ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರ ಹಾಗೂ ಹೊರಕೆರೆ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಶಾಸ್ತ್ರೋಕ್ತವಾಗಿ ಮಧುವಣಗಿತ್ತಿ ಕಾರ್ಯ ನಡೆಸಲಾಯಿತು.
ಹುಳಿಯಾರು ಹೋಬಳಿ ಕೆಂಕೆರೆ ಕಾಳಮ್ಮದೇವಿಯನ್ನು ಮಧುವಣಗಿತ್ತಿಕಾರ್ಯದ ಅಂಗವಾಗಿ ವಿಳ್ಯೆದೆಲೆ ಮಂಟಪದಲ್ಲಿ ಅಲಂಕರಿಸಿರುವುದು. |
ಕಾಳಮ್ಮದೇವಿಯನ್ನು ದಮ್ಮಡಿಹಟ್ಟಿಗೆ ಕರೆದೊಯ್ದು ಈರಬೊಮ್ಮಕ್ಕದೇವಿಯೊಂದಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಿ ನಂತರ ಅಮ್ಮನವರನ್ನು ಮದುವಣಗಿತ್ತಿಯಂತೆ ಅಲಂಕರಿಸಿ ವಿಳ್ಯೆದೆಲೆಯಿಂದ ಮಾಡಿದ್ದ ಮಂಟಪದಲ್ಲಿ ಅಮ್ಮನವರನ್ನು ಕುಳ್ಳಿರಿಸಿ ಗ್ರಾಮಸ್ಥರೆಲ್ಲಾ ಸೇರಿ ಮಡಿಲಕ್ಕಿ ಹಾಕಿದರು. ನಂತರ ಅಮ್ಮನವರನ್ನು ಕೆಂಕೆರೆಗೆ ಕಳುಹಿಸಿಕೊಡುವ ಶಾಸ್ತ್ರ ಮಾಡಿ ಬೀಳ್ಕೊಟ್ಟರು. ಗ್ರಾಮದ ಶ್ರೀಕಾಳಿಕಾಂಬ ಭಜನಾ ಮಂಡಳಿಯ ಮಹಿಳೆಯರು ಭಜನೆ ನದೆಸಿಕೊಟ್ಟರು. ಗಜಣ್ಣ ಅವರ ಸೇವಾರ್ಥದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತು. ಈ ವೇಳೆ ಕುರಿಹಟ್ಟಿ,ದಮ್ಮಡಿಹಟ್ಟಿ,ಕಂಪನಹಳ್ಳಿ,ಕೆಂಕೆರೆಯ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು.
ಕಾಳಮ್ಮನ ನಡೆಮುಡಿ ಕಳಸ : ಇಂದು ಗುರುವಾರ ಅಮ್ಮನವರ ಪಟ್ಟದಕಳಸ ಮಹೋತ್ಸವ ನಡೆಯಲಿದೆ. ಮುಂಜಾನೆ ಗ್ರಾಮದ ಸಮೀಪದ ಸಿಹಿನೀರು ಬಾವಿಹತ್ತಿರಕ್ಕೆ ಕಾಳಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ,ಹುಳಿಯಾರು ದುರ್ಗಮ್ಮ ದೇವರನ್ನು ಕರೆದುಕೊಂಡು ಗಂಗಾಸ್ನಾನ ಹಾಗೂ ಪಟ್ಟದ ಕಳಸ ಸ್ಥಾಪನೆ ನಡೆಯಲಿದೆ. ನಂತರ ಭಕ್ತಾಧಿಗಳು ತಮ್ಮ ಹರಕೆಯಂತೆ ಹೆಣ್ಣುಮಕ್ಕಳಿಗೆ ಕಳಸ ಹೊರಿಸಿ ಬಾವಿ ಹತ್ತಿರದಿಂದ ಅಮ್ಮನವರ ಸಮೇತ ಸಕಲ ವಾದ್ಯಮೇಳದೊಂದಿಗೆ ನಡೆಮುಡಿಯಲ್ಲಿ ದೇವಾಲಯದಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುವ ಮೂಲಕ ಕಳಸಗಳ ವಿಸರ್ಜನೆ ನಡೆಯಲಿದೆ. ಇದೇ ದಿನ ಸಂಜೆ ಅಮ್ಮನವರ ಉಯ್ಯಾಲೋತ್ಸವ ಜರುಗಲಿದೆ.
ಶುಕ್ರವಾರ ಮಧ್ಯಾಹ್ನ ಸಿಡಿ ಕಾರ್ಯ ನಡೆಯಲಿದ್ದು, ಅಂಗವಾಗಿ ಕಾಳಮ್ಮ ದೇವಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ