ವಿಷಯಕ್ಕೆ ಹೋಗಿ
ನಿಧನ : ಮಾಜಿ ತಾ.ಪಂ. ಸದಸ್ಯ ಎನ್.ಬಿ.ಲಿಂಗದೇವರು
ಮಾಜಿ ತಾ.ಪಂ.ಸದಸ್ಯ ಎನ್.ಬಿ.ಲಿಂಗದೇವರು(೫೪) ತೀವ್ರ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು. ಮೃತರು ಹುಳಿಯಾರು ಬ್ಲಾಕ್ ಕ್ರಾಂಗ್ರೆಸ್ ಅಧ್ಯಕ್ಷ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಸಚಿವ ಜಯಚಂದ್ರ ಅವರ ಕಟ್ಟಾ ಬೆಂಬಲಿಗರಾಗಿದ್ದರು.
 |
| ಎನ್.ಬಿ.ಲಿಂಗದೇವರು |
ಪತ್ನಿ ಮಾಜಿ ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ಸೇರಿದಂತೆ ಒಬ್ಬ ಪುತ್ರನನ್ನು ಅಗಲಿದ್ದಾರೆ. ಭಾನುವಾರ ಸಂಜೆ ಮೃತರ ಸ್ವಗ್ರಾಮ ನಂದಿಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿತು. ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ, ರೈತಸಂಘದ ಕೆಂಕೆರೆ ಸತೀಶ್, ತಾ.ಪಂ.ಸದಸ್ಯ ಹೊಸಹಳ್ಳಿ ಜಯಣ್ಣ ಸೇರಿದಂತೆ ಇತರರು ಅಂತಿಮ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ