ಮಹಾನ್ ದಾರ್ಶನಿಕರಾದ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ತತ್ವಜ್ಞಾನಿಗಳ ದಿನಚಾರಣೆಯಾಗಿ ಸರ್ಕಾರಿ ಕಛೇರಿಗಳಲ್ಲಿ ರಜೆ ರಹಿತವಾಗಿ ಆಚರಿಸಬೇಕೆಂದು ತಾಲ್ಲೂಕ್ ವಿಪ್ರಹಿತರಕ್ಷಣ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಶ್ರೀಶಂಕರರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರು. ಆದ್ದರಿಂದಲೇ ಅದ್ವೈತದರ್ಶನವನ್ನು ಶಾಂಕರದರ್ಶನ ಎಂದು ಕರೆಯುತ್ತಾರೆ. ಪ್ರಾತಃಸ್ಮರಣೀಯರಾದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯಂದು ನಾವು ಆಚರಿಸಲಾಗುತ್ತದೆ.ವೇದಾಂತ ತತ್ವಕ್ಕೆ ಆದಿ ಶಂಕರರು ನೀಡಿದ ಕೊಡುಗೆ ಪರಿಗಣಿಸಿದ ರಾಜ್ಯ ಸರ್ಕಾರ ಈ ಹಿಂದೆಯೇ ಶ್ರೀ ಶಂಕರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ. 5-3-2003ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಕರ್ನಾಟಕ ಸರ್ಕಾರ ಘೋಷಿಸಿರುವ "ತತ್ವಜ್ಞಾನಿಗಳ ದಿನ "ವನ್ನು ಏಪ್ರಿಲ್ ೨೩ರ ಗುರುವಾರದಂದು ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನಂ ಅಡಿಯಲ್ಲಿ ಜಿಲ್ಲಾಡಳಿತವು, ಜಿಲ್ಲಾ ಕಛೇರಿ ಸೇರಿದಂತೆ ತಾಲ್ಲೂಕು ಕಚೇರಿ, ನಾಡಕಛೇರಿಗಳಲ್ಲಿ, ಗ್ರಾ.ಪಂ. ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಜೆ ರಹಿತವಾಗಿ ಆಚರಿಸಿ ತತ್ವಜ್ಞಾನಿಗಳ ಪರಿಚಯ ಮಾಡಿಕೊಡಬೇಕಿದೆ ಎಂದು ವಿಪ್ರಹಿತರಕ್ಷಣ ವೇದಿಕೆಯ ಅಧ್ಯಕ್ಷ ನರೇಂದ್ರಬಾಬು, ಕಾರ್ಯದರ್ಶಿ ಮಧುಸೂದನ್ ರಾವ್,ಹು.ಕೃ. ವಿಶ್ವನಾಥ್, ಸಿ.ಡಿ.ರವಿ, ಶೆಟ್ಟಿಕೆರೆ ವಿಶ್ವನಾಥ್ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ