ಹುಳಿಯಾರುಸಮೀಪದ ಹೊಯ್ಸಳಕಟ್ಟೆ ಗ್ರಾ.ಪಂ.ಯ ನೀರು ವಿತರಕರಿಗೆ ಪಿಡಿಓ ನೀಡಿದ್ದ ಚೆಕ್ ಗೆ ಸಹಿ ಹಾಕದೆ ಸತಾಯಿಸಿ ಪ್ರತಿಭಟನೆಗೆ ಕಾರಣವಾಗಿದ್ದ ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ ಕಡೆಗೂ ಸಹಿ ಹಾಕುವ ಮೂಲಕ ವಿವಾದ ಅಂತ್ಯಗೊಂಡು ನೀರುವಿತರಕರು ಸಂಬಳ ಪಡೆಯುವಂತಾಯಿತು.
ನೀರು ವಿತರಕರ ವೇತನದ ಚೆಕ್ ಗೆ ಪಿಡಿಓ ಸಹಿ ಹಾಕಿ ಅಧ್ಯಕ್ಷರ ಸಹಿಗೆ ಕಳುಹಿಸಿದಾಗ ಸಹಿ ಹಾಕಲು ನಿರಾಕರಿಸಿದ್ದರಿಂದ ಮೂರು ದಿನಗಳ ಕಾಲ ಪ್ರತಿಭಟನೆ ನಡೆದಿದ್ದಲ್ಲದೆ ವಿವಾದ ಹುಳಿಯಾರು ಪೋಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೆಲವರ ಮಧ್ಯಸ್ಥಿಕೆಯಲ್ಲಿ ವಾದವಿವಾದ ನಡೆದು ಕಡೆಗೂ ಅಧ್ಯಕ್ಷೆ ಸಹಿ ಹಾಕುವುದರೊಂದಿಗೆ ನೀರುವಿತರಕರಿಗೆ ಕಳೆದ ಕೆಲವು ತಿಂಗಳುಗಳ ಸಂಬಳ ಕೈಸೇರುವಂತಾಯಿತು. ಪಂಚಾಯ್ತಿ ನೌಕರರು ತಾವು ಮಾಡಿದ ಕೆಲಸಕ್ಕೆ ವೇತನ ಪಡೆಯಲು ಪ್ರತಿಭಟನೆ ದಾರಿ ಹಿಡಿದಿದ್ದು ಪಂಚಾಯ್ತಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ