ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವಂತಹ ಕ್ರೀಡಾಕೂಟ ಹುಳಿಯಾರು ಪಟ್ಟಣದಲ್ಲಿ ಕಳೆದ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಇನ್ನೂ ಹತ್ತಾರೂ ಇತರೆ ಕ್ರೀಡೆಗಳು ನಡೆಯಲಿ ಎಂದು ತಾ.ಪಂ.ಸದಸ್ಯ ಕೆಂಕೆರೆ ನವೀನ್ ತಿಳಿಸಿದರು.
ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ಹುಳಿಯಾರು ಕ್ರಿಕೆಟ್ ಕ್ಲಬ್ ವತಿಯಿಂದ ಐಪಿಎಲ್ ಮಾದರಿಯಲ್ಲಿ ಅಯೋಜಿಸಿದ್ದ ಹೆಚ್.ಸಿ.ಎಲ್ ಸಿಸನ್ ೩ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮತನಾಡಿದರು.
ಹುಳಿಯಾರಿನಲ್ಲಿ ಒಂದುವಾರ ನಡೆಯುವ ಹೆಚ್.ಸಿ.ಎಲ್-೩ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯಲ್ಲಿ ತಾ.ಪಂ.ಸದಸ್ಯ ಕೆಂಕೆರೆ ನವೀನ್ ಮಾತನಾಡಿದರು. |
ಐಪಿಎಲ್ ನಂತೆ ಹೆಚ್.ಸಿ.ಎಲ್ ಅಯೋಜಿಸಿದ್ದು ರಾಜ್ಯದ ಯಾವುದೇ ಜಿಲ್ಲೆಯಲ್ಲಾಗಲಿ,ತಾಲ್ಲೂಕಿನಲ್ಲಾಗಲಿ ಈ ರೀತಿಯ ಟೂರ್ನಿಗಳು ನಡೆಯುತ್ತಿಲ್ಲ ಎಂದರು. ಹುಳಿಯಾರಿನಲ್ಲಿ ಜಾತ್ರೆ,ಉತ್ಸವಗಳು ವಿಜೃಂಭಣೆಯಿಂದ ನಡೆಯುವಂತೆ ಹೆಚ್.ಸಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳು ಸಹ ಉತ್ತಮವಾಗಿ ನಡೆಯುತ್ತಿದ್ದು, ಆಟಗಾರರು ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದಂತೆ ಕ್ರಿಕೆಟ್ ಆಡಿ ಎಂದು ತಿಳಿಸಿದರು. ಸೋಲು-ಗೆಲುವಿನ ಲೆಕ್ಕ ಹಾಕದೆ ತಮ್ಮಿಂದಾಗುವ ಉತ್ತಮ ಪ್ರದರ್ಶನ ನೀಡುವಂತೆ ಕ್ರಿಕೆಟ್ ತಂಡದವರಿಗೆ ಕಿವಿಮಾತು ಹೇಳಿದರು.
ಈ ವೇಳೆ ಪ್ರಾಂಚೆಸ್ಸಿಗಳಾದ ಗ್ರಾ.ಪಂ.ಸದಸ್ಯ ಧನುಷ್ ರಂಗನಾಥ್, ರೋಟರಿ ಅಧ್ಯಕ್ಷ ರವೀಶ್,ಬಾಳೆಕಾಯಿ ಮಂಜುನಾಥ, ಎಸ್ಆರ್.ಎಸ್.ದಯಾನಂದ್,ಏಜೆಂಟ್ ಕುಮಾರ್, ವಳಗೆರೆಹಳ್ಳಿ ಬಾಬಣ್ಣ, ಹಿರಿಯ ಕ್ರಿಕೆಟ್ ಆತಗಾರ ಶ್ರೀನಿವಾಸ್,ಪೋಲೀಸ್ ಇಲಾಖೆಯ ರಂಗನಾಥ್,ಹನುಂತರಾಜು,ಲೋಕೇಶ್, ಅಯೋಜಕ ಕುಮಾರ್, ಸೇರಿದಂತೆ ಭಜರಂಗಿ ಬಾಯ್ಸ್ ತಂಡದ ನಾಯಕ ವೆಂಕಟೇಶ್, ಸಾಮ್ರಾಟ್ ತಂಡ ನಾಯಕ ಓಡೆಯರ್, ಸ್ಮಾರ್ಟ್ ಅಚೀವರ್ಸ್ ತಂಡದ ನಾಯಕ ವಸೀಂ, ಜೈಹೋ ತಂಡದ ನಾಯಕ ಮೂಮಿನ್ ಖಾನ್, ಕದಂಬ ತಂಡದ ನಾಯಕ ರಂಗನಾಥ್, ಕಲ್ಪತರು ತಂಡದ ನಾಯಕ ಲಿಂಗರಾಜು,ರೆಡ್ ಸ್ಟಾರ್ ತಂಡದ ನಾಯಕ ಸುರೇಶ್ ಹಾಗೂ ಸಹ ಆಟಗಾರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ