ಹಳ್ಳಿಗೊಂದು ಅರಳಿಮರ ಎಷ್ಟು ಮುಖ್ಯವೋ ಅಂತೆಯೇ ಹಳ್ಳಿಗೊಂದು ಕಲಾತಂಡ ಅಷ್ಟೇ ಮುಖ್ಯವಾಗಿದ್ದು , ಜಾನಪದ,ಪೌರಾಣಿಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾತಂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಕಲಾವಿದ ಮಲ್ಲಿಕಾರ್ಜುನ್ ಕೆಂಕೆರೆ ತಿಳಿಸಿದರು.
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಶ್ರೀಚನ್ನಬಸವೇಶ್ವರಸ್ವಾಮಿ ಕೃಪಾಪೂಷಿತ ನಾಟಕ ಮಂಡಳಿಯವತಿಯಿಂದ ನಡೆದ ಶನಿಪ್ರಭಾವ ನಾಟಕ ಪ್ರದರ್ಶನವನ್ನು ಕಲಾವಿದ ಮಲ್ಲಿಕಾರ್ಜುನ್ ಕೆಂಕೆರೆ ಉದ್ಘಾಟಿಸಿದರು. |
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಚನ್ನಬಸವೇಶ್ವರಸ್ವಾಮಿ ಕೃಪಾಪೂಷಿತ ನಾಟಕ ಮಂಡಳಿಯ ಕಲಾವಿದರು ಮಂಗಳವಾರ ರಾತ್ರಿ ಅಭಿನಯಿಸಿದ ಶನಿಪ್ರಭಾವ ನಾಟಕ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಒಬ್ಬ ಕಲಾವಿದನಿಗೆ ವಿವಿಧ ಗ್ರಾಮಗಳಲ್ಲಿ ಎಷ್ಟೇ ಪುರಸ್ಕಾರ,ಪ್ರಶಸ್ತಿಗಳು ಬಂದಿದ್ದರೂ ಸಹ ಆತನ ಸ್ವಂತ ಊರಿನವರು ಮಾಡುವ ಸನ್ಮಾನ ಎಲ್ಲದಕ್ಕಿಂತ ಮೀರಿದ್ದು ಅದಕ್ಕೆ ತಾನು ಅಬಾರಿಯಾಗಿರುವುದಾಗಿ ತಿಳಿಸಿದರು. ಟಿ.ವಿ.ಮಾಧ್ಯಮದಿಂದ ಪ್ರಸ್ತುತದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಕಣ್ಮರೆಯಾಗುತ್ತಿದ್ದರೂ ಸಹ ಕೆಂಕೆರೆಯಲ್ಲಿ ಮಾತ್ರ ಪ್ರತಿ ವರ್ಷ ತಪ್ಪದೇ ನಾಟಕಾಭಿನಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಚಿ.ನಾ.ಹಳ್ಳಿ ಕಸಾಪ ರವಿಕುಮಾರ್ ಮಾತನಾಡಿ, ಕೆಂಕೆರೆ ಗ್ರಾಮದಲ್ಲಿ ಹತ್ತಾರು ಹಿರಿಯರನ್ನೊಳಗೊಂಡ ಕಲಾತಂಡವಿದ್ದು ಯಾವುದೇ ಇಲಾಖೆಯ ಸಹಕಾರವನ್ನು ಬೇಡದೆ ತಾವುಗಳೆ ಸೇರಿ ನಾಟಕಾಭಿನಯ ಮಾಡಿಕೊಂಡು ಬರುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಕಸಾಪವತಿಯಿಂದ ಈ ಕಲಾತಂಡಕ್ಕೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದರು.
ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀಚನ್ನಬಸವೇಶ್ವರಸ್ವಾಮಿ ಕೃಪಾಪೂಷಿತ ನಾಟಕ ಮಂಡಳಿಯವರು ಅಯೋಜಿಸಿದ್ದ ಶನಿಪ್ರಭಾವ ನಾಟಕ ಪ್ರದರ್ಶನದಲ್ಲಿ ಕಲಾವಿದ ಮಲ್ಲಿಕಾರ್ಜುನ್ ಕೆಂಕೆರೆ ಅವರನ್ನು ಸನ್ಮಾನಿಸಲಾಯಿತು.
|
ಈ ವೇಳೆ ಹಾರ್ಮೋನಿಯಂ ಮಾಸ್ಟರ್ ಕೆ.ಪಿ.ಚನ್ನಬಸವಯ್ಯ, ತಬಲವಾದಕ ಕಾಟಯ್ಯ, ಸ್ಟೇಜ್ ಮ್ಯಾನೇಜರ್ ವರದಯ್ಯ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಈಶ್ವರಯ್ಯ, ಪ್ಲಾಟ್ ಮ್ಯಾನೇಜರ್ ದೊರೆಚನ್ನಬಸವಯ್ಯ, ಕಲಾವಿದರಾದ ಕೆ.ಬಿ.ರಮೇಶ್, ಶೇಖರ್, ಶರತ್, ಗಂಗಾಧರ್,ಕಂಠೇಶ್,ಕೊಟ್ಟುರಯ್ಯ,ವಿರೂಪಾಕ್ಷ,ನಿಂಗರಾಜು,ಬಳ್ಳಾರಿಗಂಗಣ್ಣಮಂಜುನಾಥ,ಯುವರಾಜ,ಕಿರಣ್,ತ್ಯಾಗರಾಜ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ