ಎಲ್ಲೆಡೆ ಬೇಸಿಗೆ ವ್ಯಾಪಿಸಿದ್ದು ನೀರು, ವಿದ್ಯುತ್ ಗೆ ಅಭಾವ ಉಂಟಾಗುತ್ತಿದ್ದರೂ ನೀರು ಹಾಗೂ ವಿದ್ಯುತ್ತನ್ನು ಮಿತವಾಗಿ ಬಳಕೆಮಾಡದೆ ಪಟ್ಟಣದಲ್ಲಿ ಇದಕ್ಕೆ ತದ್ವಿರುದ್ದವಾಗಿ ರಾತ್ರಿ ಹಾಕಿದ ಬೀದಿದೀಪಗಳು ಹಗಲೆಲ್ಲಾ ಬೆಳಗುತ್ತಿದ್ದರೂ ಸಹ ಈ ಬಗ್ಗೆ ಪಂಚಾಯ್ತಿಯವರು ನಿರ್ಲಕ್ಷ ತೋರಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಬಡಾವಣೆಗಳ ಕಳೆದೆರಡು ತಿಂಗಳಿಂದ ಬೀದಿಬದಿಯ ಲೈಟ್ ಕಂಬಗಳಲ್ಲಿ ಬೆಳಿಗ್ಗೆ ೯ರವರೆಗೂ ಉರಿಯುತ್ತಿದುವುದು ಮಾಮೂಲಾಗಿದೆ. ಈ ಬಗ್ಗೆ ಗ್ರಾ.ಪಂ.ಅಧಿಕಾರಿಗಳ ಗಮನಕ್ಕೆ ತಂದರೂ ನಿಗಾಮಾಡುತ್ತಿಲ್ಲ. ಸದ್ಯ ಬೇಸಿಗೆಯಾಗಿರುವುದರಿಂದ ಮುಂಜಾನೆ ೬ ಕ್ಕೆ ಬೆಳಕಾಗುತ್ತಿದ್ದು ೯ರ ವರೆಗೆ ಉರಿಯುವ ಬೀದಿ ದೀಪಗಳು ನೋಡುಗರ ನಗೆಪಾಟಲಿಗೆ ಕಾರಣವಾಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ