ಹುಳಿಯಾರು ಪಟ್ಟಣದ ಶ್ರೀಗಣಪತಿ ದೇವಾಲಯ,ಬನಶಂಕರಿ ದೇವಾಲಯ,ಕನ್ನಿಕಾಪರಮೇಶ್ವರಿ ದೇವಾಲಯ ಹಾಗೂ ಬಳ್ಳೆಕಟ್ಟೆಯ ಗಣಪತಿ ದೇವಾಲಯದಲ್ಲಿ ಮಂಗಳವಾರ ಸಂಜೆ ಅಂಗಾರಕ ಸಂಕಷ್ಟಹರ ಚತುರ್ಥಿಯನ್ನು ಅಪಾರ ಸಂಖ್ಯೆಯ ಭಕ್ತಾಧಿಗಳು ಆಚರಿಸಿದರು.
ಮಂಗಳವಾರದಂದು ಅಂಗಾರಕ ಸಂಕಷ್ಟಹರ ಚತುರ್ಥಿ ಬಂದಿರುವುದು ವಿಶೇಷವಾಗಿದ್ದು ದೇವಾಲಯಗಳಿಗೆ ಹೆಚ್ಚು ಭಕ್ತಾಧಿಗಳು ಆಗಮಿಸಿ ಗಣೇಶನಿಗೆ ಮೋದಕ ಅರ್ಪಿಸಿ ಪೂಜಿಸುವ ಮೂಲಕ ಆಚರಿಸಿದರು. ಉಪವಾಸ ವ್ರತ ಹಿಡಿದಿದ್ದ ಮಹಿಳೆಯರು ಸಂಜೆ ವೇಳೆಗೆ ದೇವಾಲಯಕ್ಕೆ ಆಗಮಿಸಿ ಪೂಜಿಸುವ ಮೂಲಕ ತಮ್ಮ ವ್ರತವನ್ನು ಕೈಬಿಟ್ಟರು. ಪೂಜೆಯ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ