ರಾಜ್ಯ,ಜಿಲ್ಲಾ,ಮಟ್ಟಕ್ಕೆ ಕಡಿಮೆಯಿಲ್ಲದಂತೆ ಕ್ರೀಡಾಕೂಟ ನಡೆಯುತ್ತಿದೆ : ಕೆಂಕೆರೆ ನವೀನ್

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವಂತಹ ಕ್ರೀಡಾಕೂಟ ಹುಳಿಯಾರು ಪಟ್ಟಣದಲ್ಲಿ ಕಳೆದ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಇನ್ನೂ ಹತ್ತಾರೂ ಇತರೆ ಕ್ರೀಡೆಗಳು ನಡೆಯಲಿ ಎಂದು ತಾ.ಪಂ.ಸದಸ್ಯ ಕೆಂಕೆರೆ ನವೀನ್ ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ಹುಳಿಯಾರು ಕ್ರಿಕೆಟ್ ಕ್ಲಬ್ ವತಿಯಿಂದ ಐಪಿಎಲ್ ಮಾದರಿಯಲ್ಲಿ ಅಯೋಜಿಸಿದ್ದ ಹೆಚ್.ಸಿ.ಎಲ್ ಸಿಸನ್ ೩ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮತನಾಡಿದರು. ಹುಳಿಯಾರಿನಲ್ಲಿ ಒಂದುವಾರ ನಡೆಯುವ ಹೆಚ್.ಸಿ.ಎಲ್-೩ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯಲ್ಲಿ ತಾ.ಪಂ.ಸದಸ್ಯ ಕೆಂಕೆರೆ ನವೀನ್ ಮಾತನಾಡಿದರು. ಐಪಿಎಲ್ ನಂತೆ ಹೆಚ್.ಸಿ.ಎಲ್ ಅಯೋಜಿಸಿದ್ದು ರಾಜ್ಯದ ಯಾವುದೇ ಜಿಲ್ಲೆಯಲ್ಲಾಗಲಿ,ತಾಲ್ಲೂಕಿನಲ್ಲಾಗಲಿ ಈ ರೀತಿಯ ಟೂರ್ನಿಗಳು ನಡೆಯುತ್ತಿಲ್ಲ ಎಂದರು. ಹುಳಿಯಾರಿನಲ್ಲಿ ಜಾತ್ರೆ,ಉತ್ಸವಗಳು ವಿಜೃಂಭಣೆಯಿಂದ ನಡೆಯುವಂತೆ ಹೆಚ್.ಸಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳು ಸಹ ಉತ್ತಮವಾಗಿ ನಡೆಯುತ್ತಿದ್ದು, ಆಟಗಾರರು ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದಂತೆ ಕ್ರಿಕೆಟ್ ಆಡಿ ಎಂದು ತಿಳಿಸಿದರು. ಸೋಲು-ಗೆಲುವಿನ ಲೆಕ್ಕ ಹಾಕದೆ ತಮ್ಮಿಂದಾಗುವ ಉತ್ತಮ ಪ್ರದರ್ಶನ ನೀಡುವಂತೆ ಕ್ರಿಕೆಟ್ ತಂಡದವರಿಗೆ ಕಿವಿಮಾತು ಹೇಳಿದರು. ಈ ವೇಳೆ ಪ್ರಾಂಚೆಸ್ಸಿಗಳಾದ ಗ್ರಾ.ಪಂ.ಸದಸ್ಯ ಧನುಷ್ ರಂಗನಾ

ಉತ್ತಮ ಮಳೆ : ಹೆಸರು ಬಿತ್ತನೆಗೆ ಚಾಲನೆ

ವರದಿ : ಡಿ.ಆರ್.ನರೇಂದ್ರಬಾಬು. ಹುಳಿಯಾರು: ಹೋಬಳಿ ವ್ಯಾಪ್ತಿಯ ಕೆಂಕೆರೆ, ಗಾಣಧಾಳು,ರಂಗನಕೆರೆ,ದಸೂಡಿ,ದಬ್ಬಗುಂಟೆ, ಹೊಯ್ಸಳಕಟ್ಟೆ ಸೇರಿದಂತೆ ಬಹುತೇಕ ಕಡೆ ಈ ಬಾರಿ ಉತ್ತಮ ಪೂರ್ವ ಮುಂಗಾರು ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕಾಗಿದೆ. ಕಳೆದೊಂದು ತಿಂಗಳಿಂದ ಜಾತ್ರೆ,ಹಬ್ಬ ಹರಿದಿನಗಳಲ್ಲಿ ತೊಡಗಿಕೊಂಡಿದ್ದ ರೈತರು , ಉತ್ತಮ ಮಳೆಯಾಗಿರುವುದರಿಂದ ತಮ್ಮ ಹೊಲಗಳತ್ತ ಮುಖಮಾಡಿ ಉತ್ತುಬಿತ್ತುವ ಕಾರ್ಯದಲ್ಲಿ ಮುಂದಾಗಿದ್ದಾರೆ. ಹೆಸರನ್ನು ಪೂರ್ವ ಮುಂಗಾರಿನಲ್ಲಿ ಬೆಳೆಯುವ ವಾಡಿಕೆಯಿದ್ದು ಸುಮಾರು 2-3 ಬಾರಿ ಉತ್ತಮ ಹದಮಳೆ ಬಂದಿರುವುದರಿಂದ ಕೆಲವರು ತಮ್ಮ ಹೊಲಗಳ ಸ್ವಚ್ಚತೆಯಲ್ಲಿ ತೊಡಗಿದರೆ ಮತ್ತೆ ಕೆಲವರು ಹೆಸರು ಬಿತ್ತನೆಗೆ ಮುಂದಾಗಿದ್ದಾರೆ. ಯಳನಡು,ಕೋರಗೆರೆ,ತಿಮ್ಲಾಪುರ,ಸೀಗೆಬಾಗಿ ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿ ಬೇಸಾಯ ಮಾಡಿ ಹೊಲಗಳನ್ನು ಸ್ವಚ್ಚಮಾಡಿಕೊಂಡಿದ್ದು ಸೊನೆಮಳೆ ಬಂದರೆ ಸಾಕು ಬಿತ್ತನೆ ಮಾಡಲು ಕಾದುಕೂತಿದ್ದಾರೆ. ಗುರುವಾರ ರಾತ್ರಿ ಗುರುವಾಪುರ,ಮೇಲನಹಳ್ಳಿ,ಸೋಮನಹಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಉತ್ಸಾಹದಿಂದ ಹೆಸರು ಬಿತ್ತನೆಗೆ ಮುಂದಾಗಿದ್ದಾರೆ. ಹುಳಿಯಾರು ಹೋಬಳಿ ರಂಗನಕೆರೆ ಬಳಿ ಉಳುಮೆಯಲ್ಲಿ ತೊಡಗಿರುವ ರೈತ. ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಹಾಗೂ ರೈತರ ಬಳಿ ದನಗಳ ಸಂಖ್ಯೆ ಕೂಡ ಇಳಿಮುಖವಾಗಿರುವುದರಿಂದ ಉಳುಮೆಗಾಗಿ ಟ್ರಾ

ಶಂಕರಜಯಂತಿ ತತ್ವಜ್ಞಾನಿಗಳ ದಿನವಾಗಿ ಆಚರಿಸಿ

ಮಹಾನ್ ದಾರ್ಶನಿಕರಾದ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ತತ್ವಜ್ಞಾನಿಗಳ ದಿನಚಾರಣೆಯಾಗಿ ಸರ್ಕಾರಿ ಕಛೇರಿಗಳಲ್ಲಿ ರಜೆ ರಹಿತವಾಗಿ ಆಚರಿಸಬೇಕೆಂದು ತಾಲ್ಲೂಕ್ ವಿಪ್ರಹಿತರಕ್ಷಣ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಶ್ರೀಶಂಕರರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರು. ಆದ್ದರಿಂದಲೇ ಅದ್ವೈತದರ್ಶನವನ್ನು ಶಾಂಕರದರ್ಶನ ಎಂದು ಕರೆಯುತ್ತಾರೆ. ಪ್ರಾತಃಸ್ಮರಣೀಯರಾದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯಂದು ನಾವು ಆಚರಿಸಲಾಗುತ್ತದೆ.ವೇದಾಂತ ತತ್ವಕ್ಕೆ ಆದಿ ಶಂಕರರು ನೀಡಿದ ಕೊಡುಗೆ ಪರಿಗಣಿಸಿದ ರಾಜ್ಯ ಸರ್ಕಾರ ಈ ಹಿಂದೆಯೇ ಶ್ರೀ ಶಂಕರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ. 5-3-2003ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಕರ್ನಾಟಕ ಸರ್ಕಾರ ಘೋಷಿಸಿರುವ "ತತ್ವಜ್ಞಾನಿಗಳ ದಿನ "ವನ್ನು ಏಪ್ರಿಲ್ ೨೩ರ ಗುರುವಾರದಂದು ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನಂ ಅಡಿಯಲ್ಲಿ ಜಿಲ್ಲಾಡಳಿತವು, ಜಿಲ್ಲಾ ಕಛೇರಿ ಸೇರಿದಂತೆ ತಾಲ್ಲೂಕು ಕಚೇರಿ, ನಾಡಕಛೇರಿಗಳಲ್ಲಿ, ಗ್ರಾ.ಪಂ. ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಜೆ ರಹಿತವಾಗಿ ಆಚರಿಸಿ ತತ್ವಜ್ಞಾನಿಗಳ ಪರಿಚಯ ಮಾಡಿಕೊಡಬೇಕಿದೆ ಎಂದು ವಿಪ್ರಹಿತರಕ್ಷಣ ವೇದಿಕೆಯ ಅಧ್ಯಕ್ಷ ನರೇಂದ್ರಬಾಬು, ಕಾರ್ಯದರ್ಶಿ ಮಧುಸೂದನ್ ರಾವ್,ಹ

ಹುಳಿಯಾರು ಸರ್ಕಾರಿ ಆಸ್ಪತ್ರೆ ಸಮಸ್ಯೆ ಅರಿಯಲು ಡಿಎಚ್.ಓ ಗೆ ಸಂಸದರ ತಾಕೀತು

ಪಟ್ಟಣದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಹತ್ತಾರೂ ಸಮಸ್ಯೆಗಳಿದ್ದು ತಾವು ಖುದ್ದು ಭೇಟಿ ನೀಡಿ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ ಅವರಿಗೆ ತಾಕೀತು ಮಾಡಿದರು. ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆ ಆಲಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಇಲ್ಲಿನ ಹತ್ತು ಹಲವಾರು ಸಮಸ್ಯೆಗಳನ್ನು ಕಣ್ಣಾರೆ ಕಂಡು ವೈದ್ಯಾಧಿಕಾರಿ ಸದಾಶಿವು ಅವರನ್ನು ತರಾಟೆಗೆ ತೆಗೆದುಕೊಂಡರು. ತಾವು ಗುತ್ತಿಗೆ ವೈದ್ಯರಾಗಿದ್ದು ಎಲ್ಲಕ್ಕೂ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಕೇಳಬೇಕು ಎಂಬ ಅವರ ಉತ್ತರದಿಂದ ಕನಲಿದ ಸಂಸದರು ಕೂಡಲೇ ದೂರವಾಣಿ ಮೂಲಕ ಡಿ.ಎಚ್.ಈ ಅವರನ್ನು ಸಂಪರ್ಕಿಸಿ ಹುಳಿಯಾರಿಗೆ ಭೇಟಿನೀಡಿ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಈ ವೇಳೆ ಸಾಸಲು ಸತೀಶ್,ವೈ,ಸಿ.ಸಿದ್ದರಾಮಣ್ಣ, ಹೊಸಹಳ್ಳಿ ಅಶೋಕ್, ಕೆಂಕೆರೆ ಶಿವಕುಮಾರ್ ಇತರರಿದ್ದರು.

ರಂಗನಾಥಸ್ವಾಮಿಗೆ ಗಂಧದ ಅಲಂಕಾರ

ಹುಳಿಯಾರು  ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಅನಂತಶಯನ ರಂಗನಾಥಸ್ವಾಮಿಗೆ ಅಮವಾಸ್ಯೆ ಅಂಗವಾಗಿ ವಿಶ್ವನಾಥ್,ಧನಂಜಯ,ವಾಸುದೇವ್, ಅಂಜನ್ ಕುಮಾರ್ ಸೇವಾರ್ಥದಲ್ಲಿ ರಂಗನಾಥಸ್ವಾಮಿಗೆ ಗಂಧದ ಲೇಪನದಿಂದ ಅಲಂಕಾರ ಮಾಡಲಾಗಿತ್ತು. ಹುಳಿಯಾರಿನ ಶ್ರೀಅನಂತಶಯನ ರಂಗನಾಥಸ್ವಾಮಿಗೆ ಮಾಡಿರುವ ಗಂಧದ ಅಲಂಕಾರ. ಅಮವಾಸ್ಯೆ ಪೂಜೆ ಅಂಗವಾಗಿ ಸ್ವಾಮಿಗೆ ಅಭಿಷೇಕ ನಡೆದು ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನಡೆಸಲಾಯಿತು. ವೆಂಕಟಾದ್ರಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಲು ಪಟ್ಟಣದ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದು ಅಲಂಕೃತ ಸ್ವಾಮಿಯ ದರ್ಶನ ಪಡೆದರು.ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದು, ದೇವಾಲಯ ಜಿರ್ಣೋದ್ದಾರ ಸಮಿತಿಯ ಟಿ.ಆರ್.ರಂಗನಾಥ ಶೆಟ್ರು,ಜಗನಾಥ ರಾವ್,ಆರ್ಚಕ ರಾಜಣ್ಣ,ಶೇಷಣ್ಣ, ಗ್ರಾ.ಪಂ.ಸದಸ್ಯರಾದ ರಂಗನಾಥ್,ಅಶೋಕ್ ಬಾಬು,ಗೀತಾಬಾಬು, ಸೇರಿದಂತೆ ಇತರರಿದ್ದರು.

ಕ್ರಿಕೆಟ್

ಹುಳಿಯಾರಿನಲ್ಲಿ ಐಪಿಎಲ್ ಮಾದರಿ ಅಯೋಜಿಸಿರುವ ಹೆಚ್.ಸಿ.ಎಲ್-೩ ಕ್ರಿಕೆಟ್ ಪಂದ್ಯಾವಳಿಯನ್ನು ತಾ.ಪಂ.ಸದಸ್ಯ ಕೆಂಕೆರೆ ನವೀನ್ ಬ್ಯಾಟಿಂಗ್ ಮಾಡುವ ಮೂಲ ಮಂಗಳವಾರ ಉದ್ಘಾಟಿಸಿದರು.

ತಿರುಮಲಾಪುರ ಕೆರೆಯಲ್ಲಿ ಮಹಿಳೆ ಶವ ಪತ್ತೆ

ಹುಳಿಯಾರು ಸಮೀಪದ ತಿರುಮಲಾಪುರ ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆಯೊಬ್ಬರು ತೂಬಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದು ಶವ ಶನಿವಾರ ಸಂಜೆ ಪತ್ತೆಯಾಗಿದೆ. ಮೃತ ದುರ್ದೈವಿಯನ್ನು ಹುಳಿಯಾರಿನ ತಿಪಟೂರು ರಸ್ತೆ ನಿವಾಸಿ ನಿರ್ಮಲ(೩೫) ಎಂದು ಗುರ್ತಿಸಲಾಗಿದೆ. ಬಟ್ಟೆ ಒಗೆಯಲು ಹೋದಾಗ ಮೃತ ಪಟ್ಟಿರಬಹುದು ಎನ್ನಲಾಗಿದ್ದು ಮೃತಳ ತಂದೆ ರಂಗಯ್ಯ ಮಾತ್ರ ಇದು ಅನುಮಾನಾಸ್ಪದ ಸಾವು ಎಂದು ಠಾಣೆಗೆ ದೂರು ನೀಡಿದ್ದಾರೆ. ಪಿಎಸ್ ಐ ಪ್ರವೀಣ್ ಕುರ್ಮಾ ತನಿಖೇ ಕೈಗೊಂಡಿದ್ದು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಡಿ ಟ್ರಸ್ಟ್ ನಿಂದ ಜನಪರ ಕಾರ್ಯ: ಸಂಸದ ಶ್ಲಾಘನೆ

ಗ್ರಾಮೀಣ ಪ್ರದೇಶದಲ್ಲಿ ಶಿರಡಿ ಟ್ರಸ್ಟ್ ‘ಾರ್ಮಿಕ,ಸಾಮಾಜಿಕ,ಆರೋಗ್ಯ ಸೇರಿದಂತೆ ಇತರ ಜನಪರ ಯೋಜನೆಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಬೋರನಕಣಿವೆ ಬಳಿಯ ಶಿರಿಡಿ ಸಾಯಿಬಾಬಾ ಇಂರ್ಟ ನ್ಯಾಷನಲ್ ಟ್ರಸ್ಟ್ ವತಿಯಿಂದ ‘ಾನುವಾರ ಏರ್ಪಡಿಸಿದ್ದ ಆರೋಗ್ಯ ಚೇತನ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಮುಂದೆ ಇಲ್ಲಿ ನಡೆಯುವ ಯಾವುದೇ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ‘ರವಸೆ ನೀಡಿದರು.ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ತಮ್ಮ ನೆರವಿನ ಹಸ್ತ ಸದಾಯಿರುತ್ತದೆಂದರು ಹುಳಿಯಾರು ಹೋಬಳಿ ಬೋರನಕಣಿವೆ ಬಳಿಯ ಶಿರಿಡಿ ಸಾಯಿಬಾಬಾ ಇಂರ್ಟ ನ್ಯಾಷನಲ್ ಟ್ರಸ್ಟ್ ವತಿಯಿಂದ ‘ಾನುವಾರ ಏರ್ಪಡಿಸಿದ್ದ ಆರೋಗ್ಯ ಚೇತನ ಕಾರ್ಯಕ್ರಮವನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಉದ್ಘಾಟಿಸಿದರು. ಮುಖಂಡರಾದ ದೇವೇಂದ್ರ, ದಸೂಡಿ ರಂಗಸ್ವಾಮಿ,ಸಾಸಲು ಸತೀಶ್,ರುದ್ರೇಶ್, ವೆಂಕಟೇಶ್, ಶೇಷಾನಾಯ್ಕ, ಶ್ರೀನಿವಾಸಮೂರ್ತಿ ಮುಂತಾದವರಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ನೀರಿನ ವಿಷಯ ಸೂಕ್ಷ್ಮವಾಗಿದ್ದು ಎಲ್ಲರಲ್ಲೂ ಬದ್ಧತೆ ಪ್ರದರ್ಶನ ಬಹು ಮುಖ್ಯವಾಗಿದೆ ಎಂದರು. ಕರ್ನಾಟಕ ಹಾಗೂ ತಮಿಳುನಾಡುವಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು ಕರ್ನಾಟಕದಿಂದ ಹೆಚ್ಚುವರಿಯಾಗಿ ಹರಿದು

ಹುಳಿಯಾರು : ಜಾತಿಗಣತಿ ಬಗ್ಗೆ ಗಣತಿದಾರರ ದೂರು

ಹುಳಿಯಾರು  ಹೋಬಳಿಯಲ್ಲಿ ಜಾತಿಗಣತಿ ಪ್ರಗತಿಯಲಿದ್ದು ಶನಿವಾರದಂದು ಪಟ್ಟಣದಲ್ಲಿ ಗಣತಿ ಭರದಿಂದ ಸಾಗಿತ್ತು. ಬಂದ್ ಹಿನ್ನಲೆಯಲ್ಲಿ ಹೆಚ್ಚಿನ ಜನ ಮನೆಯಲ್ಲಿ ಸಿಗುವ ನಿರೀಕ್ಷೆಯಿಂದ ಮುಂಜಾನೆಯಿಂದಲೇ ಗಣತಿದಾರರು ಮನೆಗಳನ್ನು ಎಡೆತಾಕುತ್ತಿದ್ದರು. ಹುಳಿಯಾರಿನ ಮನೆಯೊಂದರ ಸದಸ್ಯರಿಂದ ಮಾಹಿತಿ ಪಡೆಯುತ್ತಿರುವ ಗಣತಿದಾರ   ಹಿಂದಿನ ದಿನವೇ ಅಗತ್ಯ ಬೇಕಾದ ದಾಖಲಾತಿಗಳನ್ನು ಸಿದ್ದಪಡಿಸಿಕೊಳ್ಳಲು ತಿಳಿಸುತ್ತಿದ್ದರೂ ಸಹ ಕೆಲವರು ಆಧಾರ್ , ಐಡಿ ಕಾರ್ಡ್ ಕೊಡಲು ವಿಳಂಬಿಸುತ್ತಿರುವುದರಿಂದ ಗಣತಿ ತಡವಾಗುತ್ತಿದೆ.ಇನ್ನೂ ಹತ್ತುದಿನ ವಿಸ್ತರಣೆ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂಬ ಮಾತು ಎಲ್ಲಾ ಗಣತಿದಾರರಲ್ಲೂ ಸಾಮಾನ್ಯವಾಗಿ ಕೇಳೀಬಂತು. ದೂರೇನು: ಜಾತಿಗಣತಿಯ ಫಾರಂನಲ್ಲಿರುವ ಒಟ್ಟು ೫೫ ಪ್ರಶ್ನೆಗಳನ್ನು ಕುಟುಂಬದವರಿಗೆ ಹೇಳಿ ಅವರಿಂದ ಉತ್ತರ ಪಡೆಯಬೇಕಿದೆ. ಕೆಲ ಕುಟುಂಬದಲ್ಲಿ ಗಣತಿದಾರರು ಕೇಳಿದಾಗ ದಾಖಲೆಗಳನ್ನು ಹುಡುಕಲು ಮನೆಯವರು ಮುಂದಾಗುತ್ತಿದ್ದು ಸಮಯ ವ್ಯಯವಾಗುತ್ತಿದೆ. ಪಟ್ಟಣದಲ್ಲಿ ಬೆಳಿಗ್ಗೆ ಹತ್ತರ ನಂತರ ಮಾಹಿತಿ ಪಡೆಯಲು ಹೋದರೆ ಮನೆಯ ಯಜಮಾನರ ಬಳಿ ದಾಖಲೆಗಳಿವೆ ನಾಳೆ ಬನ್ನಿ ಎನ್ನುತ್ತಾರೆ. ಇದರಿಂದ ಕೆಲ ಮನೆಗಳಿಗೆ ಪದೇಪದೆ ಹೋಗುವಂತಾಗಿದೆ ಅಲ್ಲದೆ ಪಟ್ಟಣಗಳಲ್ಲಿ ಬೆಳಿಗ್ಗೆ ೧೦ರ ಒಳಗಾಗಿ ಗಣತಿಕಾರ್ಯ ಮಾಡುವಂತಾಗಿದೆ. ನಾಲ್ಕು ಮಂದಿಯಿರುವ ಒಂದು ಕುಟುಂಬವರ ವಿವರವನ್ನು ಪಡೆಯಲು ಕನಿಷ್ಠ ೩೦ ನಿಮಿಷವಾಗುತ್ತಿದ್

ಬೆಣ್ಣೆ ಅಲಂಕಾರ

ಹುಳಿಯಾರಿನ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಅಮವಾಸ್ಯೆ ಅಂಗವಾಗಿ ಆಂಜನೇಯಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಿರುವುದು.

ಸಂಗೀತ ಆಸಕ್ತರು ಕಡಿಮೆ : ಶ್ರೀನಿವಾಸ್

ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್ , ಇಂಜಿನಿಯರ್ ಕೋರ್ಸ್ ಸೇರಿದಂತೆ ಇನ್ನಿತರ ಉನ್ನತ ಹುದ್ದೆಗಳಿಗೆ ಕಳಿಸುವ ಬಯಕೆ ಹೊಂದಿರುತ್ತಾರೆ ಹೊರತು ಸಂಗೀತ ಸಾಹಿತ್ಯದ ಕಲಿಕೆಗೆ ಮಕ್ಕಳನ್ನು ಕಳುಹಿಸದೆ ಪ್ರಸ್ತುತದಲ್ಲಿ ಸಂಗೀತ ಕಲಿಯುವವರ ಸಂಖ್ಯೆ ವಿರಳವಾಗಿದೆ ಎಂದು ಹಾರ್ಮೋನಿಯಂ ಮಾಸ್ಟರ್ ಶ್ರೀನಿವಾಸ್ ವಿಷಾಧಿಸಿದರು. ಹುಳಿಯಾರಿನ ಶ್ರೀಮಾರುತಿ ಸಂಗೀತ ಪಾಠಶಾಲೆ ವತಿಯಿಂದ ಗಾಂಧಿಭವನದಲ್ಲಿ ಹತ್ತು ದಿನಗಳಕಾಲದ ಉಚಿತ ಸಂಗೀತ ಶಾಲೆಯ ಉದ್ಘಾಟನೆ ನಡೆಯಿತು. ಹುಳಿಯಾರಿನ ಶ್ರೀ ಮಾರುತಿ ಸಂಗೀತ ಪಾಠಶಾಲೆ ವತಿಯಿಂದ ಗಾಂಧಿಭವನದಲ್ಲಿ ಶುಕ್ರವಾರ ಅಯೋಜಿಸಿದ್ದ ೧೦ ದಿನಗಳಕಾಲದ ಉಚಿತ ಸಂಗೀತ ಶಿಬಿರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಸಂಗೀತ ಕಲಿಯುವುದರಿಂದ ಹಾಗೂ ಆಲಿಸುವುದರಿಂದ ಮನಸ್ಸಿಗೆ ಶಾಂತಿ,ಸಂತೋಷ ಸಿಗುತ್ತದೆ .ಸಂಗೀತ ಕಲಿಯುವುದರಲ್ಲಿ ಹಾಡನ್ನು ಗಾಯನ ಮಾಡುವುದು ಎಷ್ಟು ಮುಖ್ಯವೋ ಸಂಗೀತದ ಪರಿಕರಗಳ ಬಗ್ಗೆಯೂ ತಿಳಿಯುವುದು ಮುಖ್ಯ ಎಂದರು. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡರೆ ಸುಲಭವಾಗಿ ಕಲಿಯಬಹುದಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಕೆಲ ಸಮಯ ಸಂಗೀತ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಸಂಗೀತಶಾಲೆಯ ಬಡಗಿರಾಮಣ್ಣ,ಸಂಗೀತ ಶಿಕ್ಷಕ ಶಂಕರ್,ವಿಪ್ರ ಸಂಘದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್,ಆಂಜನೇಯಸ್ವಾಮಿ ಸಮಿತಿಯ ಧನಂಜಯ್,ಆಚಾರ್ ರಮೇಶಣ್ಣ,ತಮ್ಮ

ಕರ್ನಾಟಕ ಬಂದ್ ಗೆ ಹುಳಿಯಾರಿನಲ್ಲೂ ವ್ಯಾಪಕ ಬೆಂಬಲ

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಯೋಜನೆ ಕೈಗೊಂಡಿರುವುದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ಕೊಟ್ಟಿದ್ದ ಕರ್ನಾಟಕ ಬಂದ್‌ಗೆ ಹುಳಿಯಾರಿನಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪಟ್ಟಣದಲ್ಲಿ ಬಸ್ ಸಂಚಾರವಿಲ್ಲದೆ, ಅಂಗಡಿ ಮುಂಗಟ್ಟು ಮುಚ್ಚಿದ್ದವು. ಹುಳಿಯಾರಿನ ಕನ್ನಡಪರ ಸಂಘಟನೆಯವರು, ರೈತಸಂಘದವರು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿ ಕಂದಾಯ ಇಲಾಖೆ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಬಂದ್ ಹಿನ್ನಲೆಯಲ್ಲಿ ಅಂಚೆಕಚೇರಿ,ನಾಡಕಛೇರಿ ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಿದ್ದು ಬಿಟ್ಟರೆ, ಇನ್ನುಳಿದ ಖಾಸಗಿ ಕಛೇರಿಗಳು, ಬ್ಯಾಂಕ್, ಸಹಕಾರ ಸಂಘದವರು ಹಾಗೂ ಅಂಗಡಿಯವರು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದರು. ಕೆಲ ಟೀ ಅಂಗಡಿಗಳು,ಬೇಕರಿಗಳು ಮಾತ್ರ ತೆರೆದಿದ್ದು, ಪ್ರತಿ ನಿತ್ಯ ಜನರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ, ಹುಳಿಯಾರಮ್ಮ ದೇವಾಲಯ ರಸ್ತೆ, ಕರವೇ ವೃತ್ತ, ರಾಮ್ ಗೋಪಾಲ್ ಸರ್ಕಲ್, ಎಪಿಎಂಸಿಯಲ್ಲಿ ಸಾರ್ವಜನಿಕರ ಸಂಚಾರ ವಿರಳವಾಗಿದ್ದು ಬಿಕೋ ಎನ್ನುತ್ತಿತ್ತು. ಸಂಜೆಯ ನಂತರ ಅಂಗಡಿದಾರರು ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿಕೊಂಡರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಪೋಲಿಸ್

ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ

ಡಿವಿಜಿಯವರ ಮಂಕುತಿಮ್ಮನ ಕಗ್ಗ ಮತ್ತು ಮರುಳಮುನಿಯನ ಕಗ್ಗ ಕೃತಿಗಳು ಕನ್ನಡದ ಭಗವದ್ಗೀತೆ ಇದ್ದಂತೆ ಎಂದು ತಮ್ಮಡಿಹಳ್ಳಿಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಜಯಣ್ಣ ತಿಳಿಸಿದರು. ಪಟ್ಟಣದ ವಸಂತನಗರ ಬಡಾವಣೆಯ ಎಸ್.ಶಿವರಾಂ ಅವರ ನಿವಾಸದಲ್ಲಿ ನಡೆದ ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. "ಬದುಕು ಜಟಕಾಬಂಡಿ", "ತಿದ್ದಿಕೊಳೊ ನಿನ್ನ ನೀಂ, ಜಗವ ತಿದ್ದುವುದಿರಲಿ", "ಋಣದ ಮೂಟೆಯ ಹೊರಿಸಿ " ಎಂಬ ಕವಿತೆಗಳನ್ನು ಉಲ್ಲೇಖಿಸುತ್ತ ಜೀವನದಲ್ಲಿ ಮಾನವ ಎಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.        ಶಿಕ್ಷಕ ಮಧು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಕಸಾಪದ ತ.ಶಿ.ಬಸವಮೂರ್ತಿ, ಯಲ್ಲಪ್ಪ,ತಮ್ಮಯ್ಯ ಮಾತನಾಡಿದರು. ಸಂಗೀತ ಶಿಕ್ಷಕ ಶಂಕರ್ ಶರಣರ ವಚನಗಳನ್ನು ಹಾಡಿದರು. ಶಿವರಾಂ ಸ್ವಾಗತಿಸಿ, ಶಿಕ್ಷಕ ದಯಾನಂದ್ ನಿರೂಪಿಸಿ, ಕ್ಯಾತಯ್ಯ ವಂದಿಸಿದರು.

ತಾ.೧೮ - ಕುರಿಹಟ್ಟಿಯಲ್ಲಿ ಕಳಸ

ಹುಳಿಯಾರು ಹೋಬಳಿ ಕುರಿಹಟ್ಟಿಯಲ್ಲಿ (ತಾ.೧೮) ಶನಿವಾರ ಬೆಳಿಗ್ಗೆ ಕೆಂಕೆರೆ ಕಾಳಮ್ಮನ ನಡೆಮುಡಿ ಹಾಗೂ ಕಳಸ ಮಹೋತ್ಸವ ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಹುಳಿಯಾರು ದುರ್ಗಮ್ಮ, ಗೌಡಗೆರೆ ದುರ್ಗಮ್ಮ ದೇವರುಗಳೊಂದಿಗೆ ಜರುಗಲಿದೆ. ಗ್ರಾಮದ ಸಮೀಪದ ಬಾವಿಯೊಂದರ ಬಳಿ ಗಂಗಾಸ್ನಾನ,ಕಳಸ ಸ್ಥಾಪನೆ ನಡೆದು ನಂತರ ನಡೆಮುಡಿ ಕಳಸ ಪ್ರಾರಂಭವಾಗಿ ಶ್ರೀಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆಸಲ್ಲಿಸಿ ಕಳಸಗಳ ವಿಸರ್ಜನೆ ನಡೆಯಲಿದೆ. ಕುರಿಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.

ಕ್ರಿಕೆಟ್

ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಆಂಬೇಡ್ಕರ್ ಯುವಕಸಂಘದವರು ಅಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಚಿ.ನಾ.ಹಳ್ಳಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೆಂಕೆರೆ ಶಿವಕುಮಾರ್ ಉದ್ಘಾಟಿಸಿದರು.

ಉಯ್ಯಾಲೋತ್ಸವ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಬದೇವಿಯ ವೈಭವಯುತ ಉಯ್ಯಾಲೋತ್ಸವ ಗುರುವಾರ ರಾತ್ರಿ ನಡೆಯಿತು.

ಜಾತಿಗಣತಿ ಮಾಡಲು ಹೆಚ್ಚುವರಿ ಕಾಲಾವಲಾಶ ಬೇಕು

ರಾಜ್ಯಾದ್ಯಂತ ಏ.೧೧ರಿಂದ ಜಾತಿಗಣತಿ ಪ್ರಾರಂಭವಾಗಿದ್ದು ಏ.೩೦ರ ಒಳಗೆ ಸಂಪೂರ್ಣವಾಗಿ ಮುಗಿಸುವಂತೆ ತಿಳಿಸಿದ್ದಾರೆ ಆದರೆ ಅವರು ನೀಡಿರುವ ಕಾಲಾವಧಿಯಲ್ಲಿ ಗಣತಿ ಕಾರ್ಯ ಮುಗಿಸಲು ಅಸಾಧ್ಯವಾಗಿದ್ದು, ಸರ್ಕಾರ ಇನ್ನೂ ಹತ್ತುದಿನಗಳ ಕಾಲಾವಕಾಶ ನೀಡಿದರೆ ಅನುಕೂಲವಾಗುತ್ತದೆ ಎಂಬುದು ಗಣತಿದಾರರ ಕೋರಿಕೆಯಾಗಿದೆ. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಮೇಲ್ವಿಚಾರಕರೇ ಮನೆಗಳಲ್ಲಿಗೆ ತೆರಳಿ ಜಾಗತಿಗಣತಿ ಮಾಡಿಸುತ್ತಿದ್ದಾರೆ. ಜಾತಿಗಣತಿಯ ಫಾರಂನಲ್ಲಿ ಒಟ್ಟು ೫೫ ಪ್ರಶ್ನೆಗಳಿದ್ದು ಪ್ರತಿ ಮನೆಯಲ್ಲಿ ಎಲ್ಲಾ ಪ್ರಶ್ನೆಗಳನ್ನು ಕೇಳಿ ಅವರಿಂದ ಮಾಹಿತಿ ಪಡೆಯಲು ಕನಿಷ್ಠ ೩೦ ನಿಮಿಷಗಳು ಬೇಕಿದೆ ಅದರಂತೆ ದಿನಕ್ಕೆ ೬ ರಿಂದ ೭ ಮನೆ ಮಾತ್ರ ಮುಗಿಯುತ್ತಿವೆ . ಒಬ್ಬೊಬ್ಬ ಗಣತಿದಾರರಿಗೆ ಕನಿಷ್ಠ ೧೫೦ ರಿಂದ ೨೦೦ ಕ್ಕೂ ಅಧಿಕ ಮನೆಗಳನ್ನು ನೀಡಿದ್ದು, ಈಗಿರುವ ಕಾಲಾವಧಿಯಲ್ಲಿ ಮುಗಿಸುವುದು ಕಷ್ಟಸಾಧ್ಯವೆಂದು ಗಣತಿದಾರ ಶಿಕ್ಷಕಿ ಗೌರಮ್ಮ ತಿಳಿಸುತ್ತಾರೆ. ಒಂದು ದಿನ ಮುಂಚಿತವಾಗಿ ಇಂತಹ ಮಾಹಿತಿ ಬೇಕೆಂದು ಕುಟುಂಬದವರಿಗೆ ತಿಳಿಸಿದ್ದರೂ ಸಹ ಗಣತಿದಾರರು ಮಾಹಿತಿ ಪಡೆಯಲು ಹೋದಾಗ ಆಧಾರ್ ಕಾರ್ಡ್,ವೋಟರ್ ಐಡಿ ಸೆರಿದಂತೆ ಇನ್ನಿತರ ದಾಖಲೆಗಳನ್ನು ಹುಡುಕುವಲ್ಲಿ ಜನ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಫಾರಂನಲ್ಲಿರುವ ಪ್ರಶ್ನೆಗಳನ್ನು ಕೇಳಿದರೆ ಕೆಲವರು ಗಣತಿದಾರರನ್ನೇ ಅಡ್ಡಪ್ರಶ್ನೆಗಳನ್ನು ಹಾಕಿ ಸಾಲ ಇದೆ ಎಂದರೆ ನೀವು

ಭಕ್ತರ ಹರ್ಷೋದ್ಘಾರದಲ್ಲಿ ನಡೆದ ಸಿಡಿಕಾರ್ಯ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಬದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಸಿಡಿಕಾರ್ಯ ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಘಾರದಲ್ಲಿ ನೆರವೇರಿತು. ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀಕಾಳಿಕಾಂಬದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಸಿಡಿಕಾರ್ಯ ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಘಾರದಲ್ಲಿ ನೆರವೇರಿತು. ಸಿಡಿಕಾರ್ಯದ ಅಂಗವಾಗಿ ಗುರುವಾರ ರಾತ್ರಿ ಕಾಳಮ್ಮನ ಉಯ್ಯಾಲೋತ್ಸವ ಹಾಗೂ ಮೆರವಣಿಗೆ ನಡೆಸಲಾಯಿತು. ಶುಕ್ರವಾರ ಬೆಳಿಗ್ಗೆ ಸಿಡಿಮರವನ್ನು ಸಿದ್ದಗೊಳಿಸಿ ಸಿಡಿ ಮರವೇರುವ ವ್ಯಕ್ತಿಯೊಂದಿಗೆ ಆರತಿ ಕಳಸಗಳನ್ನು ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿದರು. ನಂತರ ಉತ್ಸವ ಮಂಟಪದಲ್ಲಿದ್ದ ಕಾಳಮ್ಮದೇವಿ , ಹುಳಿಯಾರು ದುರ್ಗಮ್ಮ, ಗೌಡಗೆರೆ ದುರ್ಗಮ್ಮ ದೇವರುಗಳನ್ನು ಹೊರಡಿಸಿ ಸಿಡಿಮರಕ್ಕೆ ಪ್ರದಕ್ಷಿಣೆ ಬರಲಾಯಿತು. ನಂತರ ಸಿಡಿಮರದ ಒಂದು ತುದಿಗೆ ಭಕ್ತನನ್ನು ಮತ್ತೊಂದು ತುದಿಗೆ ಕಾಳಮ್ಮ ದೇವಿಯನ್ನು ಕುಳ್ಳಿರಿ ಸಿಜೈಕಾರ ಹಾಕುವ ಮೂಲಕ ಸಿಡಿಮರವನ್ನು ಒಂದು ಸುತ್ತು ಸುತ್ತಿಸಿದರು. ಈರಬೊಮ್ಮಕ್ಕದೇವಿಯನ್ನು ಸಹ ಸಿಡಿಮರದ ಮೇಲೆ ಕುಳ್ಳಿರಿಸಿ ಸುತ್ತಿಸಲಾಯಿತು. ಅಮ್ಮನವರ ಸಿಡಿ ಕಾರ್ಯವನ್ನು ನೋಡಲು ಗ್ರಾಮದ ಸುತ್ತಮುತ್ತಲಿನ ಜನರು ಆಗಮಿಸಿದ್ದು ಬಿಸಿಲನ್ನು ಲೆಕ್ಕಿಸದೆ ಸಿಡಿಕಾರ್ಯವನ್ನು ಕಣ್ತುಂಬಿಕೊಂಡರು.

ಸಿಬಿಎಸ್ ನಿಂದ ಅಭಿನಂದನೆ

ಪದ್ಮವಿಭೂಷಣ ಪುರಸ್ಕೃತರಾದ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಧರ್ಮಸ್ಥಳಕ್ಕೆ ತೆರಳಿ ಅಭಿನಂದಿಸಿದರು. 

ಅಂಬೇಡ್ಕರ್ ವಿಚಾರದಾರೆ ಸರ್ವಕಾಲಕ್ಕೂ ಪ್ರಸ್ತುತ

ಹುಳಿಯಾರು ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸಮಕಾಲಿನ ಸಂದರ್ಭ ಹಾಗೂ ಅಂಬೇಡ್ಕರ್ ಬಗ್ಗೆ ವಿಚಾರಗೊಷ್ಠಿ ನಡೆಯಿತು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸಮಕಾಲಿನ ಸಂದರ್ಭ ಹಾಗೂ ಅಂಬೇಡ್ಕರ್ ಬಗ್ಗೆ ವಿಚಾರಗೊಷ್ಠಿ ನಡೆಯಿತು. ಈ ಸಮಕಾಲಿನ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರಧಾರೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ಉಪನ್ಯಾಸಕ ಹನುಂತಪ್ಪ ಮಾತನಾಡಿ ಮಹಾನ್ ಚಿಂತಕರಾದ ಅಂಬೇಡ್ಕರ್ ಅವರ ವಿಚಾರಧಾರೆಗಳು ಘೋಷಣೆಯಾಗದೆ ಬದುಕಾಗಬೇಕು, ಸಾಮಾಜಿಕ ಸುಧಾರಣೆಯ ಅಸ್ತ್ರವಾಗಬೇಕು ಎಂದರು. ಅಂಬೇಡ್ಕರ್ ಕೇವಲ ಸಂವಿಧಾನ ರಚಿಸಿದವರು ಎನ್ನುವುದಕ್ಕೆ ಮಾತ್ರ ಒತ್ತುಕೊಡದೆ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯ ಆಗಬೇಕು ಎಂದರು. ಈ ವೇಳೆ ಕನ್ನಡ ಉಪನ್ಯಾಸಕ ಶಂಕರಲಿಂಗಯ್ಯ, ಕಾಲೇಜಿನ ಅಧೀಕ್ಷಕ ಹೀಮಂತರಾಜು,ಉಪನ್ಯಾಸಕರುಗಳಾದ ಶ್ರೀನಿವಾಸಪ್ಪ, ಸೈಯ್ಯದ್ ಇಬ್ರಾಹಿಂ, ದೈಹಿಕ ನಿರ್ದೇಶಕ ಶಿವಯ್ಯ, ಗ್ರಂಥಪಾಲಕ ಲೋಕೇಶ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಭಕ್ತರ ಹರ್ಷೋದ್ಘಾರದಲ್ಲಿ ನಡೆದ ಪಟ್ಟದಕಳಸ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಅಮ್ಮನವರ ಪಟ್ಟದಕಳಸ ಮಹೋತ್ಸವ ಭಕ್ತರ ಹರ್ಶ್ಗೋದ್ಗಾರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭ ದೇವಿಯ ಪಟ್ಟದಕಳಸ ಮಹೋತ್ಸವ ಭಕ್ತರ ಹರ್ಶ್ಗೋದ್ಗಾರದಲ್ಲಿ ಗುರುವಾರ ಜರುಗಿತು.  ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವರುಗಳನ್ನು ಮುಂಜಾನೆ ಗ್ರಾಮದ ಸಮೀಪದ ಸಿಹಿನೀರು ಬಾವಿ ಹತ್ತಿರಕ್ಕೆ ಕರೆದುಕೊಂಡು ಹೋಗಿ ಗಂಗಾಸ್ನಾನ ಹಾಗೂ ಪಟ್ಟದ ಕಳಸ ಸ್ಥಾಪನೆ ನಡೆಸಲಾಯಿತು. ಮಹಾಮಂಗಳರತಿ ಹಾಗೂ ಪನಿವಾರ ವಿತರಿಸಿದ ನಂತರ ಪಟ್ಟದ ಕಳಸದೊಂದಿಗೆ ಹರಕೆಹೊತ್ತ ಹೆಣ್ಣುಮಕ್ಕಳು ಕಳಸಗಳನ್ನು ಹೊತ್ತು ಅಲಂಕೃತ ಕಾಳಮ್ಮದೇವಿಯೊಂದಿಗೆ ನಡೆಮುಡಿಯಲ್ಲಿ ಹೆಜ್ಜೆ ಹಾಕಿದರು. ವಾದ್ಯಮೇಳದೊಂದಿಗೆ ದೇವರುಗಳ ಮದಾಸಿ ಕುಣಿತದಲ್ಲಿ ನಡೆಮುಡಿ ನಡೆದು ದೇವಾಲಯದಲ್ಲಿಗೆ ಆಗಮಿಸಿ ಕಳಸಗಳನ್ನು ವಿಸರ್ಜಿಸಲಾಯಿತು. ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಯಾಗದಿರಲಿ ಎಂದು ದೇವರಲ್ಲಿ ಹರಕೆ ಮಾಡಿಕೊಂಡು ಪ್ರತಿ ವರ್ಷ ಕಳಸ ಹೊರಿಕೊಂಡು ಬರುತ್ತಿದ್ದಾರೆ. ನಡೆಮುಡಿ ನೋಡಲು ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾತ್ರಿ ಅಮ್ಮನವರ ಉಯ್ಯಾಲೋತ್ಸವ ಹಾಗೂ ದೇವರುಗಳ ಮದಾಸಿ ಕುಣಿತ ನಡೆಯಿತು. ಶುಕ್ರವಾರ ಮಧ್ಯಾಹ್

ಜಾತಿಗಣತಿ : ಬ್ರಾಹ್ಮಣ ಎಂದೇ ನಮೂದಿಸಿ

ಈಗಾಗಲೇ ಜಾತಿಗಣತಿ ಪ್ರಾರಂಭವಾಗಿದ್ದು ಗಣತಿದಾರರು ಮನೆಮನೆಗಳಿಗೆ ತೆರಳಿ ಮನೆಯವರಿಂದ ಮಾಹಿತಿ ಪಡೆಯುತ್ತಿದ್ದು ಬ್ರಾಹ್ಮಣ ಸಮುದಾಯದವರು ತಮ್ಮಲ್ಲಿನ ಒಗ್ಗಟ್ಟನು ಬಲಪಡಿಸುವ ನಿಟ್ಟಿನಲ್ಲಿ ಯಾವುದೇ ಉಪಜಾತಿ,ಪಂಗಡಗಳನ್ನು ನಮೂದಿಸದೆ "ಬ್ರಾಹ್ಮಣ" ಎಂದಷ್ಟೇ ನಮೂದಿಸುವಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಮಧುಸೂಧನ್ ರಾವ್ ಮನವಿ ಮಾಡಿದ್ದಾರೆ. ಗಣತಿದಾರರು ಬ್ರಾಹ್ಮಣ ಸಮುದಾಯದವರ ಮನೆ ಬಂದಾಗ ಕಾಲಂ ೬ರಲ್ಲಿ ಜಾತಿ ಎಂಬಲ್ಲಿ ಬ್ರಾಹ್ಮಣ ಸಂಖ್ಯೆ ೦೨೦೦ ಎಂದು ಮಾತ್ರ ನಮೂದಿಸಿ ಕಾಲಂ ೭ ಮತ್ತು ೮ ರಲ್ಲಿ ಯಾವುದೇ ಉಪಜಾತಿ ಪರ್ಯಾಯ ಹೆಸರನ್ನು ನಮೂದಿಸದಂತೆ ಅವರು ತಿಳಿಸಿದ್ದಾರೆ.

ತಾ.೧೭ ಉಚಿತ ಸಂಗೀತ ಶಿಬಿರ

ಶ್ರೀಮಾರುತಿ ಸಂಗೀತಶಾಲೆ ಸಹಯೋಗದಲ್ಲಿ ಪಟ್ಟಣದ ಗಾಂಧಿಭವನದಲ್ಲಿ ನಾಳೆ(ತಾ.೧೭) ಶುಕ್ರವಾರದಿಂದ ತಾ.೨೬ರ ಭಾನುವಾರದವರೆಗೆ ಹತ್ತು ದಿನಗಳ ಕಾಲ ಉಚಿತ ಸಂಗೀತ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಸಂಗೀತದ ವಿವಿಧ ಅಯಾಮಗಳನ್ನು ಕಲಿಸಿಕೊಡಲಾಗುವುದಿದ್ದು ಪ್ರತಿನಿತ್ಯ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨ರವರೆಗೆ ಸಂಗೀತಾಭ್ಯಾಸ ನಡೆಯಲಿದೆ.ಆಸಕ್ತರು ಹೆಚ್ಚಿನ ವಿವರಕ್ಕಾಗಿ ೯೪೪೮೭೬೯೫೮೨ ಹಾಗೂ ೯೧೪೧೪೬೪೦೪೨ ಸಂಪರ್ಕಿಸಬಹುದಾಗಿದೆ.

ಗಬ್ಬುನಾರುವ ಚರಂಡಿ : ಪಾದಾಚಾರಿಗಳ ಹಿಡಿಶಾಪ

ಹುಳಿಯಾರು  ಪಟ್ಟಣದ ಬೀರದೇವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ನಿತ್ಯ ನೂರಾರು ಜನ ಸಂಚರಿಸುವುದಲ್ಲದೆ ಹತ್ತಾರು ಅಂಗಡಿಗಳಿದ್ದು ಈ ರಸ್ತೆಬದಿಯ ಚರಂಡಿಯ ತುಂಬೆಲ್ಲಾ ಪ್ಲಾಸ್ಟಿಕ್ ಲೋಟ ಸೇರಿದಂತೆ ತ್ಯಾಜ್ಯವಸ್ತುಗಳು ತುಂಬಿ ಗಬ್ಬುವಾಸನೆ ಬರುತ್ತಿದ್ದರೂ ಸಹ ಗ್ರಾ.ಪಂ.ಯವರು ಸ್ವಚ್ಚಗೊಳಿಸುವಲ್ಲಿ ಮುಂದಾಗಿಲ್ಲವೆಂದು ಇಲ್ಲಿ ಸಂಚರಿಸುವ ಪಾದಾಚಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಹುಳಿಯಾರಿನ ಬೀರಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆ ಬದಿಯ ಚರಂಡಿಯನ್ನು ತೋರಿಸುತ್ತಿರುವ ಅಂಗಡಿಯವ. ಪಟ್ಟಣದೆಲ್ಲೆಡೆ ಅನೈರ್ಮಲ್ಯತೆ ಹೆಚ್ಚಿದ್ದರೂ ಸಹ ಈ ಬಗ್ಗೆ ಗ್ರಾ.ಪಂ.ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಚರಂಡಿಯನ್ನು ಸ್ವಚ್ಚಗೊಳಿಸಿ ತಿಂಗಳುಗಳೇ ಕಳೆದಿದ್ದು ಪೌರ ಕಾರ್ಮಿಕರಿಗೆ ಇದನ್ನು ತೋರಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಸಂಚರಿಸುವವರು ಹಾಗೂ ಅಂಗಡಿದಾರರು ವಾಸನೆ ತಾಳಲಾರದೆ ಮೂಗುಮುಚ್ಚಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ತುಂಬ ಕಸಕಡ್ಡಿ,ಪ್ಲಾಸ್ಟಿಕ್ ಲೋಟ ಸೇರಿದಂತೆ ಇನ್ನಿತರ ವಸ್ತುಗಳು ತುಂಬಿರುವುದರಿಂದ ನೀರು ಹರಿಯದೆ ಅಲ್ಲಿಯೇ ನಿಂತು ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಶೀಘ್ರವೇ ಚರಂಡಿಯನ್ನು ಸ್ವಚ್ಚಗೊಳಿಸದೆ ಹೋದರೆ ಅನೈರ್ಮಲ್ಯತೆಯಿಂದ ರೋಗರುಜಿನೆಗಳು ಉಲ್ಬಣಿಸಲಿದ್ದು ಕೂಡಲೇ ಪಂಚಾಯ್ತಿಯವರು ಚರಂಡಿ ಸ್ವಚ್ಚಗೊಳಿಸುವಂತೆ ಅ

ಶಾಸ್ತ್ರೋಕ್ತವಾಗಿ ನಡೆದ ಮಧುವಣಗಿತ್ತಿ ಕಾರ್ಯ

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರ ಹಾಗೂ ಹೊರಕೆರೆ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಶಾಸ್ತ್ರೋಕ್ತವಾಗಿ ಮಧುವಣಗಿತ್ತಿ ಕಾರ್ಯ ನಡೆಸಲಾಯಿತು. ಹುಳಿಯಾರು ಹೋಬಳಿ ಕೆಂಕೆರೆ ಕಾಳಮ್ಮದೇವಿಯನ್ನು ಮಧುವಣಗಿತ್ತಿಕಾರ್ಯದ ಅಂಗವಾಗಿ ವಿಳ್ಯೆದೆಲೆ ಮಂಟಪದಲ್ಲಿ ಅಲಂಕರಿಸಿರುವುದು. ಕಾಳಮ್ಮದೇವಿಯನ್ನು ದಮ್ಮಡಿಹಟ್ಟಿಗೆ ಕರೆದೊಯ್ದು ಈರಬೊಮ್ಮಕ್ಕದೇವಿಯೊಂದಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಿ ನಂತರ ಅಮ್ಮನವರನ್ನು ಮದುವಣಗಿತ್ತಿಯಂತೆ ಅಲಂಕರಿಸಿ ವಿಳ್ಯೆದೆಲೆಯಿಂದ ಮಾಡಿದ್ದ ಮಂಟಪದಲ್ಲಿ ಅಮ್ಮನವರನ್ನು ಕುಳ್ಳಿರಿಸಿ ಗ್ರಾಮಸ್ಥರೆಲ್ಲಾ ಸೇರಿ ಮಡಿಲಕ್ಕಿ ಹಾಕಿದರು. ನಂತರ ಅಮ್ಮನವರನ್ನು ಕೆಂಕೆರೆಗೆ ಕಳುಹಿಸಿಕೊಡುವ ಶಾಸ್ತ್ರ ಮಾಡಿ ಬೀಳ್ಕೊಟ್ಟರು. ಗ್ರಾಮದ ಶ್ರೀಕಾಳಿಕಾಂಬ ಭಜನಾ ಮಂಡಳಿಯ ಮಹಿಳೆಯರು ಭಜನೆ ನದೆಸಿಕೊಟ್ಟರು. ಗಜಣ್ಣ ಅವರ ಸೇವಾರ್ಥದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತು. ಈ ವೇಳೆ ಕುರಿಹಟ್ಟಿ,ದಮ್ಮಡಿಹಟ್ಟಿ,ಕಂಪನಹಳ್ಳಿ,ಕೆಂಕೆರೆಯ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು. ಕಾಳಮ್ಮನ ನಡೆಮುಡಿ ಕಳಸ : ಇಂದು ಗುರುವಾರ ಅಮ್ಮನವರ ಪಟ್ಟದಕಳಸ ಮಹೋತ್ಸವ ನಡೆಯಲಿದೆ. ಮುಂಜಾನೆ ಗ್ರಾಮದ ಸಮೀಪದ ಸಿಹಿನೀರು ಬಾವಿಹತ್ತಿರಕ್ಕೆ ಕಾಳಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇ

ಪೋಲೀಸ್ ಠಾಣೆಯಲ್ಲಿ ಅಂಬೇಡ್ಕರ್ ಜಯಂತಿ

ಹುಳಿಯಾರು  ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪಿಎಸೈ ಬಿ.ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೪ನೇ ಜನ್ಮದಿನವನ್ನು ಆಚರಿಸಿದರು. ಹುಳಿಯಾರಿನ ಪೋಲೀಸ್ ಠಾಣೆಯಲ್ಲಿ ಪಿಎಸೈ ಬಿ.ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೪ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಿಎಸೈ ಮಾತನಾಡಿ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಮೆಟ್ಟಿನಿಂತು ಯಶಸ್ಸು ಸಾಧಿಸಿದ್ದನ್ನು ತಿಳಿಸಿದರು. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಈ ವೇಳೆ ಎ.ಎಸ್.ಐ ಗಳಾದ ಗಂಗಾಧರಯ್ಯ, ಶಿವಣ್ಣ,ರಾಜಣ್ಣ ಹಾಗೂ ಇತರ ಸಿಬ್ಬಂದಿಯವರು ಹಾಜರಿದ್ದರು.

ಹೋಬಳಿಯ ವಿವಿಧೆಡೆ ಅಂಬೇಡ್ಕರ್ ಜಯಂತಿ

ಹುಳಿಯಾರು  ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ೧೨೪ನೇ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ಗ್ರಾ.ಪಂಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ಸಮ್ಮುಖದಲ್ಲಿ ಅಂಬೇದ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು. ಪಿಡಿಓ ಅಡವೀಶ್ ಕುಮಾರ್,ಉಪಾಧ್ಯಕ್ಷೆ ಅಭಿದುನ್ನಿಸಾ, ಸದಸ್ಯರಾದ ಜಹೀರ್ ಸಾಬ,ವೆಂಕಟಮ್ಮ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಆಂಬೇಡ್ಕರ್ ಯುವಕ ಸಂಘದವತಿಯಿಂದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಮಾಡಿದರು. ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈಕಾರ ಹಾಕುತ್ತಾ ಮೆರವಣಿಗೆ ಮಾಡಿದರು. ಈವೇಳೆ ಸಂಘದ ಕೆ.ಜೆ.ಮಂಜುನಾಥ್ ಮಾತನಾಡಿ , ಸಮಾಜದಲ್ಲಿ ಹಿಂದುಳಿದ ಹಾಗೂ ಶೋಷಿತ ವರ್ಗದ ಅಭ್ಯುದಯಕ್ಕಾಗಿ ಶ್ರಮಿಸಿದ ಹಾಗೂ ದೇಶದ ಆಡಳಿತ ವ್ಯವಸ್ಥೆಗೆ ಪೂರಕವಾದ ಸಂವಿಧಾನ ರಚನೆಗೆ ಭದ್ರ ಬುನಾದಿ ಹಾಕಿ ಸಂವಿಧಾನ ಶಿಲ್ಪಿ ಎಂಬ ಹೆಗ್ಗಳಿಕೆ ಪಡೆದ ಮಹಾನ್ ವ್ಯಕ್ತಿಯಾಗಿದ್ದಾರೆ. ಕಳೆದ ಹತ್ತಾರು ವರ್ಷಗಳ ಹಿಂದೆ ಸಮಾಜದಲ್ಲಿ ಜಾತಿಪದ್ದತಿ ವ್ಯವಸ್ಥೆಯಿಂದಾಗಿ ಮೇಲು-ಕೀಳು ಎಂಬ ಬೇಧಭಾವ ಬೆಳೆದು ತಾರತಮ್ಯತೆ ಉಂಟಾಗ