ಶ್ರೀಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ಕಲ್ಯಾಣ ಮಹೋತ್ಸವ ಸಮಿತಿ, ತಿರುಪತಿ -ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್ , ಪಟ್ಟಣದ ಸಮಸ್ತ ಭಜನಾ ಮಂಡಳಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ವಾಸವಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.
ಹುಳಿಯಾರಿನ ವಾಸವಿ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ಶ್ರೀನಿವಾಸನಿಗೆ ಪೂಜೆ ಸಲ್ಲಿಸಲಾಯಿತು. |
ಮುಂಜಾನೆ ಸುಪ್ರಭಾತ ಹಾಗೂ ಸಾಮೂಹಿಕ ಭಜನೆ ಮೂಲಕ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿತು. ಭಜನಾ ಮಂಡಳಿಗಳು ನಗರಸಂಕೀರ್ತನ ಕೈಗೊಂಡ ನಂತರ ಸ್ವಾಮಿಗೆ ತಿರುಮಂಜನಸೇವೆ, ತೋಮಾಲಾ ಸೇವೆ, ಪುಷ್ಪಯಾಗ ಸೇವೆ ಸಲ್ಲಿಸಿ ಮಹಾಮಂಗಳಾರತಿ ನಡೆಸಲಾಯಿತು. ಭಕ್ತಾಧಿಗಳಿಗೆ ಗಂಧ ಹಾಗೂ ದೇವರಿಗೆ ಅರ್ಪಿತ ಹೂವನ್ನು ಪ್ರಸಾದವಗಿ ವಿತರಿಸಲಾಯಿತು.ಹುಳಿಯಾರು ಸೇರಿದಂತೆ ತುರುವೇಕೆರೆ,ನೆಲಮಂಗಲ,ಚನ್ನಗಿರಿ, ಚಿ.ನಾ.ಹಳ್ಳಿ,ಚನ್ನರಾಯಪಟ್ಟಣ ಮುಂತಾದೆಡೆಯಿಂದ ಭಜನಾ ಮಂಡಳಿ ಸದಸ್ಯರು ಆಗಮಿಸಿದ್ದರು. ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದು ಗೋವಿಂದನಿಗೆ ನಮನ ಸಲ್ಲಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ