ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿಯ ಪಟ್ಟದ ಬಸವ ಮಂಗಳವಾರ ಸಾವನಪ್ಪಿದ್ದು ಗ್ರಾಮಸ್ಥರೆಲ್ಲಾ ಸೇರಿ ಬಸವನ ಮೆರವಣಿಗೆ ಮಾಡಿದರಲ್ಲದೆ ಶಾಸ್ತ್ರೋಕ್ತವಾಗಿ ಅದರ ಅಂತ್ಯಕ್ರಿಯೆ ನಡೆಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿಯ ಪಟ್ಟದ ಬಸವ ಮಂಗಳವಾರ ಸಾವನಪ್ಪಿದ್ದು ಗ್ರಾಮಸ್ಥರೆಲ್ಲಾ ಸೇರಿ ಬಸವನ ಮೆರವಣಿಗೆ ಮಾಡಿದರು. |
ಸುಮಾರು ೧೫ ವರ್ಷ ವಯಸ್ಸಿನದಾಗಿದ್ದ ಬಸವ ಕಳೆದ ನಾಲ್ಕೈದು ವರ್ಷದಿಂದ ಸ್ವಾಮಿಯ ಪಟ್ಟದ ಬಸವನಾಗಿದ್ದು ಜಾತ್ರೆ ಸಮಯದಲ್ಲಿ ನಗಾರಿಯನ್ನು ಹೊತ್ತು ತನ್ನ ಸೇವೆ ಸಲ್ಲಿಸುತ್ತಿತ್ತು. ಗ್ರಾಮದ ಜನರು ಈ ಬಸವನನ್ನು ಚನ್ನಬಸವೇಶ್ವರಸ್ವಾಮಿಯ ಪ್ರತಿರೂಪವೆಂದು ನಿತ್ಯ ಪೂಜಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಬಸವ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕೊನೆಯುಸಿರೆಳಿಯಿತು.
ಸ್ವಾಮಿಯ ಪಟ್ಟದ ಬಸವ ಅಂತ್ಯಕ್ರಿಯೆ ಮಾಡುವ ನಿಟ್ಟಿನಲ್ಲಿ ಗ್ರಾಮದೇವರೆ ಕಾಳಮ್ಮದೇವಿಯ ಅಪ್ಪಣೆಯಂತೆ ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿಗೆ ಬಸವನ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಿ ಕಾರ್ಯಗಳನ್ನು ಮುಗಿಸಿದರು. ನಂತರ ಪಾನಕ ಪನಿವಾರ ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ