ಹುಳಿಯಾರು ಹೋಬಳಿ ಕೆಂಕೆರೆಯ ಗ್ರಾಮದೇವತೆ ಶ್ರೀಕಾಳಿಕಾಂಬದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ಕಾಳಮ್ಮನ ಮೂಲದೇಗುಲ ವರಲಮ್ಮನಗುಡಿಗೆ ಅಪಾರ ಸಂಖ್ಯೆಯ ಭಕ್ತಾಧಿಗಳು ತೆರಳಿ ಅಮ್ಮನವರಿಗೆ ಆರತಿ ಮಾಡುವ ಮೂಲಕ ಬಾನ ಆಚರಿಸಿದರು.
ಹುಳಿಯಾರು ಹೋಬಳಿ ಕೆಂಕೆರೆಯ ಗ್ರಾಮದೇವತೆ ಶ್ರೀಕಾಳಮ್ಮದೇವಿಯ ಆರತಿಬಾನದ ಅಂಗವಾಗಿ ಅಮ್ಮನವರ ಮೂಲದಲ್ಲಿ ಮಹಿಳೆಯರು ಅಮ್ಮನವರಿಗೆ ಆರತಿ ಮಾಡಿದರು. |
ಶನಿವಾರದಿಂದ ಜಾತ್ರೆ ಪ್ರಾರಂಭಗೊಂಡು ಮೂರು ದಿನಗಳಕಾಲ ಅಗ್ನಿಕುಂಡ ಸೇವೆ ನಡೆದಿದ್ದು, ಮಂಗಳವಾರ ಆರತಿಬಾನದ ಅಂಗವಾಗಿ ಕೆಂಕೆರೆ ಸೇರಿದಂತೆ ಬರದಲೇಪಾಳ್ಯ, ಹೊನ್ನಯ್ಯನಪಾಳ್ಯ,ಗೊಲ್ಲರಹಟ್ಟಿ,ಅಡಾಣಿಕಲ್ಲು,ಬಸವನಗುಡಿ,ಪುರದಮಠ,ಕಂಪನಹಳ್ಳಿಯಿಂದ ಹೆಚ್ಚಿನ ಸಂಕ್ಯೆಯ ಭಕ್ತಾಧಿಗಳು ಮೂಲಸ್ಥಾನಕ್ಕೆ ಆಗಮಿಸಿದ್ದರು. ಗೃಹಿಣಿಯರು ಮನೆಯಲ್ಲಿ ಸಿಹಿ ಅಡುಗೆ ಹಾಗೂ ತಂಬ್ಬಿಟ್ಟಿನ ಆರತಿಗಳನ್ನು ಸಿದ್ದ ಮಾಡಿಕೊಂಡು ದೇವಾಲಯದಲ್ಲಿಗೆ ಬಂದು ಪೂಜೆಸಲ್ಲಿಸಿ ತಾವು ತಂದಿದ್ದ ನೈವೇದ್ಯವನ್ನು ಅರ್ಪಿಸಿ ಆರತಿ ಮಾಡಿದರು. ಬೆಳಿಗ್ಗೆ ೭ರಿಂದ ಸಂಜೆವರೆಗೂ ಭಕ್ತಧಿಗಳು ಮೂಲಸ್ಥಾನಕ್ಕೆ ಆಗಮಿಸಿದ್ದು ದೇವಾಲಯದ ತುಂಬೆಲ್ಲಾ ಮಹಿಳೆಯರೇ ಹೆಚ್ಚಾಗಿದ್ದರು. ಸಂಜೆ ಮಧುವಣಗಿತ್ತಿ ಕಾರ್ಯದ ಅಂಗವಾಗಿ ಕಾಳಮ್ಮನವರನ್ನು ದಮ್ಮಡಿಹಟ್ಟಿಗೆ ಕರೆದೊಯಲಾಯಿತು.
ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರಸ್ವಾಮಿ ಹಾಗೂ ಶ್ರೀಹೊರಕೆರೆ ರಂಗನಾಥಸ್ವಾಮಿ ಸಮ್ಮುಖದಲ್ಲಿ ಅಮನವರ ಕಂಕಣಧಾರಣೆ ಹಾಗೂ ಮಧುವಣಗಿತ್ತಿ ಶಾಸ್ತ್ರ ನಡೆದು ನಂತರ ಕಾಳಮ್ಮದೇವಿ ಹಾಗೂ ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ ಆರತಿಗಳ ಸಮೇತ ಕೆಂಕೆರೆಗೆ ಆಗಮಿಸಲಾಯಿತು. ವರ್ತಕ ಗಜಣ್ಣ ಅವರ ಸೇವಾರ್ಥದಲ್ಲಿ ಭಕ್ತಾಧಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಅದೇ ದಿನ ರಾತ್ರಿ ಗೌಡಗೆರೆಯ ದುರ್ಗಮ್ಮ,ಹುಳಿಯಾರು ದುರ್ಗಮ್ಮ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಅಮ್ಮನವರ ಮೂಲಸ್ಥಾನಕ್ಕೆ ಸಕಲ ದೇವರುಗಳು ತೆರಳಿ ಬಾನ ಸಮರ್ಪಿಸುವ ಕಾರ್ಯ ನಡೆಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ