ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರಿಗೆ ಬರುವ ಮಾರ್ಗ ಮಧ್ಯೆ ಸಾಲ್ಕಟ್ಟೆ ಕ್ರಾಸ್ ಹತ್ತಿರ ಬೈಕ್ ಗೆ ಕಾಡುಹಂದಿ ಅಡ್ಡಬಂದು ಉಂಟಾದ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಶಿಕ್ಷಕ ಸಾವನಪ್ಪಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.
ಚಂದ್ರಶೇಖರಯ್ಯ (೫೫) ಮೃತ ದುರ್ದೈವಿಯಾಗಿದ್ದು ಕಾರ್ಯನಿಮಿತ್ತ ಚಿ.ನಾ.ಹಳ್ಳಿಗೆ ಹೋಗಿ ಸಂಜೆ ವಾಪಸ್ಸ್ ಹುಳಿಯಾರಿಗೆ ಬರುವಾಗ ಈ ಘಟನೆ ಘಟಿಸಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈತ ಹುಳಿಯಾರು ಹೋಬಳಿ ಯಳನಡು ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹುಳಿಯಾರಿನಲ್ಲಿ ವಾಸವಿದ್ದರು. ಮೃತರು ಮಡದಿ ಹಾಗೂ ಒಬ್ಬಮಗನನ್ನು ಅಗಲಿದ್ದು, ಸ್ವಗ್ರಾಮ ಹಾಲುಗೊಣದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿತು. ಯಳನಡು ಶಾಲೆಯ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ