ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು ಬಿಸಿಲ ಧಗೆಯನ್ನು ಕಡಿಮೆಮಾಡಿತು.
ಕಳೆದ ನಾಲ್ಕೈದು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿ ಜನ ಸೆಕೆಯಿಂದ ಬಳಲುವಂತಾಗಿದ್ದು ಮಧ್ಯಾಹ್ನದ ವೇಳೆಯಂತೂ ಬಿಸಿಲ ಝಳ ಹೆಚ್ಚಾಗಿ ರಸ್ತೆಯಲ್ಲಿ ಸಂಚರಿಸುವುದು ದುಸ್ಥರವಾಗಿತ್ತು. ಜನ ಇದೇನಪ್ಪಾ ಇಷ್ಟೋಂದು ಸೆಕೆ ಮಳೆಯಾದರೂ ಬರಬಾರದ ಎಂದು ಕನವರಿಸುತ್ತಿದ್ದರು. ರೈತರು ಈ ಹಿಂದೆ ಬಂದ ಮಳೆಗೆ ಮುಂಗಾರು ಬೆಳೆ ಹೆಸರು ಬಿತ್ತಿದ್ದರು ಆದರೆ ಮಳೆಬಾರದೆಯಿದ್ದು ಬಿಸಿಲು ಹೆಚ್ಚಾಗಿದ್ದರಿಂದ ಈ ಸಲ ಹೆಸರು ಹೋಯಿತು ಎನ್ನುವ ಪರಿಸ್ಥಿತಿ ಎದುರಾಗಿತ್ತು. ಇಂತಹ ಸನ್ನಿವೇಶದಲ್ಲಿ ಬುಧವಾರ ಬಂದ ಮಳೆ ರೈತರಲ್ಲಿ ತುಸು ಸಂಸತ ಉಂಟುಮಾಡಿದ್ದು ಚಿಗುರೊಡೆಯುವ ಹಂತದಲ್ಲಿದ್ದ ಹೆಸರಿಗೆ ಅನುಕೂಲ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ