ಮಾನವನ ಜೀವನ ನೀರ ಮೇಲಿನ ಗುಳ್ಳೆಯಂತಿದ್ದು, ಜೀವನ ಬಂಡಿ ಸೂಕ್ಷ್ಮವಾಗಿ ಸಾಗಬೇಕಿದ್ದು, ಅದಕ್ಕೆ ನಮ್ಮ ಪೂರ್ವಿಕರು, ಯೋಗಿಗಳು ಹೇಳಿದ ಕೆಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ದಾವಣಗೆರೆ ಬಾಪೂಜಿ ದಂತ ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಎಲ್.ನಾಗೇಶ್ ತಿಳಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಾಸಾಫಿಕಲ್ ಸೊಸಟಿವತಿಯಿಂದ ಅಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ "ನಿತ್ಯಜೀವನಕ್ಕೆ ಅಗತ್ಯವಾದ ತತ್ವಗಳ ಅನುಷ್ಠಾನ" ವಿಷಯ ಕುರಿತು ಪ್ರಾಧ್ಯಾಪಕ ಡಾ.ಎಲ್.ನಾಗೇಶ್ ಉಪನ್ಯಾಸ ನೀಡಿದರು. |
ಹುಳಿಯಾರಿನ ಸನ್ಮಾರ್ಗ ಥಿಯಾಸಾಫಿಕಲ್ ಸೊಸಟಿವತಿಯಿಂದ ಬುಧವಾರ ಸಂಜೆ ಅಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು "ನಿತ್ಯಜೀವನಕ್ಕೆ ಅಗತ್ಯವಾದ ತತ್ವಗಳ ಅನುಷ್ಠಾನ" ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜೀವನವೇ ಒಂದು ಹೋರಾಟವಾಗಿದ್ದು ಪ್ರತಿ ನಿತ್ಯ ಒಂದಲ್ಲ ಒಂದು ಸಮಸ್ಯೆಯ ಜೊತೆ ಹೋರಾಟ ಮಾಡುತ್ತಾ ಇದರ ಜಂಜಾಟದಲ್ಲಿ ನಮ್ಮಗಳ ಜೀವನದಲ್ಲಿ ಸುಖ,ಶಾಂತಿ,ನೆಮ್ಮದಿ ದೊರೆಯದೆ ಜೀವನವೇ ನಿರರ್ಥಕವೆಂಬ ಮನೋಭಾವ ಜನರಲ್ಲಿ ಮೂಡುವಂತಾಗಿದೆ ಎಂದರು. ಇಂತಹ ಜಂಜಾಟಗಳಿಂದ ಹೊರಬರಬೇಕೆಂದರೆ ನಾವು ಮಾಡುತ್ತಿರುವ ಯಾಂತ್ರಿಕಜೀವನ ನಿರ್ವಹಣೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ತಮ್ಮದೇ ಆದ ಒಂದು ಯೋಜನೆಯೊಂದಿಗೆ ನಿತ್ಯದ ಕಾರ್ಯಗಳನ್ನು ಮಾಡುವುದರಿಂದ ಸುಖಶಾಂತಿ ಲಭಿಸುತ್ತದೆ ಎಂದರು.
ಸೊಸೈಟಿಯ ಅಧ್ಯಕ್ಷ ಗೋಪಾಲ್ ಅಧ್ಯಕ್ಷತೆವಹಿಸಿದ್ದು, ಶಿಕ್ಷಕ ಹೆಚ್.ಸಿ.ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸೊಸೈಟಿಯ ವಕೀಲ ಸತೀಶ್, ಗೋಪಾಲ್, ಸುದರ್ಶನಚಾರ್ ಸೇರಿದಂತೆ ಇತರರು ಆಗಮಿಸಿದ್ದ ಕಾರ್ಯಕ್ರಮದಲ್ಲಿ ಮಹೇಶ್ ಸ್ವಾಗತಿಸಿ,ನಿರೂಪಿಸಿ,ವಂಸಿದಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ