೧೨ ನೇ ಶತಮಾನದ ಶಿವಶರಣರಲ್ಲಿ ಕಾಯಕಯೋಗಿ ಬಸವಣ್ಣನವರು ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ವಚನಗಳು ಇಂದಿಗೂ ಪ್ರಸ್ತುತವಾಗಿರುವುದಲ್ಲದೆ, ಅವರ ಕಾಯಕ ತತ್ವದ ಪಾಲನೆ ಮಾಡಬೇಕು ಎಂದು ಬಸವಮಂಟಪದ ಸೋಮಶೇಖರ್ ತಿಳಿಸಿದರು.
ಹುಳಿಯಾರು ಹೋಬಳಿ ಯಳನಡು ಗ್ರಾಮದ ಬಸವ ಮಂಟಪದಲ್ಲಿ ಬಸವ ಜಯಂತಿ ಆಚರಣೆ ನಡೆಯಿತು. |
ಹುಳಿಯಾರು ಹೋಬಳಿ ಯಳನಡು ಗ್ರಾಮದ ಬಸವ ಮಂಟಪದಲ್ಲಿ ಕಾರ್ಯಕಾರಿ ಮಂಡಳಿ ಹಾಗೂ ಸಾರ್ವಜನಿಕರು ಸೇರಿ ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಸಮಾಜದಲ್ಲಿ ಸಮಾನತೆ ತರುವಲ್ಲಿ ಎಲ್ಲರೂ ಸಮಾನರು, ಮೇಲು-ಕೀಳು ಎಂಬ ಯಾವುದೇ ಜಾತಿ ಭೇದವಿಲ್ಲ ಎಂದು ಸಾರಿದ ಮಹಾನ್ ವ್ಯಕ್ತಿ ಬಸವಣ್ಣ, ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅನೇಕ ಕಟ್ಟುಪಾಡುಗಳನ್ನು ಕಿತ್ತೊಗೆಯುವ ಕಾರ್ಯ ಮಾಡಿದವರು ಎಂದರು. ಬಸವಣ್ಣಬವರ ವಚನಗಳನ್ನು ಹಾಡುವ ಮೂಲಕ ಅವುಗಳ ಸಾರ ತಿಳಿಸಿದರು.
ಈ ವೇಳೆ ಬಸವ ಮಂಟಪದ ನಾಗರಾಜು,ಮಹೇಶ್ ಶಾಸ್ತ್ರಿ, ಮಲ್ಲಿಕಾರ್ಜುನಯ್ಯ,ಬಸವರಾಜಪ್ಪ, ಉಮಾಮಹೇಶ್,ಭಾಗ್ಯ ಶಶಿಧರ್,ಮಂಜುಳಾ,ಸಿದ್ದರಾಮಯ್ಯ, ಸ್ಟುಡಿಯೋ ಸುದರ್ಶನ್, ಚಂದ್ರಶೇಖರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ