ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಬದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಸಿಡಿಕಾರ್ಯ ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಘಾರದಲ್ಲಿ ನೆರವೇರಿತು.
ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀಕಾಳಿಕಾಂಬದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಸಿಡಿಕಾರ್ಯ ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಘಾರದಲ್ಲಿ ನೆರವೇರಿತು. |
ಸಿಡಿಕಾರ್ಯದ ಅಂಗವಾಗಿ ಗುರುವಾರ ರಾತ್ರಿ ಕಾಳಮ್ಮನ ಉಯ್ಯಾಲೋತ್ಸವ ಹಾಗೂ ಮೆರವಣಿಗೆ ನಡೆಸಲಾಯಿತು. ಶುಕ್ರವಾರ ಬೆಳಿಗ್ಗೆ ಸಿಡಿಮರವನ್ನು ಸಿದ್ದಗೊಳಿಸಿ ಸಿಡಿ ಮರವೇರುವ ವ್ಯಕ್ತಿಯೊಂದಿಗೆ ಆರತಿ ಕಳಸಗಳನ್ನು ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿದರು. ನಂತರ ಉತ್ಸವ ಮಂಟಪದಲ್ಲಿದ್ದ ಕಾಳಮ್ಮದೇವಿ , ಹುಳಿಯಾರು ದುರ್ಗಮ್ಮ, ಗೌಡಗೆರೆ ದುರ್ಗಮ್ಮ ದೇವರುಗಳನ್ನು ಹೊರಡಿಸಿ ಸಿಡಿಮರಕ್ಕೆ ಪ್ರದಕ್ಷಿಣೆ ಬರಲಾಯಿತು. ನಂತರ ಸಿಡಿಮರದ ಒಂದು ತುದಿಗೆ ಭಕ್ತನನ್ನು ಮತ್ತೊಂದು ತುದಿಗೆ ಕಾಳಮ್ಮ ದೇವಿಯನ್ನು ಕುಳ್ಳಿರಿ ಸಿಜೈಕಾರ ಹಾಕುವ ಮೂಲಕ ಸಿಡಿಮರವನ್ನು ಒಂದು ಸುತ್ತು ಸುತ್ತಿಸಿದರು. ಈರಬೊಮ್ಮಕ್ಕದೇವಿಯನ್ನು ಸಹ ಸಿಡಿಮರದ ಮೇಲೆ ಕುಳ್ಳಿರಿಸಿ ಸುತ್ತಿಸಲಾಯಿತು. ಅಮ್ಮನವರ ಸಿಡಿ ಕಾರ್ಯವನ್ನು ನೋಡಲು ಗ್ರಾಮದ ಸುತ್ತಮುತ್ತಲಿನ ಜನರು ಆಗಮಿಸಿದ್ದು ಬಿಸಿಲನ್ನು ಲೆಕ್ಕಿಸದೆ ಸಿಡಿಕಾರ್ಯವನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ