ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ (ತಾ.೭) ಮಂಗಳವಾರ ಆರತಿಬಾನ ಹಾಗೂ ಎಡೆಸೇವೆ ನಡೆಯಲಿದೆ.
ತಾ.೪ರ ಶನಿವಾರದಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆ ಪ್ರಾರಂಭವಾಗಿದ್ದು ತಾ.೬ರ ಸೋಮವಾರ ಅಮ್ಮನವರ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ನಡೆಯಿತು. ಮಂಗಳವಾರ ಹುಳಿಯಾರು,ಕೋಡಿಪಾಳ್ಯ, ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯ,ಕೇಶವಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಂದ ಅಮ್ಮನವರಿಗೆ ಆರತಿ ಹಾಗೂ ಬಾನ ಸೇವೆ ನಡೆಯಲಿದೆ.ತಾ.೮ರ ಬುಧವಾರ ದೇವರುಗಳ ಆಗಮನ ಹಾಗೂ ಕೂಡುಭೇಟಿ ನಡೆಯಲಿರುವುದಾಗಿ ಸಮಿತಿಯ ಹು.ಕೃ.ವಿಶ್ವನಾಥ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ