ರಾಜ್ಯಾದ್ಯಂತ ಏ.೧೧ರಿಂದ ಜಾತಿಗಣತಿ ಪ್ರಾರಂಭವಾಗಿದ್ದು ಏ.೩೦ರ ಒಳಗೆ ಸಂಪೂರ್ಣವಾಗಿ ಮುಗಿಸುವಂತೆ ತಿಳಿಸಿದ್ದಾರೆ ಆದರೆ ಅವರು ನೀಡಿರುವ ಕಾಲಾವಧಿಯಲ್ಲಿ ಗಣತಿ ಕಾರ್ಯ ಮುಗಿಸಲು ಅಸಾಧ್ಯವಾಗಿದ್ದು, ಸರ್ಕಾರ ಇನ್ನೂ ಹತ್ತುದಿನಗಳ ಕಾಲಾವಕಾಶ ನೀಡಿದರೆ ಅನುಕೂಲವಾಗುತ್ತದೆ ಎಂಬುದು ಗಣತಿದಾರರ ಕೋರಿಕೆಯಾಗಿದೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಮೇಲ್ವಿಚಾರಕರೇ ಮನೆಗಳಲ್ಲಿಗೆ ತೆರಳಿ ಜಾಗತಿಗಣತಿ ಮಾಡಿಸುತ್ತಿದ್ದಾರೆ.
|
ಜಾತಿಗಣತಿಯ ಫಾರಂನಲ್ಲಿ ಒಟ್ಟು ೫೫ ಪ್ರಶ್ನೆಗಳಿದ್ದು ಪ್ರತಿ ಮನೆಯಲ್ಲಿ ಎಲ್ಲಾ ಪ್ರಶ್ನೆಗಳನ್ನು ಕೇಳಿ ಅವರಿಂದ ಮಾಹಿತಿ ಪಡೆಯಲು ಕನಿಷ್ಠ ೩೦ ನಿಮಿಷಗಳು ಬೇಕಿದೆ ಅದರಂತೆ ದಿನಕ್ಕೆ ೬ ರಿಂದ ೭ ಮನೆ ಮಾತ್ರ ಮುಗಿಯುತ್ತಿವೆ . ಒಬ್ಬೊಬ್ಬ ಗಣತಿದಾರರಿಗೆ ಕನಿಷ್ಠ ೧೫೦ ರಿಂದ ೨೦೦ ಕ್ಕೂ ಅಧಿಕ ಮನೆಗಳನ್ನು ನೀಡಿದ್ದು, ಈಗಿರುವ ಕಾಲಾವಧಿಯಲ್ಲಿ ಮುಗಿಸುವುದು ಕಷ್ಟಸಾಧ್ಯವೆಂದು ಗಣತಿದಾರ ಶಿಕ್ಷಕಿ ಗೌರಮ್ಮ ತಿಳಿಸುತ್ತಾರೆ.
ಒಂದು ದಿನ ಮುಂಚಿತವಾಗಿ ಇಂತಹ ಮಾಹಿತಿ ಬೇಕೆಂದು ಕುಟುಂಬದವರಿಗೆ ತಿಳಿಸಿದ್ದರೂ ಸಹ ಗಣತಿದಾರರು ಮಾಹಿತಿ ಪಡೆಯಲು ಹೋದಾಗ ಆಧಾರ್ ಕಾರ್ಡ್,ವೋಟರ್ ಐಡಿ ಸೆರಿದಂತೆ ಇನ್ನಿತರ ದಾಖಲೆಗಳನ್ನು ಹುಡುಕುವಲ್ಲಿ ಜನ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಫಾರಂನಲ್ಲಿರುವ ಪ್ರಶ್ನೆಗಳನ್ನು ಕೇಳಿದರೆ ಕೆಲವರು ಗಣತಿದಾರರನ್ನೇ ಅಡ್ಡಪ್ರಶ್ನೆಗಳನ್ನು ಹಾಕಿ ಸಾಲ ಇದೆ ಎಂದರೆ ನೀವು ತಿರಿಸುತ್ತೀರಾ, ಮನೆ ಇಲ್ಲ ಎಂದರೆ ಮನೆ ಕೊಡಿಸುತ್ತೀರಾ ಎಂದು ಕೇಳುತ್ತಾರೆ. ಕೆಲವರೂ ತಮ್ಮ ಜಾತಿಯನ್ನು ಹೇಳುವಲ್ಲೂ ಗೊಂದಲಹೊಂದಿದ್ದಾರೆ. ಇಂತಹ ಕೆಲ ಸಮಸ್ಯೆಗಳಿದ್ದು ಇದೀಗ ನೀಡುರುವ ಅವಧಿಯಲ್ಲಿ ಜಾತಿಗಣತಿ ಮುಗಿಸಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡ ಸರ್ಕಾರ ಮೇ.೧೦ ರವರೆಗಾದರೂ ಅವಧಿ ವಿಸ್ತರಿಕಬೇಕೆಂದು ಕೆಂಕೆರೆ ಗ್ರಾಮದ ಮೇಲ್ವಿಚಾರಕ ಉಮಾಮಹೇಶ್ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ