ಹುಳಿಯಾರು ಸಮೀಪದ ಗೂಬೆಹಳ್ಳಿಯ ಶ್ರೀಕಣಿಮಮ್ಮದೇವಿಯ ಆರತಿಬಾನ ಮಹೋತ್ಸವ ತಾ.೧೩ರ ಸೋಮವಾರ ದಿಂದ ತಾ.೧೫ರಬುಧವಾರದವರೆಗೆ ನಡೆಯಲಿದೆ.
ತಾ.೧೩ರ ಸೋಮವಾರ ಬೆಳಿಗ್ಗೆ ಶ್ರೀವೀರಾಂಜನೇಯಸ್ವಾಮಿ ಹಾಗೂ ಕಣಿಮಮ್ಮ ದೇವಿಗೆ ಪುಣ್ಯಾರ್ಚನೆ,ಪಂಚಾಮೃತಾಭಿಷೇಕ, ಸಂಜೆ ನೂರೊಂದೆಡೆ ಸೇವೆ,ಮಹಾಮಂಗಳಾರತಿ ನಂತರ ಪ್ರಸಾದವಿನಿಯೋಗ ನಡೆಯಲಿದೆ. ತಾ.೧೪ರ ಮಂಗಳವಾರ ಸಂಜೆ ಆರತಿಬಾನ ಹಾಗೂ ದೇವಿಗೆ ಹೂವಿನ ಅಲಂಕಾರ,ಸಂಜೆ ದೇವಿಯ ಉತ್ಸವ ಹಾಗೂ ಮಂಜುಶ್ರೀ ಮೆಲೋಡಿಸ್ ಅವರಿಂದ ಆರ್ಕೆಸ್ಟ್ರಾ ನಡೆಯಲಿದೆ. ತಾ,೧೫ರ ಬುಧವಾರ ಬೆಳಿಗ್ಗೆ ಅಮ್ಮನವರ ಉತ್ಸವ ಹಾಗೂ ಆರತಿ ಕಳಸದೊಂದಿಗೆ ಮೂಲದೇವರ ದೇವಸ್ಥಾನಕ್ಕೆ ಬಿಜಯಂಗೈಯುವ ಕಾರ್ಯ ನಡೆಯಲಿದೆ. ಆರತಿಬಾನ ಕಾರ್ಯದ ಅಂಗವಾಗಿ ನವಚಿಂತನ ಯುವಕ ಸಂಘದಿಂದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ ಅಯೋಜಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ