ಹುಳಿಯಾರು ಹೋಬಳಿ ವ್ಯಾಪ್ತಿಯ ಬೋರನಕಣಿವೆ ಸಮೀಪದ ಜಯಚಂದ್ರನಗರದ ದಾಳಿಂಬೆ ಜಮೀನಿನವರಿಂದ ದುಡ್ಡು ಕಟ್ಟಿಸಿಕೊಂಡು ವಿದ್ಯುತ್ ಕೊಡಲು ಇಲಾಖೆ ವಿಫಲವಾಗಿದ್ದು ಕೂಡಲೇ ಬೆಳೆಗಾರರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದಲ್ಲಿ ಹುಳಿಯಾರು ಕಛೇರಿಯ ಮುಂದೆ ಧರಣಿ ಕೂರಲಿರುವುದಾಗಿ ರಾಜ್ಯ ರೈತಸಂಘದ ಕಾರ್ಯದರ್ಶಿ ಸತೀಶ್ ಹಾಗೂ ದಬ್ಬಗುಂಟೆ ರವಿಕುಮಾರ್ ಎಚ್ಚರಿಸಿದ್ದಾರೆ.
ಜಯಚಂದ್ರನಗರದ ಸ್ವಂತ ಜಮೀನಿನಲ್ಲಿ ದಾಳಿಂಬೆ ಬೆಳೆಯಲು ಮುಂದಾದ ಪ್ರಸಾದ್ ಹಾಗೂ ಪ್ರದೀಪ್ ಎಂಬುವವರಿಗೆ ಆಕ್ರಮ-ಸಕ್ರಮ ಯೋಜನೆಯಡಿ ದುಡ್ಡು ಕಟ್ಟಲು ತಿಳಿಸಿದ ಇಲಾಖೆ ಐದಾರು ತಿಂಗಳೊಳಗೆ ಆದ್ಯತೆ ಮೇರೆಗೆ ಟಿಸಿ ಕೊಡುವುದಾಗಿ ಹೇಳಿತ್ತು.ಅದರಂತೆ ೧೫ಸಾವಿರ ರೂಪಾಯಿ ಪಾವತಿ ಮಾಡಿಸಿಕೊಂಡಿದ್ದು ಸದ್ಯ ಕರೆಂಟ್ ಕೊಡಲು ಸಹ ಇಲ್ಲದ ಸಬೂಬು ಹೇಳಿಕೊಂಡು ತೋಟ ಒಣಗುವಂತೆ ಮಾಡಿದ್ದಾರೆ. ಜಮೀನಿನ ಪಕ್ಕದಲ್ಲೇ ಹತ್ತು ಮಾರು ದೂರದಲ್ಲೇ ಬಳಕೆಯಲಿಲ್ಲದ ಟ್ರಾನ್ಸ್ ಫಾರ್ಮರ್ ಇದ್ದರೂ ಸಹ ಅಲ್ಲಿಂದ ಸಂಪರ್ಕ ನೀಡಲು ಇಲ್ಲದ ತಕರಾರು ತೆಗೆಯುತ್ತಿದ್ದಾರೆ.ಈ ಬಗ್ಗೆ ಹಲವಾರು ಬಾರಿ ಸಹಾಯಕ ಅಭಿಯಂತರರನ್ನು ಸಂಪರ್ಕಿಸಿದರೂ ಸಹ ನೋಡೋಣ,ಮಾಡೋಣ ಎನ್ನುತ್ತಾರೆ ಹೊರತು ವಿದ್ಯುತ್ ನೀಡಲು ಮುಂದಾಗುತ್ತಿಲ್ಲ.
ನಿಯಮಾವಳಿಯಂತೆ ಹಣ ಪಾವತಿಸಿದ ಬಳಕೆದಾರರಿಗೆ ವಿದ್ಯುತ್ ಸಂಪರ್ಕ ಕೊಡಬೇಕಾಗಿದ್ದು . ಇದೀಗ ವಿದ್ಯುತ್ ನೀಡಲು ಅಸಾಧ್ಯ ಎನ್ನುತ್ತಿರುವುದು ಸೇವೆಯಲ್ಲಿನ ಲೋಪವಾಗಿದ್ದು ಈ ಬಗ್ಗೆ ಗಮನ ಹರಿಸದಿದ್ದಲ್ಲಿ ತಾಲ್ಲೂಕು ರೈತಸಂಘದಿಂದ ಪ್ರತಿಭಟನೆ ನಡೆಸಲಿರುವುದಾಗಿ ತಿಳಿಸಿದ್ದಾರೆ.
----------
ಆಕ್ರಮ ವಿದ್ಯುತ್ ಸಂಪರ್ಕದಾರರ ಬಗ್ಗೆ ಕಂಡುಕಾಣದಂತಿರುವ ಇಲಾಖೆ ಸಕ್ರಮ ಸಂಪರ್ಕ ಹೊಂದಿದವರಿಗೆ ಇಲ್ಲದ ತಕರಾರು ತೆಗೆಯುತ್ತಿರುವುದು ಖಂಡನೀಯ, ಸೆಕ್ಷನ್ ಅಫೀಸರ್ ಹಾಗೂ ಎಇಇ ಇದಕ್ಕೆ ನೇರಹೊಣೆಯಾಗಿದ್ದು ಕೂಡಲೇ ವಿದ್ಯುತ್ ಸಂಪರ್ಕ ನೀಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಬೆಳೆನಷ್ಟವನ್ನೂ ಭರಿಸಬೇಕಾಗುತ್ತದೆ: ದಬ್ಬಗುಂಟೆ ರವಿಕುಮಾರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ