ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಲೋಕಮಾತೆ ಶ್ರೀಕಾಳಿಕಾಂಬ ದೇವಿ ಹಾಗೂ ಚನ್ನಬಸವೇಶ್ವರಸ್ವಾಮಿಯ ಜಾತ್ರಾಮಹೋತ್ಸವ ತಾ.೧೧ರ ಶನಿವಾರದಿಂದ ತಾ.೨೧ರ ಮಂಗಳವಾರದವರೆಗೆ ೧೧ ದಿನಗಳಕಾಲ ನಡೆಯಲಿದೆ.
ಶ್ರೀಕಾಳಿಕಾಂಬ ದೇವಿ ಹಾಗೂ ಚನ್ನಬಸವೇಶ್ವರಸ್ವಾಮಿ |
ತಾ.೧೧ರ ಶನಿವಾರ ಉಪ್ಪರಿಗಯ್ಯನ ಬಸಯ್ಯಅವರಿಂದ ಅಗ್ನಿಕುಂಡಸೇವೆ,ತಾ.೧೨ರ ಭಾನುವಾರ ಮಲ್ಲೇಶಪ್ಪನ ಚನ್ನಬಸವಯ್ಯಅವರಿಂದ ಅಗ್ನಿಕುಂಡಸೇವೆ,ತಾ.೧೩ರ ಸೋಮವಾರ ಕರೇಸಿದ್ದಯ್ಯನ ಚನ್ನವೀರಮ್ಮ ಅವರಿಂದ ಅಗ್ನಿಕುಂಡಸೇವೆ ನಡೆಯಲಿದೆ.ತಾ. ೧೪ರ ಮಂಗಳವಾರ ಕಂಕಣಧಾರಣೆ ಹಾಗೂ ಮದುವಣಗಿತ್ತಿ ಕಾರ್ಯಕ್ಕೆ ದಮಡಿಹಟ್ಟಿಗೆ ದಯಮಾಡಿಸುವುದು, ಅದೇ ದಿನ ಸಂಜೆ ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ,ಹುಳಿಯಾರು ದುರ್ಗಮ್ಮ ದೇವತೆಗಳ ಆಗಮನ ಹಾಗೂ ಕೂಡುಭೇಟಿ,ತಾ.೧೫ರ ಬುಧವಾರ ಮಡಿಲಕ್ಕಿ ಸೇವೆ, ತಾ.೧೬ರ ಗುರುವಾರ ಪಟ್ಟದ ಕಳಸ ಹಾಗೂ ಸಂಜೆ ಉಯ್ಯಾಲೋತ್ಸವ , ತಾ.೧೭ರ ಶುಕ್ರವಾರ ಬೆಳಿಗ್ಗೆ ಕಾಳಮ್ಮನ ಉತ್ಸವ ನಡೆದು ನಂತರ ಸಿಡಿ ಕಾರ್ಯ,ತಾ.೧೮ರ ಶನಿವಾರ ಓಕಳಿ ನಡೆಯಲಿದೆ.
ತಾ.೧೯ರ ಭಾನುವಾರ ಸುಕ್ಷೇತ್ರ ಪುರದಮಠದಕ್ಕೆ ಚನ್ನಬಸವೇಶ್ವರ ಸ್ವಾಮಿ ಹಾಗೂ ಕಾಳಮ್ಮನವರನ್ನು ಕರೆತರಲಾಗುವುದು,ತಾ.೨೦ರ ಸೋಮವಾರ ಪುರದಮಠದಲ್ಲಿ ಗಂಗಾಪ್ರವೇಶ,ಪ್ರಸಾದವಿನಿಯೋಗ, ತಾ. ೨೧ರ ಮಂಗಳವಾರ ಬಸವಜಯಂತಿಯಂದು ಬೆಳಿಗ್ಗೆ ರಥಕ್ಕೆ ಪುಣ್ಯಾಹ,ದಿಗ್ಬಲಿ,ಆರೋಹಣ,ಕಳಸಸ್ಥಾಪನೆ ನಡೆದು ಮಧ್ಯಾಹ್ನ ೧೨ಕ್ಕೆ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ಅದೇದಿನ ರಾತ್ರಿ ಶ್ರೀಚನ್ನಬಸವೇಶ್ವರ ಕೃಪಾಪೋಷಿತನಾಟಕ ಮಂಡಳಿವತಿಯಿಂದ ಶನಿಪ್ರಭಾವ ನಾಟಕಾಭಿನಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ