ಹುಳಿಯಾರು ಸಮೀಪದ ತಿರುಮಲಾಪುರ ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆಯೊಬ್ಬರು ತೂಬಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದು ಶವ ಶನಿವಾರ ಸಂಜೆ ಪತ್ತೆಯಾಗಿದೆ.
ಮೃತ ದುರ್ದೈವಿಯನ್ನು ಹುಳಿಯಾರಿನ ತಿಪಟೂರು ರಸ್ತೆ ನಿವಾಸಿ ನಿರ್ಮಲ(೩೫) ಎಂದು ಗುರ್ತಿಸಲಾಗಿದೆ. ಬಟ್ಟೆ ಒಗೆಯಲು ಹೋದಾಗ ಮೃತ ಪಟ್ಟಿರಬಹುದು ಎನ್ನಲಾಗಿದ್ದು ಮೃತಳ ತಂದೆ ರಂಗಯ್ಯ ಮಾತ್ರ ಇದು ಅನುಮಾನಾಸ್ಪದ ಸಾವು ಎಂದು ಠಾಣೆಗೆ ದೂರು ನೀಡಿದ್ದಾರೆ. ಪಿಎಸ್ ಐ ಪ್ರವೀಣ್ ಕುರ್ಮಾ ತನಿಖೇ ಕೈಗೊಂಡಿದ್ದು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ