ಹುಳಿಯಾರು ಪಟ್ಟಣದ ಹೃದಯ ಭಾಗದಲ್ಲಿರುವ ಎಂಪಿಎಸ್ ಶಾಲಾ ಆವರಣ ಆಕ್ರಮಚಟುವಟಿಕೆ ತಾಣವಾಗಿದ್ದು ಈ ಬಗ್ಗೆ ನಿಗಾವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಪೋಲೀಸ್ ಠಾಣೆ ಎದುರಿರುವ ವಿಶಾಲವಾದ ಶಾಲಾ ಮೈದಾನದಲ್ಲಿ ಪಟ್ಟಣದ ಅನೇಕ ಕಾರ್ಯಕ್ರಮಗಳ ವೇದಿಕೆಯಾಗಿ ಬಳಕೆಯಾಗುತ್ತದೆ. ಇದೇ ಮೈದಾನದಲ್ಲಿ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹ ಇದೆ. ಮುಂಜಾನೆ ಷಟಲ್ ಆಡುವವರು ,ವಾಕಿಂಗ್ ಮಾಡಲು ಬರುವವರು, ಸಂಜೆ ಕ್ರಿಕೆಟ್ ಆಡುವವರಿದ್ದು ಹೀಗೆ ಅನೇಕ ಕಾರ್ಯಚಟುವಟಿಕೆಗಳು ಸಾಗುತ್ತಿರುತ್ತವೆ. ಆದಾಗ್ಯೂ ಸಹ ಕಾಂಪೌಂಡ್ ಆವರಣದಲ್ಲಿ ಸಂಜೆ ನಂತರ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಪಾನಪ್ರಿಯರಿಗೆ ಇನ್ನಿತರ ಅನೈತಿಕ ಚಟುವಟಿಕೆಯವರಿಗೆ ಈ ಕತ್ತಲು ಪ್ರದೇಶ ಅನುಕೂಲವಾಗಿ ಬಳಕೆಯಾಗುತ್ತಿದೆ. ಸದ್ಯ ಸ್ಥಳೀಯ ಆಡಳಿತ ಬೆಳಕಿನ ವ್ಯವಸ್ಥೆ , ಕಾವಲು ವ್ಯವಸ್ಥೆ ಕಲ್ಪಿಸುವುದರ ಮುಖಾಂತರ ಇಂತಹ ಅಕ್ರಮ ಕಾರ್ಯಗಳಿಗೆ ಕಡಿವಾಣ ಹಾಕಲು ಮುಂದಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ