ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಅಮ್ಮನವರ ಪಟ್ಟದಕಳಸ ಮಹೋತ್ಸವ ಭಕ್ತರ ಹರ್ಶ್ಗೋದ್ಗಾರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭ ದೇವಿಯ ಪಟ್ಟದಕಳಸ ಮಹೋತ್ಸವ ಭಕ್ತರ ಹರ್ಶ್ಗೋದ್ಗಾರದಲ್ಲಿ ಗುರುವಾರ ಜರುಗಿತು. |
ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವರುಗಳನ್ನು ಮುಂಜಾನೆ ಗ್ರಾಮದ ಸಮೀಪದ ಸಿಹಿನೀರು ಬಾವಿ ಹತ್ತಿರಕ್ಕೆ ಕರೆದುಕೊಂಡು ಹೋಗಿ ಗಂಗಾಸ್ನಾನ ಹಾಗೂ ಪಟ್ಟದ ಕಳಸ ಸ್ಥಾಪನೆ ನಡೆಸಲಾಯಿತು. ಮಹಾಮಂಗಳರತಿ ಹಾಗೂ ಪನಿವಾರ ವಿತರಿಸಿದ ನಂತರ ಪಟ್ಟದ ಕಳಸದೊಂದಿಗೆ ಹರಕೆಹೊತ್ತ ಹೆಣ್ಣುಮಕ್ಕಳು ಕಳಸಗಳನ್ನು ಹೊತ್ತು ಅಲಂಕೃತ ಕಾಳಮ್ಮದೇವಿಯೊಂದಿಗೆ ನಡೆಮುಡಿಯಲ್ಲಿ ಹೆಜ್ಜೆ ಹಾಕಿದರು. ವಾದ್ಯಮೇಳದೊಂದಿಗೆ ದೇವರುಗಳ ಮದಾಸಿ ಕುಣಿತದಲ್ಲಿ ನಡೆಮುಡಿ ನಡೆದು ದೇವಾಲಯದಲ್ಲಿಗೆ ಆಗಮಿಸಿ ಕಳಸಗಳನ್ನು ವಿಸರ್ಜಿಸಲಾಯಿತು. ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಯಾಗದಿರಲಿ ಎಂದು ದೇವರಲ್ಲಿ ಹರಕೆ ಮಾಡಿಕೊಂಡು ಪ್ರತಿ ವರ್ಷ ಕಳಸ ಹೊರಿಕೊಂಡು ಬರುತ್ತಿದ್ದಾರೆ. ನಡೆಮುಡಿ ನೋಡಲು ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾತ್ರಿ ಅಮ್ಮನವರ ಉಯ್ಯಾಲೋತ್ಸವ ಹಾಗೂ ದೇವರುಗಳ ಮದಾಸಿ ಕುಣಿತ ನಡೆಯಿತು. ಶುಕ್ರವಾರ ಮಧ್ಯಾಹ್ನ ಸಿಡಿ ಕಾರ್ಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ